ಕರ್ನಾಟಕ

karnataka

ETV Bharat / state

ಧರ್ಮಸಿಂಗ್ ಸಂಬಂಧಿ ಕೊಲೆ ಪ್ರಕರಣ: ಕೊಲೆಯ ಹಿಂದಿನ ಮಾಸ್ಟರ್ ಮೈಂಡ್ ಮಲತಾಯಿ​ ..!!!

ಸಿದ್ಧಾರ್ಥ್ ತಂದೆ ದೇವೇಂದರ್ ಸಿಂಗ್​ರ ಎರಡನೇ ಪತ್ನಿಯಾದ ಇಂದೂ ಚೌಹಾಣ್ ಈ ಪ್ರಕರಣದ ಮಾಸ್ಟರ್ ಮೈಂಡ್​ ಎಂದು ತಿಳಿದುಬಂದಿದೆ. ಶ್ಯಾಮ್ ಹಾಗೂ ವಿನೋದ್​ ಎಂಬುವವರಿಗೆೆ ಸುಪಾರಿ ನೀಡಿ ಕೊಲೆ ಮಾಡಿಸಿರುವ ಆರೋಪದ ಹಿನ್ನೆಲೆಯಲ್ಲಿ ಇಂದೂ ಅವರನ್ನು ಬುಧವಾರ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದರು.

By

Published : Feb 4, 2021, 3:09 AM IST

ಸಿದ್ಧಾರ್ಥ್​ ಚಿಕ್ಕಮ್ಮ ಬಂಧನ
ಸಿದ್ಧಾರ್ಥ್​ ಚಿಕ್ಕಮ್ಮ ಬಂಧನ

ಬೆಂಗಳೂರು: ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಸಿದ್ಧಾರ್ಥ್ ಕೊಲೆ ಪ್ರಕರಣದಲ್ಲಿ ಅಮೃತಹಳ್ಳಿ ಠಾಣಾ ಪೊಲೀಸರು ಸಿದ್ಧಾರ್ಥ್ ಚಿಕ್ಕಮ್ಮ(ಮಲತಾಯಿ) ಇಂದೂ ಚೌಹಾಣ್​​ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸಿದ್ಧಾರ್ಥ್ ತಂದೆ ದೇವೇಂದರ್ ಸಿಂಗ್​ರ ಎರಡನೇ ಪತ್ನಿಯಾದ ಇಂದೂ ಚೌಹಾಣ್ ಈ ಪ್ರಕರಣದ ಮಾಸ್ಟರ್ ಮೈಂಡ್​ ಎಂದು ತಿಳಿದುಬಂದಿದೆ. ಶ್ಯಾಮ್ ಹಾಗೂ ವಿನೋದ್​ ಎಂಬುವವರಿಗೆೆ ಸುಪಾರಿ ನೀಡಿ ಕೊಲೆ ಮಾಡಿಸಿರುವ ಆರೋಪದ ಹಿನ್ನೆಲೆಯಲ್ಲಿ ಇಂದೂ ಅವರನ್ನು ಬುಧವಾರ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದರು. ಇಂದೂ ಚೌಹಾಣ್​ರನ್ನು ವಿಚಾರಣೆಗೆ ಒಳಪಡಿಸಿದ ನಂತರ, ಇಡೀ ಕೊಲೆ ಪ್ರಕರಣದ ಕಿಂಗ್ ಪಿನ್ ಅವರೇ ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಸಿದ್ಧಾರ್ಥ್​ ಚಿಕ್ಕಮ್ಮ ಬಂಧನ

ಮೃತ ಸಿದ್ಧಾರ್ಥ್ ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಕಾರಣ ಬಹಿರಂಗ ಗೊಂಡಿದ್ದು, ಕಾರಿನ ಸೀಟ್ ಬೆಲ್ಟ್​ನಿಂದ ಕತ್ತು ಬಿಗಿದು ಕೊಲೆ ಮಾಡಿರುವುದು ದೃಢಪಟ್ಟಿದೆ. ಮುಂದಿನ ಸೀಟ್ ನಲ್ಲಿದ್ದ ಸಿದ್ಧಾರ್ಥ್​ರನ್ನು ಉಸಿರುಗಟ್ಟಿಸಿ ಕೊಂದಿದ್ದ ಆರೋಪಿ ಶ್ಯಾಮ್, ಕೊಲೆ ಬಳಿಕ ವಿನೋದ್ ಜೊತೆಗೂಡಿ ಕಾರಿನಲ್ಲೇ ಮೃತದೇಹವನ್ನ ನಲ್ಲಮಲ್ಲ ಅರಣ್ಯಕ್ಕೆ ಕೊಂಡೊಯ್ದಿದ್ದ. ನೆಲ ಅಗೆಯಲು ಸಲಕರಣೆಗಳಿಲ್ಲದ ಕಾರಣ ತೇವವಿದ್ದ ಜಾಗದಲ್ಲಿ‌ ಮರದ ತುಂಡು ಮತ್ತು ಜಾಕ್ ರಾಡಿನಿಂ​ದ ಅಗೆದು ಶವ ಹೂತಿದ್ದಾರೆ. ಶವವನ್ನು ಕೇವಲ 1 ಅಡಿ ಆಳದಲ್ಲಿ ಹೋತಿಟ್ಟು ಅಲ್ಲಿಂದ ಪರಾರಿಯಾಗಿದ್ದರು. ಅಲ್ಲದೆ ಮಾರ್ಗ ಮಧ್ಯೆ ಮದ್ಯ ಖರೀದಿಸಿ ತಿರುಪತಿಗೆ ಪ್ರಯಾಣಬೆಳಸಿದ್ದರು. ಪೊಲೀಸ್ ಭಯದಿಂದ ಆತ್ಮಹತ್ಯೆ ನಿರ್ಧಾರಕ್ಕೆ ಕೂಡ ಬಂದಿದ್ದರು ಎಂದು ತಿಳಿದುಬಂದಿದೆ.

