ಬೆಂಗಳೂರು: ಇಂದು ಉದ್ಯಾನನಗರಿಯಲ್ಲಿ ಕೊರೊನಾ ಮತ್ತೆ ಆರ್ಭಟಿಸಿದಂತಿದೆ. ಒಂದೇ ದಿನಕ್ಕೆ 738 ಮಂದಿ ಕೊರೊನಾ ವರದಿ ಪಾಸಿಟಿವ್ ಬಂದಿವೆ.
ಸಿಲಿಕಾನ್ ಸಿಟಿಯಲ್ಲಿ ಇಂದು 738 ಪ್ರಕರಣ ಪತ್ತೆ - coronavirus in Bangalore news
ಐಸಿಯುನಲ್ಲಿರುವ ರೋಗಿಗಳ ಸಂಖ್ಯೆ 178ಕ್ಕೆ ಏರಿಕೆಯಾಗಿದೆ. ಆದರೆ, ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಮೌನವಹಿಸಿದ್ದು, ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ. ಕಂಟೇನ್ಮೆಂಟ್ ಪ್ರದೇಶಗಳ ಮಾಹಿತಿ ಒಳಗೊಂಡ ವಾರ್ ರೂಂ ವರದಿ ಕೂಡಾ ತಡವಾಗುತ್ತಿದೆ..
ನಗರದ ಸೋಂಕಿತರ ಸಂಖ್ಯೆ 4,052ಕ್ಕೆ ಏರಿಕೆಯಾಗಿದೆ. ಆದರೆ, ಇಂದು ಒಬ್ಬರೂ ಕೂಡಾ ಗುಣಮುಖರಾಗಿಲ್ಲ. ಈವರೆಗೆ 533 ಮಂದಿ ಮಾತ್ರ ಗುಣಮುಖರಾಗಿದ್ದಾರೆ. ನಗರದ ಕೋವಿಡ್ ಮರಣ ಪ್ರಮಾಣ 91ಕ್ಕೆ ಏರಿಕೆಯಾಗಿದೆ. ಇಂದು ನಾಲ್ವರು ಮೃತಪಟ್ಟವರ ವರದಿ ಬಿಡುಗಡೆಯಾಗಿದೆ. ಜೂನ್ 24, 25, 27 ಮತ್ತು 28 ರಂದು ಮೃತಪಟ್ಟವರಾಗಿದ್ದಾರೆ.
ಐಸಿಯುನಲ್ಲಿರುವ ರೋಗಿಗಳ ಸಂಖ್ಯೆ 178ಕ್ಕೆ ಏರಿಕೆಯಾಗಿದೆ. ಆದರೆ, ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಮೌನವಹಿಸಿದ್ದು, ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ. ಕಂಟೇನ್ಮೆಂಟ್ ಪ್ರದೇಶಗಳ ಮಾಹಿತಿ ಒಳಗೊಂಡ ವಾರ್ ರೂಂ ವರದಿ ಕೂಡಾ ತಡವಾಗುತ್ತಿರುವುದು ಆತಂಕಕ್ಕೆ ಎಡೆಮಾಡಿದೆ.