ಬೆಂಗಳೂರು:ಐಎಂಎ ಜ್ಯುವೆಲ್ಲರಿಯ ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಐಎಂಎ ಗೋಲ್ಡ್ ಕಚೇರಿಯ ಎರಡನೇ ಮಹಡಿ ಜ್ಯುವೆಲ್ಲರಿ ಓಪನ್ ಮಾಡಿ ಎಸ್ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಐಎಂಎ ಮತ್ತೊಂದು ಕಚೇರಿ ಮೇಲೆ ಎಸ್ಐಟಿ ದಾಳಿ - undefined
ಐಎಂಎ ಜ್ಯುವೆಲ್ಲರಿಯ ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಅನುಮತಿ ಪಡೆದು ಐಎಂಎ ಮತ್ತೊಂದು ಕಚೇರಿಯ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
![ಐಎಂಎ ಮತ್ತೊಂದು ಕಚೇರಿ ಮೇಲೆ ಎಸ್ಐಟಿ ದಾಳಿ](https://etvbharatimages.akamaized.net/etvbharat/prod-images/768-512-3645441-thumbnail-3x2-chai.jpg)
ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿ ಐಎಂಎ ಗೋಲ್ಡ್ ಪ್ರಮುಖ ಕಚೇರಿ ಇದ್ದು, ಕಚೇರಿಯ ಎರಡನೇ ಮಹಡಿಯಲ್ಲಿ ಸಾರ್ವಜನಿಕರು ಚಿನ್ನ ಅಡವಿಟ್ಟು ಲೋನ್ ಪಡೆಯುತ್ತಿದ್ರು, ಹೀಗಾಗಿ ಐಎಂಎ ಗೋಲ್ಡ್ ಲೋನ್, ಹಳೆ ಚಿನ್ನಾಭರಣ, ಚಿನ್ನಾಭರಣಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರ ,ವಜ್ರದ ಆಭರಣಗಳು ಸಿಗುವ ನಿರೀಕ್ಷೆ ಇದ್ದು ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಎಸಿಪಿ ಬಾಲರಾಜ್ ನೇತೃತ್ವದ ತಂಡ ಐಎಂಎ ಗೋಲ್ಡ್ ಪರಿಶೀಲನೆ ನಡೆಸಲಿದ್ದಾರೆ.
ಈಗಾಗಲೇ ಭಾನುವಾರ ಮನ್ಸೂರ್ ವಿಡಿಯೋ ಬಿಡುಗಡೆ ಮಾಡಿದ್ದು, ಆ ವಿಡಿಯೋದಲ್ಲಿ ಅತೀ ಹೆಚ್ಚು ಚಿನ್ನ ಇರುವ ಸ್ಥಳ ಐಎಂಎ ಮಳಿಗೆ ಎಂದು ಮನ್ಸೂರ್ ಹೇಳಿದ್ದ. ಹೀಗಾಗಿ ಚಿನ್ನ ಪರಿಶೋಧಕರು ಹಾಗೂ ಲೆಕ್ಕ ಪರಿಶೋಧಕರು, ತಹಶೀಲ್ದಾರ್, ರೆವಿನ್ಯೂ ಇನ್ಸ್ಪೆಕ್ಟರ್ , ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಹಾಗೇ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ರೀತಿ ಸ್ಥಳೀಯ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.