ಕರ್ನಾಟಕ

karnataka

ETV Bharat / state

ಅಧಿವೇಶನ ಚಿತ್ರೀಕರಣಕ್ಕೆ ಮಾಧ್ಯಮಗಳಿಗೆ ನಿರ್ಬಂಧ:ಸಿದ್ದರಾಮಯ್ಯ ಆಕ್ಷೇಪ - ಅಧಿವೇಶನ ಚಿತ್ರೀಕರಣಕ್ಕೆ ಮಾಧ್ಯಮಗಳಿಗೆ ನಿರ್ಬಂಧ

ವಿಧಾನಸಭೆ ಅಧಿವೇಶನವನ್ನು ಚಿತ್ರೀಕರಣ ಮಾಡದಂತೆ ಮಾಧ್ಯಮದವರಿಗೆ ನಿರ್ಬಂಧ ಹೇರಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

siddarmaih reaction about  not allowing medias for session
ಸಿದ್ದರಾಮಯ್ಯ ಆಕ್ಷೇಪ

By

Published : Feb 17, 2020, 7:44 PM IST

ಬೆಂಗಳೂರು:ವಿಧಾನಸಭೆ ಅಧಿವೇಶನವನ್ನು ಚಿತ್ರೀಕರಣ ಮಾಡಲು ಮಾಧ್ಯಮದವರನ್ನು ಬಿಡದಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಧಿವೇಶನದಲ್ಲಿ ಮಾಧ್ಯಮಗಳ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಇಂದು ಮಾಧ್ಯಮಗಳನ್ನ ಅಧಿವೇಶನದ ಒಳಗಡೆ ಬಿಡದೇ ಇರುವುದು ಬಹಳ ತಪ್ಪು. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ಜನರ ಸಮಸ್ಯೆಗಳನ್ನು ಚರ್ಚೆ ಮಾಡೋದು ಅಧಿವೇಶನದಲ್ಲಿ‌ ಮಾಧ್ಯಮದವರನ್ನು ಬಿಡಬೇಕು. ವಿಧಾನಸೌಧದಲ್ಲಿ ಜನರ ಸಮಸ್ಯೆಗಳ ಕುರಿತು ಚರ್ಚೆಯಾಗುತ್ತೆ. ಇದೆಲ್ಲಾ ‌ಹಳ್ಳಿಯ ಜನರಿಗೆ ಹಾಗೂ ಎಲ್ಲರಿಗೂ ಗೊತ್ತಾಗಬೇಕು.

ಸಿದ್ದರಾಮಯ್ಯ ಆಕ್ಷೇಪ

ವಿಧಾನಸಭೆಯಲ್ಲಿ ಗೌಪ್ಯವಾಗಿ ಚರ್ಚೆ ಮಾಡುವುದಲ್ಲ, ಬಹಿರಂಗವಾಗಿರಬೇಕು ಮಾಧ್ಯಮದವರನ್ನ ಬಿಡಬೇಕು. ಇವತ್ತು ಸ್ಪೀಕರ್ ಯಾಕೆ ಈ ತೀರ್ಮಾನ ಮಾಡಿದ್ರು ಗೊತ್ತಿಲ್ಲ..ಬಿಜೆಪಿಯವರು ಈ ಹಿಂದೆ ಅಶ್ಲೀಲ ಫೋಟೊ ನೋಡಿದ್ರು. ಇದನ್ನ ತಪ್ಪಿಸಲು ಈ ರೀತಿ ಮಾಡಿದ್ರು ಮಾಡಿರಬಹುದು ಎಂದು ಆಕ್ರೋಶ ಹೊರ ಹಾಕಿದರು.

For All Latest Updates

ABOUT THE AUTHOR

...view details