ಕರ್ನಾಟಕ

karnataka

ETV Bharat / state

ಕೊರೊನಾ ನಿಯಮಾವಳಿ ಮರೆತು ಹಬ್ಬಕ್ಕಾಗಿ ಖರೀದಿಗೆ ಮುಗಿಬಿದ್ದ ಸಿಲಿಕಾನ್ ಸಿಟಿ ಜನತೆ

ಕೊರೊನಾ ಭೀತಿ ಕೊಂಚ ಕಡಿಮೆಯಾದಂತಾಗಿದ್ದು, ಈ ನಡುವೆ ದೀಪಾವಳಿಯಲ್ಲಿ ಜನತೆ ಕೋವಿಡ್ ನಿಯಮಾವಳಿಗಳನ್ನು ಮರೆತಂತಿದೆ. ನಗರದ ಮಾರುಕಟ್ಟೆಗಳು ಜನರಿಂದ ತುಂಬಿಹೋಗಿದ್ದು, ಕೊರೊನಾ ಹರಡುವಿಕೆ ಹೆಚ್ಚಾಗುವ ಭೀತಿ ಎದುರಾಗಿದೆ.

By

Published : Nov 14, 2020, 3:56 PM IST

Silicon City people rushed to market For diwali purchase wake of corona
ಕೊರೊನಾ ಮರೆತು ಹಬ್ಬದ ಖರೀದಿಗೆ ಮುಗುಬಿದ್ದ ಸಿಲಿಕಾನ್ ಸಿಟಿ ಜನ

ಬೆಂಗಳೂರು:ಇಂದಿನಿಂದ ಮೂರು ದಿನ ದೀಪಾವಳಿ ಹಬ್ಬದ ಸಂಭ್ರಮ. ಈ ಬಾರಿ ಕೊರೊನಾಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಹಬ್ಬ ಆಚರಣೆಗೆ ಸರ್ಕಾರ ಸೂಚಿಸಿದೆ. ಆದರೆ ಜನತೆ ಮಾತ್ರ ಕೊರೊನಾಗೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ನಿಯಮಾವಳಿಗಳನ್ನು ಮರೆತು ಜಮಾಯಿಸಿದ್ದಾರೆ.

ಕೊರೊನಾ ವೈರಸ್‌ ಮರೆತು ಹಬ್ಬದ ಖರೀದಿಗೆ ಮುಗಿಬಿದ್ದ ಸಿಲಿಕಾನ್ ಸಿಟಿ ಜನ

ಕೊರೊನಾ ಕಡಿಮೆಯಾಗುತ್ತಿದ್ದಂತೆ ಜನ ಮೈಮರೆತು ಓಡಾಡುತ್ತಿದ್ದಾರೆ. ದೀಪಾವಳಿ ಹಬ್ಬ ಇರುವುದರಿಂದ ಮಾರುಕಟ್ಟೆಗಳಲ್ಲಿ ವ್ಯಾಪಾರ ಇಂದು ಜೋರಾಗಿಯೇ ನಡೆದಿದೆ. ನಗರದ ಕೆ.ಅರ್. ಮಾರುಕಟ್ಟೆ ಸೇರಿದಂತೆ ಹಲವು ಮಾರುಕಟ್ಟೆಗಳಲ್ಲಿ ಕೊರೊನಾ ಇಲ್ಲವೇನೋ ಎಂಬಂತೆ ವ್ಯಾಪಾರದಲ್ಲಿ ಸಿಲಿಕಾನ್ ಸಿಟಿ ಜನ ಬ್ಯುಸಿಯಾಗಿದ್ದರು.

ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಇಲ್ಲದೆ ಹೂವು, ಹಣ್ಣು, ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ನಿರತರಾಗಿದ್ದರು. ಬೆಂಗಳೂರಿನ ಕೆ.ಅರ್. ಮಾರುಕಟ್ಟೆಯಲ್ಲಿ ಸಾವಿರಾರು ಜನ ಬೆಳಗ್ಗೆಯಿಂದಲೇ ಖರೀದಿಗಾಗಿ ಆಗಮಿಸಿದ್ದರು.

ABOUT THE AUTHOR

...view details