ಬೆಂಗಳೂರು: ಕಾಫಿ ಡೇ ಮಾಲೀಕ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರು ಚಾಲಕನಿಂದ ಈ ದೂರು ದಾಖಲು
ಮೊದಲು ಸಕಲೇಶಪುರಕ್ಕೆ ಹೋಗೋಣ ಅಂದ್ರು. ನಂತರ ಮಂಗಳೂರು ಕಡೆ ಕಾರು ಚಲಾಯಿಸು ಎಂದರು. ವಾಕಿಂಗ್ಗೆ ಎಂದು ಹೋದವರು ವಾಪಸ್ ಬರಲೇ ಇಲ್ಲ ಎಂದು ಸಿದ್ಧಾರ್ಥ್ ಕಾರು ಚಾಲಕ ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಿದ್ಧಾರ್ಥ್ ಕಾರು ಚಾಲಕ ನೀಡಿದ ಕಂಪ್ಲೇಂಟ್ ಕಾಪಿ.. ಸಿದ್ದಾರ್ಥ್ ಮನೆಯ ಸುತ್ತ ನೀರವ ಮೌನ :
ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅಳಿಯ ಮತ್ತು ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಎಂಡಿ ಸಿದ್ದಾರ್ಥ್ ನಾಪತ್ತೆ ಹಿನ್ನೆಲೆ ಸಂಬಂಧಿಕರು ಮತ್ತು ಸ್ನೇಹಿತರು ಹಾಗೂ ಜನಪ್ರತಿನಿಧಿಗಳು ಮಾಜಿ ಸಿಎಂ ಎಸ್ ಎಂ ಕೃಷ್ಣ ಮನೆಗೆ ಆಗಮಿಸುತ್ತಿದ್ದಾರೆ. ಸಿಎಂ ಬಿ ಎಸ್ ಯಡಿಯೂರಪ್ಪ, ಮಾಜಿ ಸಚಿವರಾದ ಎಂ ಬಿ ಪಾಟೀಲ್, ಡಿ ಕೆ ಶಿವಕುಮಾರ್, ನಟ ಪುನೀತ್ ರಾಜ್ಕುಮಾರ್, ಗುಪ್ತಚರ ಐಜಿಪಿ ದಯಾನಂದ, ಶಾಸಕ ಸಿ ಟಿ ರವಿ, ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಮಾಜಿ ಶಾಸಕ ಬಿ ಎಲ್ ಶಂಕರ್ ಸೇರಿದಂತೆ ಹಲವಾರು ನಾಯಕರುಗಳು ಎಸ್ಎಂಕೆ ಮನೆಗೆ ಭೇಟಿ ನೀಡಿ ಸಿದ್ದಾರ್ಥ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.