ಬೆಂಗಳೂರು: ನೇತ್ರಾವತಿ ನದಿ ಬಳಿ ನಾಪತ್ತೆಯಾಗಿರುವ ಸಿದ್ದಾರ್ಥ್ ಪತ್ರ ಬರೆದಿದ್ದು, ಆ ಪತ್ರ ಈಗ ಬಹಿರಂಗವಾಗಿದೆ. ನಿನ್ನೆಯೇ ಕೆಲವು ವಿಷಯಗಳನ್ನು ಪತ್ರವೊಂದರಲ್ಲಿ ಸಿದ್ಧಾರ್ಥ್ ಟೈಪ್ ಮಾಡಿದ್ದರು ಎನ್ನಲಾಗಿದೆ.
ನಿನ್ನೆಯೇ ಪತ್ರ ಬರೆದಿದ್ದ ಸಿದ್ಧಾರ್ಥ್; ಸ್ಫೋಟಕ ಮಾಹಿತಿ ಹೊರ ಹಾಕಿದ ಅವರ ಸೆಕ್ರೆಟರಿ - ನೇತ್ರಾವತಿ ನದಿ ಬಳಿ ಸಿದ್ದಾರ್ಥ್ ನಾಪತ್ತೆ
ಟೈಪ್ ಮಾಡಿದ್ದ ವಿಷಯವನ್ನು 100 ಜನಕ್ಕೆ ಕಳುಹಿಸುವಂತೆ ಹೇಳಿದ್ದರು ಎನ್ನಲಾಗಿದೆ. ನಾಳೆ ಅದನ್ನು ನಾನು ಕೊಟ್ಟ ಲಿಸ್ಟ್ನಲ್ಲಿ ಇರುವವರಿಗೆ ಕಳುಹಿಸು ಎಂದು ಹೇಳಿದ್ದರು ಎಂದು ಸಿದ್ದಾರ್ಥ್ ಅವರ ಸೆಕ್ರೆಟರಿ ತಿಳಿಸಿದ್ದಾರೆ.
ಈ ವಿಷಯವನ್ನು ಸಿದ್ಧಾರ್ಥ್ ಅವರ ಸೆಕ್ರೆಟರಿ ಬಹಿರಂಗ ಪಡಿಸಿದ್ದು, ಟೈಪ್ ಮಾಡಿದ್ದ ವಿಷಯವನ್ನು 100 ಜನಕ್ಕೆ ಕಳುಹಿಸುವಂತೆ ಹೇಳಿದ್ದರು ಎನ್ನಲಾಗಿದೆ. ನಾಳೆ ಅದನ್ನು ನಾನು ಕೊಟ್ಟ ಲಿಸ್ಟ್ನಲ್ಲಿ ಇರುವವರಿಗೆ ಕಳುಹಿಸು ಎಂದು ಹೇಳಿದ್ದರು ಎಂದು ಸಿದ್ದಾರ್ಥ್ ಅವರ ಸೆಕ್ರೆಟರಿ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.
ಸಿದ್ದಾರ್ಥ್ ಅವರ ಕಾಫಿ ಡೇ ವ್ಯವಹಾರ ಲಾಸ್ ನಲ್ಲಿ ಇದ್ದುದರಿಂದ ತೀವ್ರವಾಗಿ ನೊಂದಿದ್ದ ಅವರು, ಈ ಸಂಬಂಧ ತಮಗೆ ಆದ ನೋವನ್ನ ಪತ್ರದಲ್ಲಿ ವಿವರಣೆ ನೀಡಿದ್ದರು. ತಮಗೆ ಐಟಿ ಡಿಜಿ ಕಿರುಕುಳ ನೀಡಿದ್ದರು. ಇದರಿಂದ ಷೇರು ಮಾರಾಟ ಮತ್ತು ವ್ಯವಹಾರ ವಿಸ್ತರಣೆಗೆ ತೀವ್ರ ತೊಂದರೆ ಆಯ್ತು ಎಂದು ಪತ್ರದಲ್ಲಿ ತಮಗಾದ ನೋವನ್ನು ತೋಡಿಕೊಂಡಿದ್ದಾರೆ.