ಆರೋಪಿ ಶ್ಯಾಮ್ ಮೊಬೈಲ್ ಪರಿಶೀಲಿಸಿದ ಪೊಲೀಸರಿಗೆ ಸಿದ್ಧಾರ್ಥ್ ಚಿಕ್ಕಮ್ಮ ಇಂದೂ ಸಂಪರ್ಕದ ಬಗ್ಗೆ ಸುಳಿವು ಸಿಕ್ಕಿದೆ. ಇದೇ ಕರೆಗಳ ಜಾಡು ಹಿಡಿದ ಪೊಲೀಸರು ಸಿದ್ಧಾರ್ಥ್ ಚಿಕ್ಕಮ್ಮನನ್ನ ವಶಕ್ಕೆ ಪಡೆದ ಅಜ್ಞಾತ ಸ್ಥಳದಲ್ಲಿ‌ ಪ್ರಮುಖ ಸೂತ್ರಧಾರಿ ಇಂದೂ ಚೌಹಾಣ್ ವಿಚಾರಣೆ ನೆಡೆಸುತ್ತಿದ್ದಾರೆ.

ಪ್ರಕರಣದ ಹಿನ್ನಲೆ :

ಮಾಜಿ‌ ಮುಖ್ಯಮಂತ್ರಿ ಧರ್ಮಸಿಂಗ್ ಸಂಬಂಧಿ ಸಿದ್ದಾರ್ಥ್​ನನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣ ಸಂಬಂಧ ಅಮೃತಹಳ್ಳಿ ಪೊಲೀಸರು ಆರೋಪಿಯಾದ ವಿನೋದ್​ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದರು.

ತಿರುಪತಿ ಮೂಲದ ವಿನೋದ್ ನೀಡಿದ ಮಾಹಿತಿ ಮೇರೆಗೆ ಅಮೃತಹಳ್ಳಿ ಪೊಲೀಸ್ ಠಾಣೆಯ ವಿಶೇಷ ತಂಡ ನೆಲ್ಲೂರಿನ ನಲ್ಲಮಲ್ಲ‌ ಅರಣ್ಯಪ್ರದೇಶದಲ್ಲಿ ಸಿದ್ದಾರ್ಥ್ ಶವ ಪತ್ತೆ ಮಾಡಲು ಸ್ಥಳಕ್ಕೆ ದೌಡಾಯಿಸಿತ್ತು. ಸ್ಥಳೀಯ ತಹಶೀಲ್ದಾರ್ ಹಾಗೂ ವೈದ್ಯರ ಅನುಮತಿ ಬಳಿಕ ಹೂಳಿರುವ ಶವ ಹೊರ ತೆಗೆಯಲಾಗಿತ್ತು.

ಕೊಲೆ ಪ್ರಕರಣದಲ್ಲಿ ಹಲವು ಆರೋಪಿಗಳು ಭಾಗಿಯಾಗಿರುವ ಶಂಕೆ ಮೇರೆಗೆ ವಿಶೇಷ ತಂಡ ರಚಿಸಲಾಗಿತ್ತು. ಕೊಲೆ ಹಿಂದೆ ವೈಯಕ್ತಿಕ ದ್ವೇಷ ಹಾಗೂ ಹಣಕಾಸಿನ ವೈಷಮ್ಯ ಸೇರಿದಂತೆ ಎಲ್ಲಾ ರೀತಿಯ ಆಯಾಮಗಳಲ್ಲಿ ತನಿಖೆ ನಡೆಸಲಾಗಿತ್ತು. ಇದೀಗ ಮಲತಾಯಿಯೇ ಪ್ರಮುಖ ಆರೋಪಿಯಾಗಿದ್ದು, ಶೀಘ್ರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದೆಂದು ನಗರದ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದರು.

ಇದನ್ನು ಓದಿ:ಮಾಜಿ ಸಿಎಂ ಧರಂಸಿಂಗ್ ಸಂಬಂಧಿ ಕೊಲೆ ಪ್ರಕರಣ.. ಚಿಕ್ಕಮ್ಮ ಇಂದೂ ಚೌಹಾಣ್ ಪೊಲೀಸ್ ವಶಕ್ಕೆ..

ABOUT THE AUTHOR

...view details