ಕರ್ನಾಟಕ

karnataka

ETV Bharat / state

ಸಚಿವ ಸುಧಾಕರ್ ವೈಯಕ್ತಿಕ ಹಾಗೂ ಸದನದ ಹಕ್ಕುಚ್ಯುತಿ ಮಾಡಿದ್ದಾರೆ: ಸಿದ್ದರಾಮಯ್ಯ - ವಿಧಾನಸಭೆಯಲ್ಲಿ ಸುಧಾಕರ್​ ಹಕ್ಕುಚ್ಯುತಿ ಆರೋಪ

ಸಚಿವ ಸುಧಾಕರ್ ವೈಯಕ್ತಿಕವಾಗಿ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್ ವಿರುದ್ಧ ಹಾಗೂ ಸದನದ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

siddramaiah outrage on sudhakar
ಸಿದ್ದರಾಮಯ್ಯ ಹೇಳಿಕೆ

By

Published : Mar 10, 2020, 9:06 PM IST

ಬೆಂಗಳೂರು:ಸಚಿವ ಸುಧಾಕರ್ ವೈಯಕ್ತಿಕವಾಗಿ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್ ವಿರುದ್ಧ ಹಾಗೂ ಸದನದ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸಚಿವ ಸುಧಾಕರ್​ ವಿರುದ್ಧ ಸಿದ್ದರಾಮಯ್ಯ ಕಿಡಿ

ವಿಧಾನಸಭೆಯಲ್ಲಿ ಸಚಿವ ಸುಧಾಕರ್ ಹಾಗೂ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್ ನಡುವಿನ ವಾಗ್ವಾದದ ಕುರಿತು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಧಾಕರ್ ಪೀಠಕ್ಕೆ ಹಾಗೂ ಸದನಕ್ಕೆ ಅಗೌರವ ತೋರಿಸಿದ್ದು, ಇದು ಅವರ ಉದ್ಧಟತನವಾಗಿದೆ. ಇದಕ್ಕೆ ನಾನು ನೋಟಿಸ್ ಕೊಟ್ಟಿದ್ದೇನೆ. ನಿಯಮ191-192 ನಲ್ಲಿ ನೋಟಿಸ್ ಸಲ್ಲಿಕೆಯಾಗಿದೆ. ನನಗೆ ಯಾವುದೇ ವಿಚಾರ ಪ್ರಸ್ತಾಪ ಮಾಡುವುದಕ್ಕೆ ಬಿಡಲಿಲ್ಲ. ಸದನದಲ್ಲಿ ಗದ್ದಲ ಶುರುಮಾಡಿ ಒಂದು ರೀತಿಯಲ್ಲಿ ಗೂಂಡಾ ವರ್ತನೆ ಮಾಡಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ, ಇದು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನಡವಳಿಕೆ ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಸುಧಾಕರ್ ಆಡಿರುವ ಪದಗಳು ಅಸಂವಿಧಾನಿಕ:

ಇವರು ಪ್ರಜಾಪ್ರಭುತ್ವದಲ್ಲಿ ಇಲ್ಲ. ಗದ್ದಲಕ್ಕೆ ಇವರೇ ಕಾರಣ, ಸದನವನ್ನು ನಾಳೆಗೆ ಮುಂದೂಡುವುದಕ್ಕೂ ಇವ್ರೇ ಕಾರಣ. ನಮ್ಮ ಪಕ್ಷದ ನಿಲುವನ್ನು ಸದನದಲ್ಲಿ ಪ್ರಸ್ತಾಪಿಸುತ್ತೇನೆ. ಇಲ್ಲಿ ಏನು ಹೇಳುವುದಿಲ್ಲ ಎಂದರು. ಈಗಾಗಲೇ ನಾನು ಪ್ರಿವಿಲೆಜ್ ಮೂವ್ ಮಾಡಿದ್ದೇನೆ. ಅವರು ಟೆಂಪ್ಟ್ ಮಾಡಿದ್ದಾರಲ್ಲ ಅದನ್ನು ಮುಚ್ಚಿಕೊಳ್ಳುವುದಕ್ಕೆ ಹೀಗೆ ಮಾಡಿದ್ದಾರೆ. ಅವರು ಹಾಗೆ ಮಾತಾಡಿಲ್ಲ, ಸದನದಲ್ಲಿ ರೆಕಾರ್ಡ್ ಇಲ್ಲ. ಹೌಸ್ ಅಡ್ಜರ್ನ್ ಆಗಿತ್ತು, ಅವರು ಬೆಲ್ಲಿಗೆ ಬಂದಿದ್ರು ಆಮೇಲೆ ಬಂದ್ರು. ಸುಧಾಕರ್ ಆಡಿರುವ ಪದಗಳು ಅಸಂವಿಧಾನಿಕ, ಅವರು ಸದನದಲ್ಲಿ ಇರುವುದಕ್ಕೆ ಸಾಧ್ಯ ಇಲ್ಲ. ಇವರು ಹಕ್ಕು ರಚನೆ ಮಾಡುವುದಕ್ಕೆ ಇರುವವರು, ಹಕ್ಕುಚ್ಯುತಿ ಮಾಡುವುದಕ್ಕೆ ಅಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ರಮೇಶ್ ಕುಮಾರ್ ವಿಧಾನಸಭೆ ಅಧ್ಯಕ್ಷರಾಗಿದ್ದಾಗ ಮಾಡಿದ ಆದೇಶ ಇದು. 17 ಜನರಲ್ಲಿ ಸುಧಾಕರ್ ಕೂಡ ಒಬ್ಬರು. 17 ಜನ ಪಕ್ಷದ ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂದು ಎರಡು ಕಡೆ ಆಲಿಸಿ ಅವರು ಜ್ಯುಡಿಶಿಯಲ್ ಆರ್ಡರ್ ಕೊಟ್ಟಿದ್ದರು. ಅವರು ಸುಪ್ರೀಂ ಕೋರ್ಟ್ ಗೆ ಹೋದ್ರು, ಅಲ್ಲಿ ಸ್ಪೀಕರ್ ಆದೇಶವನ್ನು ಎತ್ತಿಹಿಡಿಯಲಾಗಿದೆ. ಇದನ್ನು ಉಲ್ಲೇಖಿಸುತ್ತಾ, ಸ್ಪೀಕರ್ ಪೀಠದಿಂದ ಆದೇಶ ಮಾಡಿದ್ದಾರೆ ಎಂದು ಹೇಳುತ್ತಾ ಮಾನಸಿಕವಾಗಿ ಹಿಂಸೆ ಮಾಡಿದ್ರು ಎಂದು ಹೇಳಿದ್ರು. ನಾವು ನಮ್ಮ ಸ್ಥಾನವನ್ನು ಕಳೆದುಕೊಂಡೆವು. 10 ಶೆಡ್ಯುಲ್ ನಲ್ಲಿ ಅದನ್ನ ಮಾಡಿದ್ರು. ಈ ಚರ್ಚೆ ಮಾಡುವಾಗ ಅವಾಚ್ಯ ಶಬ್ದಗಳನ್ನ ಬಳಸಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ರು.

ABOUT THE AUTHOR

...view details