ಬೆಂಗಳೂರು :ಸಿಡಿ ಪ್ರಕರಣ ಸಂಬಂಧ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿರುವ ಯುವತಿಯನ್ನು ಎಸ್ಐಟಿ ಅಧಿಕಾರಿಗಳು ಆಡುಗೋಡಿಯ ಟೆಕ್ನಿಕಲ್ ಸೆಂಟರ್ಗೆ ಕರೆ ತಂದಿದ್ದಾರೆ.
ಸಿಆರ್‌ಪಿಸಿ 161 ಅಡಿ ತನಿಖಾಧಿಕಾರಿ ಎಸಿಪಿ ಕವಿತಾ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ವಿಚಾರಣೆ ಮುಗಿಸಿರುವ ತನಿಖಾಧಿಕಾರಿಗಳು ನಾಳೆ ತಮ್ಮ ಮುಂದೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆಡುಗೋಡಿ ಟೆಕ್ನಿಕಲ್ ಸೆಲ್ ಬಳಿ ಯುವತಿ ಪರ ವಕೀಲ ಜಗದೀಶ್ ಮಾತನಾಡಿ, ನ್ಯಾಯಾಲಯದಲ್ಲಿ 164ರಡಿ ಯುವತಿ ಹೇಳಿಕೆ ನೀಡಿದ್ದಾಳೆ. ಸದ್ಯ ಅಧಿಕಾರಿಗಳು ಯುವತಿಯ ವಾಯ್ಸ್ ಸ್ಯಾಂಪಲ್ ಪಡೆಯುತ್ತಾರೆ. ಯುವತಿಯನ್ನ ಅರೆಸ್ಟ್ ಮಾಡುವ ಬಗ್ಗೆ ಮಾಹಿತಿಯಿಲ್ಲ ಎಂದರು.
ನಾವು ಯುವತಿಯನ್ನು ಎಸ್ಐಟಿಗೆ ಹ್ಯಾಂಡ್ ಓವರ್ ಮಾಡಿಲ್ಲ. ತನಿಖಾಧಿಕಾರಿಗಳ ಮುಂದೆ 161 ಹೇಳಿಕೆ ಮಾಡಬೇಕೆಂದು ಮನವಿ ಮಾಡಿದ್ದೆವು. ಅದರಂತೆ ತನಿಖಾಧಿಕಾರಿಗಳು ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ.
ಯುವತಿಯನ್ನು ಪೊಲೀಸರು ವಶಕ್ಕೆ ಪಡೆಯುವುದಕ್ಕೆ ಆಗುವುದಿಲ್ಲ. ಕೇವಲ ಕಬ್ಬನ್ ಪಾರ್ಕ್ ದೂರಿನನ್ವಯ ಮಾತ್ರ 161 ಸ್ಟೇಟ್‌ಮೆಂಟ್ ಎಸ್ಐಟಿ ಮಾಡಲಿದೆ. ನಾವು ನ್ಯಾಯಾಲಯದ ಮುಂದೆ ಯುವತಿಯನ್ನ ಹಾಜರು ಮಾಡಿದ್ದೇವೆ ಎಂದರು.
ಜಡ್ಜ್ ಮುಂದೆ ಯುವತಿ ಹೇಳಿದ್ದೇನು? :ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164 ಅಡಿ ಯುವತಿ ದೂರು ಕೊಟ್ಟಂತೆ ಅದೇ ರೀತಿ ಹೇಳಿಕೆ ನೀಡಿರುವ ಸಾಧ್ಯತೆಯೇ ಹೆಚ್ಚಿದೆ. ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತರು ತಾವು ನೀಡಿದ ದೂರಿನಲ್ಲಿ ಉಲ್ಲೇಖಿತ ಅಂಶಗಳನ್ನೇ ನ್ಯಾಯಾಲಯದ ಮುಂದೆ ಹೇಳಿಕ ನೀಡಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.