ಬೆಂಗಳೂರು: ಸಿಡಿ ಪ್ರಕರಣದ ಯುವತಿಯಿಂದ ಮೂರನೇ ವಿಡಿಯೋ ರಿಲೀಸ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು, ನಾನು ಮೀಟಿಂಗ್ನಲ್ಲಿದ್ದೆ, ಹಾಗಾಗಿ ವಿಡಿಯೋ ಬಗ್ಗೆ ಗೊತ್ತಾಗಲಿಲ್ಲ ಎಂದಿದ್ದಾರೆ.
ವಕೀಲರ ಮೂಲಕ ಯುವತಿ ದೂರು ಸಲ್ಲಿಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ದೂರು ಕೊಡಲಿ, ಕಾನೂನಾತ್ಮಕವಾಗಿ ಎಸ್ಐಟಿ ಪರಿಶೀಲಿಸುತ್ತದೆ. ಯಾರೇ ದೂರು ನೀಡಿದರೂ ಎಸ್ಐಟಿ ತಂಡ ನೋಡಿಕೊಳ್ಳುತ್ತದೆ ಎಂದಿದ್ದಾರೆ.