ಕರ್ನಾಟಕ

karnataka

ETV Bharat / state

ಸಿಡಿ ಕೇಸ್​​​: ನರೇಶ್ ಗೌಡ, ಶ್ರವಣ್ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ ಎಸ್ಐಟಿ - Naresh Gowda

ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ತರ ತಿರುವು ಸಿಕ್ಕಿದ್ದು, ಎಸ್‌ಐಟಿ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ವಿಷಯ ಬಹಿರಂಗವಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ನರೇಶ್‌ ಗೌಡ, ಶ್ರವಣ್ ನಿರೀಕ್ಷಣಾ ಜಾಮೀನಿಗೆ ಎಸ್‌ಐಟಿ ಪೊಲೀಸರಿಂದ ಆಕ್ಷೇಪಣೆ ಸಲ್ಲಿಕೆಯಾಗಿದೆ.

SIT files objection to Naresh Gowda, Shravan bail
ನರೇಶ್ ಗೌಡ, ಶ್ರವಣ್ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ ಎಸ್ಐಟಿ

By

Published : Jun 2, 2021, 6:00 PM IST

ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಆಕ್ಷೇಪಣೆ ಸಲ್ಲಿಸಿದ್ದು, ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ತನಿಖೆಗೆ ಅಡ್ಡಿಯಾಗಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

ಸಿಡಿ ವಿಚಾರವಾಗಿ ಸಚಿವ ರಮೇಶ್ ಜಾರಕಿಹೊಳಿಗೆ ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂದು ಆರೋಪಿಸಿ ಅವರ ಅಪ್ತ ನಾಗರಾಜ್ ಎಂಬವರು ದಾಖಲಿಸಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನರೇಶ್ ಗೌಡ ಹಾಗೂ ಶ್ರವಣ್ ಸಲ್ಲಿಸಿರುವ ಅರ್ಜಿಗೆ ಇಂದು ಎಸ್ಐಟಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.

ಎಸ್ಐಟಿ ಆಕ್ಷೇಪಣೆ ವಿವರ: ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಯಂತೆ, ಅವರಿಂದ ಸಿಡಿ ಗ್ಯಾಂಗ್ ಹಣ ವಸೂಲಿ ಮಾಡಿದೆ. ರಮೇಶ್ ಜೊತೆ ಪ್ರಚೋದನಕಾರಿ ರೀತಿಯಲ್ಲಿ ಮಾತನಾಡಲು ಗ್ಯಾಂಗ್ ಯುವತಿಗೆ ಸೂಚಿಸಿದೆ. ಮೊಬೈಲ್, ವಾಟ್ಸ್ಆ್ಯಪ್, ವಿಡಿಯೋ ಕಾಲ್‌ ಮೂಲಕವೂ ಸಂಪರ್ಕಿಸಲು ತಿಳಿಸಿದ್ದಾರೆ. ಸುಲಿಗೆ, ಬ್ಲಾಕ್​ಮೇಲ್ ಉದ್ದೇಶದಿಂದಲೇ ಲೈಂಗಿಕ ಸಂಪರ್ಕವೂ ನಡೆದಿದೆ. ಸಿಡಿ ಗ್ಯಾಂಗ್ ಸದಸ್ಯರು ಹನಿಟ್ರ್ಯಾಪ್​ ಮಾಡಿ ಹಲವು ಬಾರಿ ಹಣ ಪಡೆದಿದ್ದಾರೆ ಎಂದು ಎಸ್ಐಟಿ ಆರೋಪಿಸಿದೆ. ಇದಕ್ಕೆ ಪೂರಕವಾಗಿ ಮಾಜಿ ಶಾಸಕ ಎಂ.ವಿ ನಾಗರಾಜ್ ಕೂಡ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಇದುವರೆಗೂ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಗಳಾದ ಶ್ರವಣ್ ಹಾಗೂ ನರೇಶ್‌ ಗೌಡಗೆ ನಿರೀಕ್ಷಣಾ ಜಾಮೀನು ನೀಡಿದರೆ, ತನಿಖೆಗೆ ಅಡ್ಡಿಯಾಗಲಿದೆ ಎಂದು ಎಸ್‌ಐಟಿ ತಿಳಿಸಿದೆ.

