ಬೆಂಗಳೂರು:ಕಾಫಿ ಡೇ ಎಂಟರ್ಪ್ರೈಸಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ದಿವಂಗತ ಸಿದ್ದಾರ್ಥ್ ಹೆಗ್ಡೆ ಪತ್ನಿ ಮಾಳವಿಕಾ ಹೆಗ್ಡೆ ಅವರನ್ನು ನೇಮಕ ಮಾಡಲಾಗಿದೆ.
ಕಾಫಿ ಡೇ ಗೆ ನೂತನ ಸಾರಥಿ: ಸಿಇಓ ಆಗಿ ಸಿದ್ಧಾರ್ಥ್ ಪತ್ನಿ ಮಾಳವಿಕಾ ಹೆಗ್ಡೆ ನೇಮಕ - ಕಾಫಿ ಡೇ ಸಿಇಓ ಮಾಳವಿಕ ಹೆಗ್ಡೆ
ದಿವಂಗತ ಸಿದ್ದಾರ್ಥ್ ಹೆಗ್ಡೆ ಪತ್ನಿ ಮಾಳವಿಕಾ ಹೆಗ್ಡೆ ಕಾಫಿ ಡೇ ಎಂಟರ್ಪ್ರೈಸ್ಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕವಾಗಿದ್ದಾರೆ.
ಕಳೆದ ವರ್ಷ ಕಾಫಿ ಡೇ ಸ್ಥಾಪಕ ಸಿದ್ದಾರ್ಥ್ ಹೆಗ್ಡೆ ಮಂಗಳೂರಿನಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿದ್ದಾರ್ಥ್ ನಿಧನದಿಂದ ತಾತ್ಕಾಲಿಕ ಅಧ್ಯಕ್ಷರಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ನೂತನ ಸಿಇಒ ನೇಮಕಾತಿ ವಿಷಯವನ್ನು ಸಂಸ್ಥೆ ಖಚಿತಪಡಿಸಿದೆ.
ಕಾಫಿ ಡೇ ಭಾರತದಲ್ಲಿ ಕಾಫಿ ಶಾಪ್ ಸಂಸ್ಕೃತಿಯ ಹರಿಕಾರ ಎಂದು ಪ್ರಸಿದ್ಧಿ ಪಡೆದಿದೆ. ಸದ್ಯಕ್ಕೆ ಸ್ಟಾರ್ ಬಕ್ಸ್, ಬರಿಸ್ತಾ ಸೇರಿದಂತೆ ಹಲವು ಕಾಫಿ ಶಾಪ್ಗಳು ದೇಶದಲ್ಲಿ ಪ್ರಚಲಿತದಲ್ಲಿವೆ. ನೂತನ ಸಿಇಒ ಮಾಳವಿಕಾ, ಸಂಕಷ್ಟದಲ್ಲಿರುವ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.