ಕರ್ನಾಟಕ

karnataka

ETV Bharat / state

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ: ಯುವತಿ ರಕ್ಷಣೆಗೆ 8 ಸದಸ್ಯರ ತಂಡ ರಚನೆ

ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾಗ್ತಿರುವ ಯುವತಿಗೆ ರಕ್ಷಣೆ ನೀಡುವ ಸಲುವಾಗಿ ಎಸ್​ಐಟಿ 8 ಸದಸ್ಯರ ವಿಶೇಷ ತಂಡವನ್ನು ರಚಿಸಿದೆ.

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ
ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ

By

Published : Mar 29, 2021, 7:19 PM IST

ಬೆಂಗಳೂರು:ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾಗ್ತಿರುವ ಯುವತಿಗೆ ರಕ್ಷಣೆ ನೀಡಲು ಎಸ್​ಐಟಿ 8 ಸದಸ್ಯರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದೆ.

ಯುವತಿಗೆ ರಮೇಶ್​ ಜಾರಕಿಹೊಳಿ ಅವರಿಂದ ಬೆದರಿಕೆ ಇದೆ ಎಂಬ ಆರೋಪ ಹಿನ್ನೆಲೆ ಎಸ್​ಐಟಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗ್ತಿದೆ.

ಓದಿ:ಕೋರ್ಟ್‌ ಯಾವಾಗ ಹೇಳುತ್ತೋ ಆಗ ಯುವತಿ ಹೇಳಿಕೆ ನೀಡಲು ಬರ್ತಾರೆ.. ವಕೀಲ ಜಗದೀಶ್

ಈಗಾಗಲೇ ಯುವತಿ ಹೇಳಿಕೆ ನೀಡಲು ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ನೀಡಿದ್ದು, ಯಾವಾಗ ಹಾಜರುಪಡಿಸಬೇಕು ಎಂಬುದು ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ನ್ಯಾಯಾಲಯ ಯಾವಾಗ ಬೇಕಾದರೂ ಹಾಜರು ಪಡಿಸಲು ಹೇಳಿದ್ರೂ, ನಾವು ಸಿದ್ಧ. ಯುವತಿಗೆ ಎಲ್ಲಿಂದ ಭದ್ರತೆ ಬೇಕು ಎಂಬುದರ ಬಗ್ಗೆ ಎಸ್​ಐಟಿಗೆ ಮಾಹಿತಿ ನೀಡಲಾಗುವುದು ಎಂದು ಯುವತಿ ಪರ ವಕೀಲರಾದ ಜಗದೀಶ್​ ತಿಳಿಸಿದ್ದಾರೆ.

ಎಸ್​ಐಟಿ ಮುಂದೆ ರಮೇಶ್ ಜಾರಕಿಹೊಳಿ​ ಹಾಜರು:

ಸಿಡಿ ಯುವತಿ ನೀಡಿದ ದೂರಿನ ಅನ್ವಯ ಇಂದು ಬೆಳಗ್ಗೆ ಆಡುಗೋಡಿಯಲ್ಲಿರುವ ಎಸ್‌ಐಟಿ ಟೆಕ್ನಿಕಲ್ ಸೆಂಟರ್​ಗೆ ರಮೇಶ್​ ಜಾರಕಿಹೊಳಿ ವಿಚಾರಣೆಗೆ ಹಾಜರಾಗಿ, ಸುಮಾರು 5 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ರಮೇಶ್​ ಜಾರಕಿಹೊಳಿ ವಿರುದ್ಧ ಕೇಸ್​ ದಾಖಲಾಗಿರುವ ಹಿನ್ನೆಲೆ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ಚಿಂತನೆ ನಡೆಸಿದ್ದಾರೆ‌ ಎಂಬ ಮಾಹಿತಿಯೂ ಲಭ್ಯವಾಗಿದೆ.

ಓದಿ:ಎಸ್‌ಐಟಿ ವಿಚಾರಣೆಗೆ ಹಾಜರಾದ ರಮೇಶ್ ಜಾರಕಿಹೊಳಿ ; ನಿರೀಕ್ಷಣಾ ಜಾಮೀನು ಅರ್ಜಿಗೆ ಚಿಂತನೆ?

ABOUT THE AUTHOR

...view details