ಬೆಂಗಳೂರು: ಮಾಜಿ ಸಚಿವರ ಬ್ಲ್ಯಾಕ್ ಮೇಲ್ ಪ್ರಕರಣ ಸಂಬಂಧ ಎಸ್ಐಟಿ ತನಿಖೆ ಚುರುಕುಗೊಳಿಸಿದೆ. ಶಂಕಿತ ಆರೋಪಿ ಶ್ರವಣ್ಗೆ ವಿಶೇಷ ತನಿಖಾ ತಂಡ (ಎಸ್ಐಟಿ) ವಿಚಾರಣೆ ನಡೆಸಿದ್ದು, ಹಲವು ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡಿದೆ. ಶಂಕಿತ ಆರೋಪಿಗಳಾದ ನರೇಶ್ ಹಾಗೂ ಶ್ರವಣ್ ಇಬ್ಬರನ್ನೂ ಮೂರು ಬಾರಿ ವಿಚಾರಣೆಗೊಳಪಡಿಸಿ ಹಲವು ಮಾಹಿತಿಯನ್ನ ಎಸ್ಐಟಿ ಕಲೆಹಾಕಿತ್ತು.
ನಿನ್ನೆ ಸಹ ಸುಮಾರು 7 ಗಂಟೆಗಳ ಕಾಲ ನರೇಶ್ನನ್ನ ವಿಚಾರಣೆ ನಡೆಸಿದ್ದ ಎಸ್ಐಟಿ ಇಂದು ಶ್ರವಣ್ ವಿಚಾರಣೆ ಮುಗಿಸಿದೆ. ಆಡುಗೋಡಿ ಟೆಕ್ನಿಕಲ್ ಸೆಂಟರ್ನಲ್ಲಿ ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದ ಶ್ರವಣ್ಗೆ ಎಸಿಪಿ ಧರ್ಮೆಂದ್ರ ಹಲವು ಪ್ರಶ್ನೆಗಳನ್ನ ಮುಂದಿಟ್ಟಿದರು. ವಿಡಿಯೋ ಮಾಡಲು ಬಳಸಿದ್ದ ಕ್ಯಾಮರಾ ಹಾಗೂ ಬ್ಯಾಂಕ್ ಅಕೌಂಟ್ನಿಂದ ವರ್ಗಾವಣೆಯಾಗಿರುವ ಹಣದ ಕುರಿತು ದಾಖಲೆಗಳ ನೀಡುವಂತೆ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.