ಬೆಂಗಳೂರು: ಬಹುಕೋಟಿ ರೂ.ವಂಚನೆ ಪ್ರಕರಣದ ಆರೋಪಿ ಐಎಂಎ ಸಂಸ್ಥೆಯ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಹೆಡೆಮುರಿಕಟ್ಟಲು ಶೀಘ್ರದಲ್ಲೇ ರಾಜ್ಯ ವಿಶೇಷ ತನಿಖಾ ತಂಡವು ದುಬೈಗೆ ಹಾರಲಿದೆ.
ಮನ್ಸೂರ್ ಹೆಡೆಮುರಿಕಟ್ಟಲು ಎಸ್ಐಟಿ ಸಜ್ಜು: ಶೀಘ್ರದಲ್ಲೆ ದುಬೈಗೆ ಎಸ್ಐಟಿ ತಂಡ -
ಬಹುಕೋಟಿ ರೂ.ವಂಚನೆ ಪ್ರಕರಣದ ಆರೋಪಿ ಐಎಂಎ ಸಂಸ್ಥೆಯ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಹೆಡೆಮುರಿಕಟ್ಟಲು ಶೀಘ್ರದಲ್ಲೇ ರಾಜ್ಯ ವಿಶೇಷ ತನಿಖಾ ತಂಡವು ದುಬೈಗೆ ಹಾರಲಿದೆ.
ಈಗಾಗಲೇ ಮನ್ಸೂರ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ ಪರಿಣಾಮ ದುಬೈ ಬಿಟ್ಟು ಬೇರೆ ದೇಶಗಳಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದಲ್ಲದೆ, ದುಬೈನಲ್ಲಿ ನೆಲೆಯೂರಿರುವ ಖಚಿತ ಮಾಹಿತಿ ಮೇರೆಗೆ ದುಬೈಗೆ ತೆರಳಲು ಪಾಸ್ ಪೋರ್ಟ್, ವೀಸಾ ರೆಡಿ ಮಾಡಿಕೊಂಡು ಸಜ್ಜಾಗಿರಿ ಎಂದು ಅಧಿಕಾರಿಗಳಿಗೆ ಎಸ್ಐಟಿ ಮುಖ್ಯಸ್ಥ ರವಿಕಾಂತೇಗೌಡ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಐಎಂಎ ಗ್ರೂಪ್ಗೆ ಸೇರಿದ ಎಲ್ಲಾ ಪ್ರಾಪರ್ಟಿಗಳ ಮೇಲೆ ರೈಡ್ ಮಾಡಿ ಆಸ್ತಿಗಳನ್ನು ಜಪ್ತಿ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಜಾರಿ ನಿರ್ದೇಶಾಲಯ ಸಹ ಮನ್ಸೂರ್ಗೆ ಸೇರಿದ ವಿವಿಧ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿ ತನಿಖೆ ಚುರುಕುಗೊಳಿಸಿವೆ.