ಬೆಂಗಳೂರು: ದಶಕಗಳಿಂದ ಬಳಸುತ್ತಿರುವ ಬಿಎಸ್ಎನ್ಎಲ್ ಸೇವೆಯಿಂದ ಇದೀಗ ರಿಲಾಯನ್ಸ್ ಜಿಯೋಗೆ ಪೋರ್ಟ್ ಆಗುವಂತೆ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ರಾಜ್ಯದೆಲ್ಲೆಡೆ ಸರಿಯಾಗಿ ನೆಟ್ವರ್ಕ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮಹತ್ವದ ನಿರ್ಧಾರ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಈ ವಿಷಯ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ.
ಪೊಲೀಸ್ ಇಲಾಖೆಯಲ್ಲಿ ಒಟ್ಟು 38,347 ಬಿಎಸ್ಎನ್ಎಲ್ ನಂಬರ್ ಬಳಸಲಾಗುತ್ತಿದೆ. ಪೋರ್ಟ್ ಮಾಡುವ ಮುನ್ನ ಕೆಲವು ಷರತ್ತುಗಳನ್ನು ಪಾಲಿಸಬೇಕೆಂದು ಹೇಳಲಾಗಿದೆ. ಹಂತಹಂತವಾಗಿ ಜಿಯೊ ನಂಬರ್ಗಳಿಗೆ ಪೋರ್ಟ್ ಮಾಡಬೇಕು. ಅಲ್ಲದೇ, ಬಾಕಿಯಿರುವ ಹಣ ಪಾವತಿಸಬೇಕು. ಈ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ತಿಳಿಸಲಾಗಿದೆ.