ಬೆಂಗಳೂರು:ರಾಜ್ಯದ ಸುಮಾರು 500 ವೈದ್ಯಕೀಯ ಸಿಬ್ಬಂದಿಗಳಿಗೆ ಸಿಂಗಾಪುರ ಆರೋಗ್ಯ ಸೇವೆಗಳ ಕುರಿತು ಒಂದು ವಾರ ತರಬೇತಿ ಯಶಸ್ವಿಯಾಗಿದ್ದು, ಇಂದು ಸಮಾರೋಪ ಕಾರ್ಯಕ್ರಮ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು.
ರಾಜ್ಯದ ವೈದ್ಯರಿಗೆ ಸಿಂಗಾಪುರ್ ತರಬೇತಿ ಯಶಸ್ವಿ - ಸಿಂಗಾಪುರ್ ನ ತೆಮಾಸೆಕ್ ಫೌಂಡೇಶನ್
ರಾಜ್ಯದ ಸುಮಾರು 500 ವೈದ್ಯಕೀಯ ಸಿಬ್ಬಂದಿಗಳಿಗೆ ಸಿಂಗಾಪುರ ಆರೋಗ್ಯ ಸೇವೆಗಳ ಕುರಿತು ಒಂದು ವಾರ ತರಬೇತಿ ಯಶಸ್ವಿಯಾಗಿದ್ದು, ಇಂದು ಸಮಾರೋಪ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಿಂಗಾಪುರ್‌ನ ತೆಮಾಸೆಕ್ ಫೌಂಡೇಶನ್ ಮತ್ತು ಸಿಂಗಾಪುರ್ ಆರೋಗ್ಯ ಸೇವೆಗಳ ಸಹಯೋಗದೊಂದಿಗೆ ಆಸ್ಪತ್ರೆ ಪೂರ್ವ ತುರ್ತು ಆರೈಕೆ ಕುರಿತು ವಿಚಾರ ಸಂಕೀರ್ಣ ನಡೆಯಿತು.
ಅಪಘಾತ, ಸುಟ್ಟಗಾಯ, ಉಸಿರಾಟ ತೊಂದರೆ, ಎದೆನೋವು, ಹೃದಯಾಘಾತ ಹಾಗು ವಿಷ ಸೇವನೆಯಂತಹ ಪ್ರಕರಣಗಳಲ್ಲಿ ತುರ್ತು ಚಿಕಿತ್ಸೆ ನಿರ್ವಹಿಸುವ ಸಂಬಂಧ ರಾಜ್ಯದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಿಂಗಾಪುರದ ಪರಿಣಿತ ವೈದ್ಯರ ತಂಡ ಜ್ಞಾನ ಕೌಶಲ್ಯ ತರಬೇತಿ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದರು.
ಖಾಸಗಿ ಸಂಸ್ಥೆಯೊಂದಿಗೆ 3 ವರ್ಷ ಒಪ್ಪಂದ ಮಾಡಿಕೊಂಡು, ಈ ಯೋಜನೆಯಿಂದ ಸರಿ ಸುಮಾರು 500 ಮಂದಿ ಕಿರಿಯ ಮತ್ತು ಹಿರಿಯ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಒಂದು ವಾರದ ಕಾಲ ಸಿಂಗಪುರದಲ್ಲಿಯೇ ಪ್ರಥಮ ಚಿಕಿತ್ಸೆ ತರಬೇತಿ ಪಡೆದಿದ್ದಾರೆ,11 ಬ್ಯಾಚ್ ಗಳಲ್ಲಿ 129 ತಜ್ಞ ವೈದ್ಯರು, 167 ಸ್ಟಾಫ್ ನರ್ಸ್ಗಳು ಮತ್ತು 206 ತುರ್ತು ವೈದ್ಯಕೀಯ ತಂತ್ರಜ್ಞನರು ಆಸ್ಪತ್ರೆ- ಪೂರ್ವ ತುರ್ತು ಆರೋಗ್ಯ ರಕ್ಷಣೆ ಕಾರ್ಯಕ್ರಮದಲ್ಲಿ ತರಬೇತಿ ಪಡೆದಿದ್ದಾರೆ ಎಂದರು.