ಬೆಂಗಳೂರು:ಕೇಂದ್ರ ಸರ್ಕಾರ ಸಂಸತ್ನಲ್ಲಿ ತ್ರಿವಳಿ ತಲಾಖ್ ಮಸೂದೆ ಅಂಗೀಕರಿಸಿದ ಸಂದರ್ಭದಲ್ಲಿ ಇದರ ಪರ-ವಿರೋಧ ಹೇಳಿಕೆ ನೀಡದೇ ಮೌನ ಪ್ರದರ್ಶಿಸಿದ್ದ ರಾಜ್ಯ ಕಾಂಗ್ರೆಸ್ ನಾಯಕರು ಇದೀಗ 370ನೇ ವಿಧಿ ರದ್ದಾಗಿದ್ದಕ್ಕೂ ಮೌನವನ್ನೇ ಉತ್ತರವನ್ನಾಗಿಸಿಕೊಂಡಿದ್ದಾರೆ.
ತ್ರಿವಳಿ ತಲಾಖ್ನಂತೆ 370ನೇ ವಿಧಿ ರದ್ಧತಿಗೂ ರಾಜ್ಯ ಕೈ ನಾಯಕರಿಂದ ಮೌನವೇ ಉತ್ತರ! - ಕೆಪಿಸಿಸಿ ಅಧ್ಯಕ್ಷ
ಕೆಪಿಸಿಸಿ ಕಚೇರಿಯಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಜಮ್ಮು-ಕಾಶ್ಮೀರದಿಂದ 370 ಹಾಗೂ 35 ಎ ವಿಧಿ ಹಿಂಪಡೆದ ಕೇಂದ್ರದ ಕ್ರಮ ಖಂಡಿಸಿ ಮಾತನಾಡಿದ್ದರು.
ಕೇಂದ್ರ ಸರ್ಕಾರ ನಿನ್ನೆ ಸಂಸತ್ನಲ್ಲಿ 370 ನೇ ವಿಧಿ ರದ್ದುಪಡಿಸುವ ನಿರ್ಧಾರ ಪ್ರಕಟಿಸಿದಾಗ ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ರಾಜ್ಯದಲ್ಲಿ ಕೂಡ ಇದಕ್ಕೆ ಆಕ್ರೋಶ ವ್ಯಕ್ತವಾಗುವ ನಿರೀಕ್ಷೆ ಇತ್ತು. ಆದರೆ ಕಾಂಗ್ರೆಸ್ ನಾಯಕರಲ್ಲಿ ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೊರತುಪಡಿಸಿ ಬೇರಾವ ನಾಯಕರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಮೌನಕ್ಕೆ ಶರಣಾಗಿದ್ದು ಅಚ್ಚರಿಗೆ ಕಾರಣವಾಗಿದೆ.