ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಅರೋಪಿ ಶ್ರವಣ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ವಿಶೇಷ ತನಿಖಾ ತಂಡ (ಎಸ್ಐಟಿ)ದಿಂದ ಸಿ.ಆರ್.ಪಿ. ಸಿ 41ಎ ಅಡಿಯಲ್ಲಿ ಎಸಿಪಿ ಧರ್ಮೇಂದ್ರ ನೋಟೀಸ್ ನೀಡಿದ್ದಾರೆ.
ಇಂದು ಬೆಳಗ್ಗೆ ಹನ್ನೊಂದು ಗಂಟೆಗೆ ಆಡುಗೋಡಿ ಟೆಕ್ನಿಕಲ್ ಸೆಂಟರ್ನಲ್ಲಿ ಎಸ್ಐಟಿ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಇಂದು ಮೂರನೆಯ ಬಾರಿಗೆ ಶ್ರವಣ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಹೈಕೋರ್ಟ್‌ಗೆ ತನಿಖಾ ವರದಿ: ಸಿಡಿ ಪ್ರಕರಣದ ತನಿಖಾ ವರದಿಯನ್ನು ಎಸ್ಐಟಿ ಇಂದು ಹೈಕೋರ್ಟ್‌ಗೆ ಸಲ್ಲಿಸಲಿದೆ. ಮೂರು ಪ್ರಕರಣಗಳ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ ಸಿಡಿ ಪ್ರಕರಣದ ರಹಸ್ಯ ಹೈಕೋರ್ಟ್‌ಗೆ ನೀಡಲಿದೆ. ಕಳೆದ ಬಾರಿ ಎಸ್ಐಟಿ ಮುಖ್ಯಸ್ಥರ ಸಹಿ ಇಲ್ಲದ ಕಾರಣ ಹೈಕೋರ್ಟ್ ವರದಿಯನ್ನು ರಿಜೆಕ್ಟ್ ಮಾಡಿತ್ತು. ಎಸ್ಐಟಿ ಮುಖ್ಯಸ್ಥರ ಸಹಿಯೊಂದಿಗೆ ವರದಿ ಸಲ್ಲಿಸಲು ಸೂಚನೆ ನೀಡಿತ್ತು.
ಜೂನ್ 17 ರಂದು ತನಿಖಾ ವರದಿ ಸಲ್ಲಿಸುವಂತೆ ಎಸ್ಐಟಿಗೆ ಹೈಕೋರ್ಟ್ ಸೂಚಿಸಿತ್ತು. ಸಿಡಿ ಪ್ರಕರಣದ ಆರೋಪಿಗಳ ರಹಸ್ಯ ಕೂಡ ವರದಿಯಲ್ಲಿದೆ. ಕಬ್ಬನ್ ಪಾರ್ಕ್, ಸದಾಶಿವನಗರ, ಆರ್.ಟಿ ನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕೇಸ್ಗಳ ಈವರೆಗಿನ ಮಾಹಿತಿಯನ್ನು ಪೊಲೀಸರು ಕೋರ್ಟ್ಗೆ ಸಲ್ಲಿಸಲಿದ್ದಾರೆ.
ಇದನ್ನೂಓದಿ: ಎಸ್ಐಟಿ ಎದುರು ನರೇಶ್ಗೌಡ ಹಾಗೂ ಶ್ರವಣ್ ಪ್ರತ್ಯಕ್ಷ: ಸಿಡಿ ಕೇಸ್ ಕಿಂಗ್ಪಿನ್ಗಳು ಹೇಳಿದ್ದಿಷ್ಟು..!