ಕರ್ನಾಟಕ

karnataka

ETV Bharat / state

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತೀರ್ಮಾನ ಕೈಬಿಡುವಂತೆ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ!! - bangalore sidaramayya news

ತಿದ್ದುಪಡಿ ಹೆಸರಲ್ಲಿ ಕಾಯ್ದೆಯ ಆತ್ಮವನ್ನೇ ಸರ್ಕಾರ ಕೊಲ್ಲಲು ಹೊರಟಿದೆ. ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ತರುವ ನಿರ್ಧಾರ ಕೈಬಿಡಲು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಒಂದು ವೇಳೆ ಈ ತೀರ್ಮಾನ ಕೈಬಿಡದಿದ್ರೆ ಜನರ ಚಳವಳಿಗೆ ಚಾಲನೆ ನೀಡುವುದಾಗಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

siddaramayya wrote letter
ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ

By

Published : Jun 17, 2020, 4:15 PM IST

ಬೆಂಗಳೂರು :ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತೀರ್ಮಾನ ಕೈಬಿಡುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ.

ತಿದ್ದುಪಡಿ ಹೆಸರಲ್ಲಿ ಕಾಯ್ದೆಯ ಆತ್ಮವನ್ನೇ ಸರ್ಕಾರ ಕೊಲ್ಲಲು ಹೊರಟಿದೆ. ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ತರುವ ನಿರ್ಧಾರ ಕೈಬಿಡಲು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಒಂದು ವೇಳೆ ಈ ತೀರ್ಮಾನ ಕೈಬಿಡದಿದ್ರೆ ಜನರ ಚಳವಳಿಗೆ ಚಾಲನೆ ನೀಡುವುದಾಗಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ

ಸಿದ್ದರಾಮಯ್ಯ ಪತ್ರದ ವಿವರ :ಜೂನ್‌ 11ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರವು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಸೆಕ್ಷನ್ 79 ಎ, ಬಿ, ಸಿ ಮತ್ತು 80 ನ್ನು ಪೂರ್ವಾನ್ವಯವಾಗುವಂತೆ ರದ್ದುಪಡಿಸುವುದು ಹಾಗೂ ಪ್ರಸ್ತುತ ಬಾಕಿ ಉಳಿದಿರುವ 79ಎ ಮತ್ತು 79 ಬಿ ಪ್ರಕರಣಗಳನ್ನು ವಜಾ ಮಾಡುವುದು. ಸೆಕ್ಷನ್ 63ರಡಿ ವ್ಯಕ್ತಿಗೆ ಅಥವಾ ಒಂದು ಕುಟುಂಬ ಕೃಷಿ ಭೂಮಿ ಹೊಂದಬಹುದಾದ ಪ್ರಮಾಣವನ್ನು 10 ಯುನಿಟ್‍ನಿಂದ 20 ಯುನಿಟ್‍ಗೆ, ಗರಿಷ್ಠ 40 ಯುನಿಟ್‍ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ

ಕೇರಳ ರಾಜ್ಯದಲ್ಲಿ ಕುಟುಂಬವೊಂದು ಗರಿಷ್ಠ 20 ಎಕರೆ ಭೂಮಿಯನ್ನು ಹೊಂದಬಹುದು. ತಮಿಳುನಾಡಿನಲ್ಲಿ 30 ಎಕರೆ, ಆಂಧ್ರಪ್ರದೇಶದಲ್ಲಿ 54 ಎಕರೆ, ಬಿಹಾರದಲ್ಲಿ 45 ಎಕರೆಗಳನ್ನು ಹೊಂದಬಹುದಾಗಿದೆ. ಆದರೆ, ಕರ್ನಾಟಕದಲ್ಲಿ 216 ಎಕರೆ ಭೂಮಿ ಹೊಂದಲು ಅವಕಾಶ ಕಲ್ಪಿಸಲಾಗಿದೆ. ಅಕ್ಕಪಕ್ಕದ ಎಲ್ಲಾ ರಾಜ್ಯಗಳಲ್ಲಿ ತೋಟದ ಭೂಮಿ 10 ಎಕರೆ ಹೊಂದಬಹುದಾದ್ರೆ, ನಮ್ಮಲ್ಲಿ 56 ಎಕರೆ ಮತ್ತು ನೀರಾವರಿ ಭೂಮಿಯನ್ನು 80 ಎಕರೆಯವರೆಗೆ ಹೊಂದಲು ಅವಕಾಶ ಮಾಡಲು ಹೊರಟಿರುವುದಾಗಿ ತಿಳಿದು ಬಂದಿದೆ. ಇದರಿಂದಾಗಿ ನೀರಾವರಿ ಭೂಮಿಯು ಬಂಡವಾಳಶಾಹಿಗಳ ಪಾಲಾಗುತ್ತದೆ.

ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ಅತ್ಯಂತ ದೊಡ್ಡ ಇತಿಹಾಸವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭೂ ಸುಧಾರಣೆಯು ಸಹ ಮುಖ್ಯ ಅಜೆಂಡಾವಾಗಿತ್ತು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1935ರ ಆಸುಪಾಸಿನಲ್ಲಿ ಭೂಮಿಯು ರಾಷ್ಟ್ರೀಕರಣವಾಗಬೇಕೆಂದು ಹೇಳಿದ್ದರು. ಅಸಂಖ್ಯಾತ ಜನ ಭೂ ಸುಧಾರಣೆಗಾಗಿ ಪ್ರಾಣ ತೆತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕಾಗೋಡಿನ ಗೇಣಿ ಪದ್ಧತಿ ವಿರುದ್ಧದ ಹೋರಾಟವು 1961ರ ಭೂ ಸುಧಾರಣಾ ಕಾಯ್ದೆಗೆ ದಾರಿ ಮಾಡಿಕೊಟ್ಟಿತ್ತು.

ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ

ಆನಂತರ ದೇವರಾಜು ಅರಸು ರವರು 1974ರಲ್ಲಿ ತಂದ ತಿದ್ದುಪಡಿಗಳಿಂದಾಗಿ ರಾಜ್ಯದ ಕೃಷಿಕರು ನೆಮ್ಮದಿ ಕಾಣುವಂತಾಯಿತು. ನಮ್ಮಲ್ಲಿ ಭೂ ಸುಧಾರಣೆ ಕೃಷಿ ಮತ್ತು ಕೈಗಾರಿಕೆಗಳೆರಡು ಸಮತೋಲಿತ ಅಭಿವೃದ್ಧಿ ಸಾಧಿಸಿವೆ ಎಂದರೆ ಅದರ ಹಿಂದೆ ಭೂಮಿಯ ಹಂಚಿಕೆ ಕಾರಣವಾಗಿದೆ. ಸಾಮಾಜಿಕ ಮೂಲಭೂತ ಸೌಕರ್ಯವಾದ ಭೂಮಿಯ ಲಭ್ಯತೆಯ ಆಧಾರದ ಮೇಲೆಯೇ ರಾಜ್ಯದ ರೈತರ ಖರೀದಿ ಸಾಮರ್ಥ್ಯ ಹೆಚ್ಚಿ ಆರ್ಥಿಕತೆಗೆ ವೇಗ ಬರಲು ಸಾಧ್ಯವಾಗಿದೆ. ಜನ ಭೂಮಿ ಮಾರುವುದರಿಂದ ತಕ್ಷಣಕ್ಕೆ ಆರ್ಥಿಕತೆಗೆ ಚೈತನ್ಯ ಬರಬಹುದಾದರೂ ಭವಿಷ್ಯದಲ್ಲಿ ಜನರ ಕೈಯ್ಯಲ್ಲಿದ್ದ ಹಣ ಖರ್ಚಾಗಿ ಖರೀದಿ ಸಾಮರ್ಥ್ಯ ಕುಸಿದು ರಾಜ್ಯದ ಆರ್ಥಿಕತೆ ಪಾತಾಳದತ್ತ ಸಾಗುತ್ತದೆ.

ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ

2015-16ರ ಕೃಷಿ ಗಣತಿ ಪ್ರಕಾರ ರಾಜ್ಯದಲ್ಲಿ 86.81 ಲಕ್ಷ ರೈತರು 2 ಕೋಟಿ 60 ಲಕ್ಷ ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಕುಟುಂಬವೊಂದು ಸರಾಸರಿ 3 ಎಕರೆ ಭೂಮಿ ಹೊಂದಿದೆ. 2015-16ರಲ್ಲಿ ಪರಿಶಿಷ್ಟ ಜಾತಿಯ 97,300 ಕುಟುಂಬಗಳು 2,43,760 ಎಕರೆ ಭೂಮಿಯ ಒಡೆತನ ಹೊಂದಿದ್ದರೆ, ಪರಿಶಿಷ್ಟ ಪಂಗಡದ 52,100 ಕುಟುಂಬಗಳು 1,60,600 ಎಕರೆ ಭೂಮಿಯ ಒಡೆತನವನ್ನು ಹೊಂದಿವೆ. ಅಂದರೆ ಸುಮಾರು 4 ಕೋಟಿ ಜನ ಕೃಷಿ ಚಟುವಟಿಕೆಯಲ್ಲಿ ನೇರವಾಗಿ ತೊಡಗಿದ್ದಾರೆಂಬುದು ಇದರ ಅರ್ಥ.

ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ

ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಹೆಸರಿನಲ್ಲಿ ಕಾಯ್ದೆಯ ಆತ್ಮವನ್ನೇ ಕೊಲ್ಲಲು ಹೊರಟಿರುವ ತೀರ್ಮಾನವನ್ನು ತಕ್ಷಣವೇ ಕೈ ಬಿಡಬೇಕು. ಜೊತೆಗೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಈ ಕ್ಷಣದಿಂದ ರದ್ದುಪಡಿಸಬೇಕು. ಮತ್ತು ಕೇಂದ್ರ ಸರ್ಕಾರ ಈ ಎರಡು ಕಾಯ್ದೆಗಳನ್ನು ಕೇಂದ್ರವು ಕೈಬಿಡುವಂತೆ ರಾಜ್ಯ ಸರ್ಕಾರ ಒತ್ತಾಯಿಸಬೇಕೆಂದು ಆಗ್ರಹಿಸುತ್ತೇನೆ ಎಂದು ತಮ್ಮ ಸುದೀರ್ಘ ಪತ್ರದಲ್ಲಿ ವಿವರಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ

ABOUT THE AUTHOR

...view details