ಬೆಂಗಳೂರು: ಕೊರೊನಾ ವಾರಿಯರ್ಸ್ ಆಗಿರುವ ಪೊಲೀಸರಿಗೆ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಈ ಬಾರಿ ಕಟ್ಟುನಿಟ್ಟಿನ ಲಾಕ್ಡೌನ್ಗೆ ಪೊಲೀಸ್ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ.
ಸಿಲಿಕಾನ್ ಸಿಟಿ ಜನತೆಗೆ ಕೊರೊನಾ ವಾರಿಯರ್ ಆಗುವ ಅವಕಾಶ: ನಗರ ಪೊಲೀಸ್ ಆಯುಕ್ತರಿಂದ ಆಹ್ವಾನ - Corona Warriors
ಪೊಲೀಸ್ ಸಿಬ್ಬಂದಿಯಲ್ಲೂ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಕಾರಣ ಈ ಬಾರಿಯ ಲಾಕ್ಡೌನ್ಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಮೂಲಕ ಸಿಲಿಕಾನ್ ಸಿಟಿ ಜನತೆಗೆ ಸಿವಿಲ್ ಪೊಲೀಸ್ ವಾರ್ಡನ್ಗಳಾಗಿ ಕಾರ್ಯನಿರ್ವಹಿಸಲು ಆಹ್ವಾನ ನೀಡಿದ್ದಾರೆ.

ಕಳೆದ ಲಾಕ್ಡೌನ್ ಸಂದರ್ಭದಲ್ಲಿ ಕೆಎಸ್ಆರ್ಪಿ ತುಕಡಿ ಸೇರಿದಂತೆ ಹಲವಾರು ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ತೊಡಗಿದ್ದರು. ಆದರೆ ಈ ಬಾರಿ ಇಲಾಖೆ ಬಹಳಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಕಾರಣ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಮೂಲಕ ಸಿಲಿಕಾನ್ ಸಿಟಿ ಜನತೆಗೆ ಸಿವಿಲ್ ಪೊಲೀಸ್ ವಾರ್ಡನ್ಗಳಾಗಿ ಕಾರ್ಯನಿರ್ವಹಿಸಲು ಆಹ್ವಾನ ನೀಡಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಪೊಲೀಸರಿಗೆ ಸಹಕಾರ ನೀಡಲು ಸಿವಿಲ್ ಪೊಲೀಸ್ ವಾರ್ಡನ್ಗಳ ಅಗತ್ಯವಿದೆ. ಹೀಗಾಗಿ ಬೆಂಗಳೂರು ನಗರದ 18ರಿಂದ 45 ವರ್ಷದೊಳಗಿನ ಪುರುಷ ಅಥವಾ ಮಹಿಳೆಯರು ಸಿವಿಲ್ ಪೊಲೀಸ್ ವಾರ್ಡನ್ಗಳಾಗಿ ಕಾರ್ಯನಿರ್ವಹಿಸಲು ಅರ್ಜಿ ಸಲ್ಲಿಸಬಹುದು. ದೈಹಿಕವಾಗಿ ಸಮರ್ಥವಾಗಿ ಮತ್ತು ಸೇವಾ ಮನೋಭಾವನೆ ಹೊಂದಿರುವವರು ಖಂಡಿತಾ ಪೊಲೀಸರ ಜೊತೆಗೆ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಬಹುದು ಎಂದು ತಿಳಿಸಿದ್ದಾರೆ.