ಬೆಂಗಳೂರು: ದೋಸ್ತಿ ಸರ್ಕಾರದ ಪತನದ ಬೆನ್ನಲ್ಲೇ ಕೆಪಿಸಿಸಿ ಕಚೇರಿಯಲ್ಲಿ ಸಭೆ ಕರೆಯಲಾಗಿದ್ದು, ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ , ಕೆಜೆ ಜಾರ್ಜ್ ಸೇರಿ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಭಾಗಿಯಾಗಲು ಬಂದಿದ್ದು, ಸಭೆಗೂ ಮುನ್ನವೇ ಸ್ಪೀಕರ್ ಅವರನ್ನು ಭೇಟಿಯಾಗಲು ಸಿದ್ದು ಟೀಂ ಹೊರಟಿದೆ.
ಸ್ಪೀಕರ್ ಭೇಟಿಯಾಗಲು ಹೊರಟ ಸಿದ್ದರಾಮಯ್ಯ ಟೀಂ - undefined
ಈಗಾಗಲೇ ಮೈತ್ರಿ ಸರ್ಕಾರ ಪತನವಾಗಿದ್ದು, ಇದಕ್ಕೆ ಮುಖ್ಯ ಕಾರಣೀಕರ್ತರು ಅತೃಪ್ತ ಶಾಸಕರು. ಮುಂಬೈನಲ್ಲಿರುವ ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್ಗೆ ದೂರು ನೀಡಲು ಮಾಜಿ ಸಿಎಂ ಹಾಗೂ ಸಂಗಡಿಗರು ಸ್ಪೀಕರ್ ಬಳಿಗೆ ತೆರಳಿದ್ದಾರೆ.
![ಸ್ಪೀಕರ್ ಭೇಟಿಯಾಗಲು ಹೊರಟ ಸಿದ್ದರಾಮಯ್ಯ ಟೀಂ](https://etvbharatimages.akamaized.net/etvbharat/prod-images/768-512-3930720-thumbnail-3x2-vickyjpg---copy.jpg)
ಸಿದ್ದು ಎಂಡ್ ಟೀಂ
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ತಂಡ
ಅತೃಪ್ತ ಶಾಸಕರ ವಿರುದ್ದ ದೂರು ನೀಡಲು ಕೆಪಿಸಿಸಿ ಕಚೇರಿಯಿಂದ ವಿಧಾನಸೌಧಕ್ಕೆ ಕಾಂಗ್ರೆಸ್ ನಾಯಕರ ತಂಡ ತೆರಳಿದ್ದು, ಮುಂಬೈಯಲ್ಲಿರುವ ಅತೃಪ್ತ ಶಾಸಕರ ವಿರುದ್ದ ಸ್ಪೀಕರ್ ಗೆ ದೂರು ಕೊಡಲಿದ್ದಾರೆ ಎಂದು ತಿಳಿದುಬಂದಿದೆ.
ದೂರು ಕೊಟ್ಟ ನಂತರ ಮತ್ತೆ ಕೆಪಿಸಿಸಿ ಕಚೇರಿಗೆ ಆಗಮಿಸಿ ರಾಜಕೀಯ ಬೆಳವಣಿಗೆ ಕುರಿತು ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.