ಕರ್ನಾಟಕ

karnataka

ETV Bharat / state

ಶ್ರೀರಂಗನಾಥ ಸ್ವಾಮಿ ದೇವಾಲಯದ ಜಮೀನು ದುರುಪಯೋಗ ಪ್ರಕರಣ ಎಸ್ಐಟಿ ತನಿಖೆಗೆ

ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಹೆಸರಿನಲ್ಲಿನ ಜಮೀನು ದುರುಪಯೋಗವಾಗಿರುವುದು ನಿಜ. ಯಾರನ್ನೋ ಶ್ರೀಮಂತರನ್ನಾಗಿ ಮಾಡಲು ಅನೇಕ ‌ಷಡ್ಯಂತ್ರ ನಡೆದಿದೆ. ಈ ಕುರಿತು ತನಿಖೆ ನಡೆಯಬೇಕಿದೆ. ಕಂದಾಯ ಇಲಾಖೆ ಕಾರ್ಯದರ್ಶಿಗಳಿಂದ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಕಲಾಪ
ಕಲಾಪ

By

Published : Mar 23, 2022, 2:45 PM IST

ಬೆಂಗಳೂರು: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶ್ರೀ ರಂಗನಾಥಸ್ವಾಮಿ ದೇವಾಲಯದ ದೇವರಿಗೆ ದಾನ ಉಂಬಳಿ ರೂಪದಲ್ಲಿ ನೀಡಿರುವ ಜಮೀನನ್ನು ಮತ್ತೊಮ್ಮೆ ಬೇರೆಯವರಿಗೆ ದಾನ ಕೊಡಲಾಗಿದೆ. ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸುವುದಾಗಿ ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಈ ಕುರಿತು ಸರ್ಕಾರವನ್ನು ಪ್ರಶ್ನಿಸಿದರು.

ಒಮ್ಮೆ ದಾನ ಕೊಟ್ಟ ಜಮೀನನ್ನು ಮತ್ತೊಮ್ಮೆ ದಾನ ಕೊಟ್ಟಿದ್ದು ಯಾಕೆ?, ಅವಕಾಶ ನೀಡಿದ ಆ ಅಧಿಕಾರಿ ಯಾರು?, ದಾನ ಮಾಡಿದ್ದ ಜಮೀನನ್ನು ಬೇರೆಯವರಿಗೆ ಕೊಟ್ಟಿದ್ದಾರೆ. ಈಗ ಪಹಣಿಯಲ್ಲಿ 155 ಎಕರೆ ಜಾಗ ರಂಗನಾಥಸ್ವಾಮಿ ‌ದೇವಸ್ಥಾನದ ಹೆಸರಿನಲ್ಲಿದ್ದರೂ ಕೂಡ ಬೇರೆಯವರಿಗೆ ದಾನ ಮಾಡಿದ್ದಾರೆ. ಹಿಂದೆ ದಾನಿಗಳು ಆ ಜಾಗದ ಉತ್ಪನ್ನಗಳ ಒಂದು ಭಾಗ ದೇವಾಲಯಕ್ಕೆ ಹಾಗೂ ಮೂರು ಭಾಗ ಮೈಸೂರಿನ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ ವಿನಿಯೋಗಿಸಿ ಎಂದು ಹೇಳಿದ್ದರು.

ಆದರೆ, ಈಗ ಅಧಿಕಾರಿಗಳು ಇನಾಂ ಜಾಗ ಎಂದು ಪರಿಗಣಿಸಿ ತಮಗೆ ಬೇಕಾದ ರೀತಿ ದಾಖಲೆ ತಿರುಚಿ ಮಾರಾಟ ಮಾಡಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವ ವಿ.ಸೋಮಣ್ಣ, ದ್ವಾರಕಾಬಾಯಿ ವೇದಾಂತಂ ಎನ್ನುವವರು ಬ್ಯಾಲಾಳು, ಚೋಳನಾಯಕನಹಳ್ಳಿ, ದೊಡ್ಡಮಾರನಹಳ್ಳಿ, ಕಾಡುಕರೇನಹಳ್ಳಿ, ಪೆದ್ದನಪಾಳ್ಯ ಗ್ರಾಮಗಳಲ್ಲಿ 1,198 ಎಕರೆ ಜಾಗವನ್ನು ದಾನ ನೀಡಿದ್ದರು. ದೇವಸ್ಥಾನದ ಹೆಸರಿನಲ್ಲಿನ ಈ ಜಮೀನು ದುರುಪಯೋಗವಾಗಿರಯವುದು ನಿಜ. ಯಾರನ್ನೋ ಶ್ರೀಮಂತರನ್ನಾಗಿ ಮಾಡಲು ಅನೇಕ ‌ಷಡ್ಯಂತ್ರ ನಡೆದಿದೆ.

ಈ ಕುರಿತು ತನಿಖೆ ನಡೆಯಬೇಕಿದೆ. ಕಂದಾಯ ಇಲಾಖೆ ಕಾರ್ಯದರ್ಶಿಗಳಿಂದ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಪ್ರಕರಣವನ್ನ ಎಸ್ಐಟಿಗೆ ಕೊಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತೇವೆ: ವಿಪಕ್ಷ ನಾಯಕ ಸಿದ್ದರಾಮಯ್ಯ

ABOUT THE AUTHOR

...view details