ಹಾಗೆಯೇ, ಆರೋಪಿಗಳು ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವ ಅನುಮಾನವನ್ನೂ ಎಸ್ಐಟಿ ವ್ಯಕ್ತಪಡಿಸಿದೆ. ಆರೋಪಿಗಳು ತಲೆಮರೆಸಿಕೊಂಡಿರುವುದರಿಂದ ತನಿಖೆ ವಿಳಂಬವಾಗಿದೆ. ಸಿಡಿ ಬಹಿರಂಗವಾದ ದಿನವೇ ಯುವತಿ, ಆರೋಪಿಗಳ ನಡುವೆ ಹಲವು ಬಾರಿ ಮೊಬೈಲ್ ಸಂಭಾಷಣೆ ನಡೆದಿದೆ. ಸಿಡಿ ಪ್ರಕರಣ ಬಹಿರಂಗವಾದ ಬಳಿಕ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿದ್ದಾರೆ. ನಂತರ ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಗೋವಾಗೆ ಕಳುಹಿಸಿದ್ದಾರೆ. ಯುವತಿ ಹಾಗೂ ಆರೋಪಿಗಳಿಗೆ ಮೊದಲಿಂದಲೂ ಲಿಂಕ್ ಇರುವುದು ಖಚಿತವಾಗಿದೆ. ಯುವತಿ ಮನೆಯಲ್ಲಿ 9.20 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಹಾಗೂ ಯುವತಿ ಭೇಟಿ ಬಗ್ಗೆ, ಸುಲಿಗೆಯ ಹಣ ವಿನಿಮಯ ಬಗ್ಗೆ ಸಾಕ್ಷ್ಯ ಲಭ್ಯವಾಗಿದೆ ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.

ಸಿಡಿ ಬಹಿರಂಗವಾದ ಮೇಲೆ ಯುವತಿ ಸಂತೈಸಲು ವ್ಯಕ್ತಿ ನೇಮಕ

ಸಿಡಿ ಬಹಿರಂಗವಾದ ನಂತರ ಯುವತಿಯನ್ನು ಸಂತೈಸಲು ಮಾ ಮೊಹಾಂತಿ ಎಂಬುವನಿಗೆ ಸೂಚಿಸಲಾಗಿತ್ತು. ಮಾ ಮೊಹಾಂತಿ ತನ್ನ ಕಾರಿನಲ್ಲಿ ಯುವತಿಯನ್ನು ರಾಜ್ಯಾದ್ಯಂತ ಸುತ್ತಾಡಿಸಿದ್ದ. ಮಾರ್ಚ್ 6 ರಿಂದ 8ರ ನಡುವೆ ಕರ್ನಾಟಕ ಮತ್ತು ಕೇರಳದಲ್ಲಿ ಸುತ್ತಾಡಿಸಿದ್ದ. ಆರೋಪಿಗಳು ಬ್ಲಾಕ್​ಮೇಲ್ ಹಣದಿಂದ 17 ಲಕ್ಷ ರೂ. ಮೌಲ್ಯದ ಮಹೇಂದ್ರಾ ಥಾರ್‌ ಬುಕ್ ಮಾಡಲು ಯೋಚಿಸಿ ಸಹೋದರ ಚೇತನ್ ಹೆಸರಲ್ಲಿ ಖರೀದಿಸಲು 20 ಸಾವಿರ ರೂ. ಹಣ ಅಡ್ವಾನ್ಸ್ ನೀಡಲಾಗಿತ್ತು. ಹಾಗೆಯೇ ನರೇಶ್ ಗೌಡ 23 ಲಕ್ಷ ರೂ ಮೌಲ್ಯದ ಮಹೇಂದ್ರ ಎಕ್ಸ್‌ಯುವಿ 500 ಖರೀದಿಸಲು 1 ಲಕ್ಷ ರೂ. ಅಡ್ವಾನ್ಸ್ ನೀಡಿದ್ದ. ಪೂರ್ತಿ ಹಣ ನಗದು ರೂಪದಲ್ಲೇ ಪಾವತಿಸಲು ಇಬ್ಬರೂ ಮುಂದಾಗಿದ್ದರು. ಆದರೆ, ಶೋ ರೂಂನವರು ಒಪ್ಪದ ಕಾರಣ ಹಣ ಪಾವತಿಸಲಾಗಿರಲಿಲ್ಲ ಎಂಬುದು ತಿಳಿದು ಬಂದಿದೆ. ಯುವತಿಯ ಬ್ಯಾಂಕ್ ಅಕೌಂಟ್​ಗೆ ಶ್ರವಣ್ ಹಲವು ಬಾರಿ ಹಣ ಹಾಕಿದ್ದ. ಶ್ರವಣ್‌ ಮತ್ತು ಯುವತಿಯ ನಡುವೆ ಮೊದಲಿಂದಲೂ ಸಂಪರ್ಕವಿತ್ತು ಎಂದು ಎಸ್ಐಟಿ ತನ್ನ ಆಕ್ಷೇಪಣೆಯಲ್ಲಿ ತಿಳಿಸಿದೆ.

ನೀವು ನನಗೆ ವೋಟ್​​ ಹಾಕಿಲ್ಲ: ಊರು ಬಿಟ್ಟು ಹೋಗಿ ಅಂತಿದ್ದಾನಂತೆ ಗ್ರಾಪಂ ಸದಸ್ಯ!

ABOUT THE AUTHOR

...view details