ಕರ್ನಾಟಕ

karnataka

ETV Bharat / state

ಕುರುಬರನ್ನು ಎಸ್​​​​ಟಿಗೆ ಸೇರಿಸಲು ನನ್ನ ವಿರೋಧವಿಲ್ಲ: ಸಿದ್ದರಾಮಯ್ಯ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಕುರುಬ ಸಮುದಾಯವನ್ನು ಎಸ್​​ಟಿ ಸೇರಿಸುವ ವಿಚಾರವಾಗಿ ನಾನು ಹಲವು ಬಾರಿ ನನ್ನ ಸಮ್ಮತಿ ವ್ಯಕ್ತಪಡಿಸಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

siiddaramaih statement
ಸಿದ್ದರಾಮಯ್ಯ

By

Published : Feb 7, 2021, 8:15 PM IST

ಬೆಂಗಳೂರು:ಕುರುಬ ಸಮುದಾಯವನ್ನು ಎಸ್​​ಟಿ ಮೀಸಲಾತಿಗೆ ಸೇರಿಸಲು ನನ್ನ ವಿರೋಧವಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾರು ಸಮಾವೇಶ ಮಾಡಿದ್ದಾರೆ ಅವರನ್ನು ಕೇಳಿ. ಕೆ.ಎಸ್.ಈಶ್ವರಪ್ಪನವರು ಕ್ಯಾಬಿನೆಟ್​​​ನಲ್ಲಿದ್ದಾರೆ. ಅವರು ಸರ್ಕಾರದ ಮೇಲೆ ಒತ್ತಡ ಹಾಕಿ ಮಾಡಿಸಬೇಕು. ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸುವ ವಿಚಾರವಾಗಿ ನಾನು ಹಲವು ಬಾರಿ ನನ್ನ ಸಮ್ಮತಿ ವ್ಯಕ್ತಪಡಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಪರಿಷತ್ ಸಭಾಪತಿ ಚುನಾವಣೆ ವಿಚಾರದ ಬಗ್ಗೆ‌ ಮಾತನಾಡಿ, ಸಭಾಪತಿ ಚುನಾವಣೆಗೆ ಕಾಂಗ್ರೆಸ್​​ನಿಂದ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ. ವಿಧಾನ ಪರಿಷತ್ ಉಪಸಭಾಪತಿ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೆವು. ಈಗಲೂ ಇಳಿಸುತ್ತೇವೆ ಎಂದು ಹೇಳಿದರು.

ABOUT THE AUTHOR

...view details