ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ ಹಿನ್ನೆಲೆ: ನಾಳೆ ಸರಳ ಕನ್ನಡ ರಾಜ್ಯೋತ್ಸವ ಆಚರಣೆ - Simple celebration of Kannada rajotsava

ಕೊರೊನಾ ಹಿನ್ನೆಲೆ ನಾಳೆ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದ್ದು, ಕೇವಲ ಇಲಾಖೆಯ ಅಧಿಕಾರಿಗಳು ಸಚಿವರು, ಶಾಸಕರು ಅಷ್ಟೇ ಭಾಗಿಯಾಗಲಿದ್ದಾರೆ.

ನಾಳೆ ಸರಳ ಕನ್ನಡ ರಾಜ್ಯೋತ್ಸವದ ಆಚರಣೆ
ನಾಳೆ ಸರಳ ಕನ್ನಡ ರಾಜ್ಯೋತ್ಸವದ ಆಚರಣೆ

By

Published : Oct 31, 2020, 5:25 PM IST

ಬೆಂಗಳೂರು: ಕೊರೊನಾ ಹಿನ್ನೆಲೆ ನಾಳೆ ಅತ್ಯಂತ ಸರಳವಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ.

ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಧ್ವಜಾರೋಹಣ ನೆರವೇರಿಸಲಿದ್ದಾರೆ. ರಾಷ್ಟ್ರಗೀತೆ, ಪ್ರಾರ್ಥನೆ, ನಾಡಗೀತೆ - ರೈತಗೀತೆ ಇರಲಿದೆ. ಕನ್ನಡ ರಾಜ್ಯೋತ್ಸವ ಕುರಿತು ಸಿಎಂ ರಾಜ್ಯದ ಜನೆತೆಗೆ ಸಂದೇಶ ನೀಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಸಾರ್ವಜನಿಕ ಪ್ರವೇಶ ನಿಷೇಧ ಮಾಡಲಾಗಿದ್ದು, ಆರೋಗ್ಯದ ದೃಷ್ಟಿಯಿಂದ ಮಕ್ಕಳ ಆಗಮನಕ್ಕೂ ಬ್ರೇಕ್ ಹಾಕಲಾಗಿದೆ. ಕೇವಲ ಇಲಾಖೆಯ ಅಧಿಕಾರಿಗಳು ಸಚಿವರು, ಶಾಸಕರು ಅಷ್ಟೇ ಭಾಗಿಯಾಗಲಿದ್ದಾರೆ.

ABOUT THE AUTHOR

...view details