ಕರ್ನಾಟಕ

karnataka

ETV Bharat / state

ಸಿಡಿ ಪ್ರಕರಣದ ಎಸ್ಐಟಿ ತನಿಖೆ ಯಾವ ರೀತಿ ನಡೆಯುತ್ತೆ ಗೊತ್ತಾ? - ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಫ್ಐಆರ್ ದಾಖಲಾಗದಿದ್ದರೂ ಎಸ್ಐಟಿ ರಚನೆಯಾಗಿದೆ‌. ಹೀಗೆ ರಚನೆಯಾಗಿರುವ ವಿಶೇಷ ತನಿಖಾ ತಂಡ ಕಬ್ಬನ್ ಪಾರ್ಕ್ ಪೊಲೀಸರಿಂದ ಇದುವರೆಗೆ ಮಾಡಿದ ತನಿಖೆಯ ವರದಿ ಪಡೆಯಲಿದೆ. ಅಗತ್ಯಬಿದ್ದರೆ ದೂರುದಾರ ದಿನೇಶ್ ಕಲ್ಲಹಳ್ಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ‌. ಅಲ್ಲದೇ ತನಿಖೆ ವೇಳೆ ಪ್ರಕರಣಕ್ಕೆ ಸಂಬಂಧಿತರಿಗೆ ನೋಟಿಸ್​ ನೀಡಲಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ

By

Published : Mar 11, 2021, 3:46 PM IST

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಪ್ರಕರಣದ ಸಂಬಂಧ‌ ತನಿಖೆ ನಡೆಸಿ ವರದಿ ನೀಡುವಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್ಐಟಿ ತಂಡ ರಚನೆಯಾಗಲಿದೆ. ನಾಳೆಯೊಳಗೆ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಟೀಮ್ ರಚನೆ ಮಾಡಿ ತನಿಖೆ ಕೈಗೊಳ್ಳಲಿದೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಫ್ಐಆರ್ ದಾಖಲಾಗದಿದ್ದರೂ ಎಸ್ಐಟಿ ರಚನೆಯಾಗಿದೆ‌. ಮೊದಲು, ಎಸ್ಐಟಿ ತಂಡವು ಕಬ್ಬನ್ ಪಾರ್ಕ್ ಪೊಲೀಸರಿಂದ ಇದುವರೆಗೆ ಮಾಡಿದ ತನಿಖಾ ವರದಿ ಪಡೆಯಲಿದೆ. ನಂತರ ಅಗತ್ಯಬಿದ್ದರೆ ದೂರುದಾರ ದಿನೇಶ್ ಕಲ್ಲಹಳ್ಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ‌. ಜೊತೆಗೆ ತನಿಖೆ ವೇಳೆ ಪ್ರಕರಣ ಸಂಬಂಧಿತರಿಗೆ ನೋಟಿಸ್​ ನೀಡಲಿದೆ.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ: ಇಂದು ಅಥವಾ ನಾಳೆ ಎಸ್​ಐಟಿ ತಂಡ ರಚನೆ!

ಕೇಸ್​ನಲ್ಲಿ ಯಾರದ್ದಾದರೂ ಕೈವಾಡ ಇರುವುದು ಕಂಡುಬಂದರೆ ಆ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಎಸ್​ಐಟಿ ಕಲೆ ಹಾಕಲಿದೆ‌. ಲಭ್ಯವಾಗುವ ಸಾಕ್ಷ್ಯಾಧಾರದ ಆಧಾರದ ಮೇಲೆ ಸಂಬಂಧಿತ ವ್ಯಕ್ತಿಗಳಿಗೆ ಕಾನೂನುಪ್ರಕಾರ ನೋಟಿಸ್ ನೀಡಿ ವಿಚಾರಣೆ ನಡೆಸಲಿದೆ‌. ಸರ್ಕಾರಕ್ಕೆ ಸಲ್ಲಿಕೆಯಾಗುವ ಅಂತಿಮ ವರದಿಯಲ್ಲಿ ಪ್ರಕರಣದ ಸಂಬಂಧ ಸಾಕ್ಷ್ಯಾಧಾರ ಪತ್ತೆಯಾದರೆ ಎಫ್​ಐಆರ್ ಹಾಕಲು ಸೂಕ್ತ ಎಂದು ಎಸ್ಐಟಿ ವರದಿ ನೀಡುವ ಸಾಧ್ಯತೆಯಿದೆ.

ಇದರ ಆಧಾರದ ಮೇಲೆ ಸರ್ಕಾರದ ಸೂಚನೆ ಮೇರಗೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ‌ಆರಂಭಿಸಲಿದೆ. ಕಾನೂನು ಪ್ರಕಾರ ಯಾರನ್ನಾದರೂ ಬಂಧಿಸಬೇಕಾದರೆ ಮೊದಲು ಎಫ್​ಐಆರ್ ದಾಖಲಿಸಬೇಕು. ಇದರ ಆಧಾರದ ಮೇಲೆ ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಲು ಅವಕಾಶವಿದೆ‌‌.

ABOUT THE AUTHOR

...view details