ಕರ್ನಾಟಕ

karnataka

ETV Bharat / state

ಪ್ರಧಾನಿ ಮೋದಿ, ಶಾ ಸುಳ್ಳು ಹೇಳುತ್ತಿದ್ದಾರೆ: ಸಿದ್ದರಾಮಯ್ಯ - Amit sha

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಎಲ್ಲರೂ ಸುಳ್ಳು ಹೇಳಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ, ಬಿಜೆಪಿ ಕಾರ್ಯಕರ್ತರು ಮನೆ‌ಮನೆಗೆ ಹೋಗಿ ಸುಳ್ಳು ಹೇಳಿ ಜನರನ್ನು ನಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

siddaramiah
ಬಿಜೆಪಿಗರು ಮಾತ್ರವಲ್ಲದೆ ಮೋದಿ, ಶಾ ಸುಳ್ಳು ಹೇಳುತ್ತಿದ್ದಾರೆ: ಸಿದ್ದರಾಮಯ್ಯ ಆರೋಪ

By

Published : Feb 27, 2020, 3:07 PM IST

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಎಲ್ಲರೂ ಸುಳ್ಳು ಹೇಳಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ, ಬಿಜೆಪಿ ಕಾರ್ಯಕರ್ತರು ಮನೆ‌ಮನೆಗೆ ಹೋಗಿ ಸುಳ್ಳು ಹೇಳಿ ಜನರನ್ನು ನಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ವಿಜಯನಗರ ಕಾಸಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ಪೌರತ್ವ ಕಾಯಿದೆ ಕುರಿತ ವಿಚಾರ ಸಂಕಿರಣ ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದನ್ನು ನಿಯಂತ್ರಿಸುವ ಕಾರ್ಯ ಆಗುತ್ತಿಲ್ಲ. ಈಗಾಗಲೇ ನಡೆದಿರುವ ಹಿಂಸಾಚಾರದಲ್ಲಿ 25 ಮಂದಿ ಸತ್ತಿದ್ದಾರೆ. ಅಷ್ಟೇ ಅಲ್ಲದೆ, ಆರ್​ಎಸ್​ಎಸ್​ ಗೂಂಡಾಗಳು ಪೊಲೀಸ್ ಸಮವಸ್ತ್ರ ಧರಿಸಿ ಜೆಎನ್​​ಯು ವಿವಿ ಒಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಆಗಿಲ್ಲ. ನಮ್ಮದು ಜಾತ್ಯತೀತ ರಾಷ್ಟ್ರ. ಆದರೆ ಇದನ್ನು ಮನುವಾದಿ ರಾಷ್ಟ್ರ ಮಾಡಲು ಬಿಜೆಪಿಯವರು ಹೊರಟಿದ್ದಾರೆ ಎಂದರು.

ಬಿಜೆಪಿಗರು ಮಾತ್ರವಲ್ಲದೆ ಮೋದಿ, ಶಾ ಸುಳ್ಳು ಹೇಳುತ್ತಿದ್ದಾರೆ: ಸಿದ್ದರಾಮಯ್ಯ ಆರೋಪ

ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ ಮಾತನಾಡಿ, ಸಿಎಎ, ಎನ್ಆರ್​ಸಿ ಹಿಂದೂ- ಮುಸ್ಲಿಂ ನಡುವಿನ ಹೋರಾಟ ಅಲ್ಲ. ಇದು ಎಲ್ಲರಿಗೂ ತೊಂದರೆ ಆಗುವ ಕಾಯ್ದೆ. 70 ವರ್ಷಗಳ ಹಿಂದೆಯೇ ನಾವು ಈ ದೇಶದ ಪ್ರಜೆಗಳು. ಇದನ್ನು ಸಾಬೀತುಪಡಿಸುವ ಅಗತ್ಯ ಇಲ್ಲ. ಪೌರತ್ವ ಇಲ್ಲದವರು ಹಾಕಿದ ಮತದಿಂದ ಸರ್ಕಾರ ನಡೆಯುತ್ತಿದೆ ಎಂದರು.

ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ಮಾತನಾಡಿ, ನಮ್ಮ ಸಮಾಜದಲ್ಲಿ ಸಹಬಾಳ್ವೆ ಇರಲಿ ಎನ್ನುವುದಕ್ಕೆ ಸಂವಿಧಾನ ರಚಿಸಲಾಗಿದೆ. ಆದರೆ ಎನ್​ಆರ್​ಸಿ, ಸಿಎಎ ಇದಕ್ಕೆ ವಿರುದ್ಧವಾದ ನಿಲುವನ್ನು ಹೊಂದಿವೆ. ಭಾರತಕ್ಕೆ ಅನೇಕ ನೆರೆ ರಾಷ್ಟ್ರಗಳಿಂದ ನಿರಂತರವಾಗಿ ನಾಗರಿಕರು ವಲಸೆ ಬರುತ್ತಿದ್ದಾರೆ. ಆದರೆ ಮೂರು ರಾಷ್ಟ್ರವನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದು ಏಕೆ? ನೆರೆ ರಾಷ್ಟ್ರದಿಂದ ಬರುವ ಎಲ್ಲರಿಗೂ ಪೌರತ್ವ ಕೊಡುವುದಕ್ಕೆ ನಮ್ಮ ವಿರೋಧವಿಲ್ಲ. ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಆಶ್ರಯ ಕೊಡುತ್ತೇವೆ ಎನ್ನುತ್ತಾರೆ. ಪೌರತ್ವ ಕಾಯ್ದೆ ಅಡಿ ಅನೇಕ ಪ್ರಶ್ನೆಗಳು ಉಳಿದಿವೆ. ಬಿಜೆಪಿ ನಾಯಕರು ಮಾತನಾಡುವಾಗ ಪಾಕಿಸ್ತಾನ ನಮ್ಮ ವೈರಿ ರಾಷ್ಟ್ರ ಎಂದು ಹೇಳುತ್ತಿವೆ ಮತ್ತು ಅದಕ್ಕೆ ಪೂರಕ ಕಾಯ್ದೆ ತರುವ ಕಾರ್ಯ ಮಾಡುತ್ತಿದ್ದಾರೆ. ಹೀಗಾದರೆ ಮುಂದೆ ವಿಶ್ವಮಟ್ಟದಲ್ಲಿ ನಮ್ಮ ಘನತೆ ಕಡಿಮೆ ಆಗಲಿದೆ ಎಂದರು.

ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಮಾತನಾಡಿ, ನಮ್ಮ ದೇಶದ ಜನತೆಯ ಬಗ್ಗೆ ಮಾನವೀಯತೆ ಇರಲಿ. ನಾವು 70 ವರ್ಷದಲ್ಲಿ ಮಾಡಿದ ಸಾಧನೆ ಏನೂ ಅಲ್ಲ ಅಂತ ಜನರನ್ನು ನಂಬಿಸುವ ಕಾರ್ಯ ಮಾಡಿದ ಇವರು ಮುಂದೆ ಏನು ಬೇಕಾದರೂ ಮಾಡಬಹುದು. ಇವರು ಮಾಡಿದ ಅನ್ಯಾಯ ಗಮನಕ್ಕೆ ಬರುತ್ತಿಲ್ಲ. ಜನರನ್ನು ವಂಚಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ದೂರಿದರು.

ಸಭೆಯಲ್ಲಿ ರಾಜ್ಯಸಭೆ ಸದಸ್ಯರಾದ ರಾಜೀವ್ ಗೌಡ, ಜಿ.ಸಿ. ಚಂದ್ರಶೇಖರ್, ನಾಸಿರ್ ಹುಸೇನ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್​ಸಿ ಐವಾನ್ ಡಿಸೋಜಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವೆ ರಾಣಿ ಸತೀಶ್ ಹಾಗೂ ಪಕ್ಷದ ನಾಯಕರು ಉಪಸ್ಥಿತರಿದ್ದರು.

ABOUT THE AUTHOR

...view details