ಬೆಂಗಳೂರು: ಕೊರೊನಾ ಮಹಾಮಾರಿಗೆ ಸ್ತಬ್ಧವಾಗಿದ್ದ ಸಿಲಿಕಾನ್ ಸಿಟಿ ಇಂದು ಬಹುತೇಕ ಸಹಜ ಸ್ಥಿತಿಗೆ ಮರಳಿದೆ. ಬೆಂಗಳೂರಲ್ಲಿ ವಾಹನ ಸವಾರರು ಎಂದಿನಂತೆ ತಮ್ಮ ದೈನಂದಿನ ಕೆಲಸಕ್ಕೆ ತೆರಳಿದ್ದಾರೆ. ಮಧ್ಯಾಹ್ನದ ಬಿಸಿಲನ್ನೂ ಲೆಕ್ಕಿಸದೆ ತಮ್ಮ ತಮ್ಮ ಕೆಲಸಕ್ಕೆ ವಾಹನ ಸವಾರರು ಟ್ರಾಫಿಕ್ನಲ್ಲಿಯೂ ಸಾಗುತ್ತಿದ್ದಾರೆ.
ಸಹಜ ಸ್ಥಿತಿಯತ್ತ ಸಿಲಿಕಾನ್ ಸಿಟಿ: ಎಂದಿನಂತಾದ ಜನಜೀವನ - ಬಿಎಂಟಿಸಿ ಆರಂಭ
ಲಾಕ್ಡೌನ್ ಬಳಿಕ ರಾಜಧಾನಿ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಇದೀಗ ಲಾಕ್ಡೌನ್ 4.O ಹಿನ್ನೆಲೆ ನಿಯಮಗಳನ್ನು ಸಡಿಲಿಸಲಾಗಿದ್ದು, ಜನರ ಓಡಾಟ ಹೆಚ್ಚಾಗಿದೆ. ಅಲ್ಲದೆ ರಸ್ತೆಯಲ್ಲಿ ಆಟೋ, ಟ್ಯಾಕ್ಸಿ, ಬಸ್ಗಳು ಸೇರಿದಂತೆ ಜನರ ಓಡಾಟ ಎಂದಿನಂತೆ ಆರಂಭವಾಗಿದೆ.

ಸಹಜ ಸ್ಥಿತಿಗೆ ಮರಳುತ್ತಿರುವ ಸಿಲಿಕಾನ್ ಸಿಟಿ: ಎಂದಿನಂತೆ ವಾಹನ, ಜನರ ಓಡಾಟ
ಸಹಜ ಸ್ಥಿತಿಗೆ ಮರಳುತ್ತಿರುವ ಸಿಲಿಕಾನ್ ಸಿಟಿ: ಎಂದಿನಂತಾದ ಜನಜೀವನ
ಹಾಗೆಯೇ ಪ್ರತಿ ಸಿಗ್ನಲ್ಗಳ ಬಳಿ ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ಬಂದೋಬಸ್ತ್ನಲ್ಲಿ ತೊಡಗಿದ್ದಾರೆ. ಅಲ್ಲದೆ ಜನ ಮಾಸ್ಕ್ ಧರಿಸಿ ಕೊರೊನಾ ತಮ್ಮ ಹತ್ತಿರ ಬಾರದೆ ಇರಲಿ ಅಂತ ಸುರಕ್ಷತೆಯಿಂದ ಓಡಾಟ ಮಾಡುತ್ತಿದ್ದು, ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ.