ಬೆಂಗಳೂರು:ಸಾಂಪ್ರದಾಯಿಕ ಕೆಲಸ ಮಾಡುವವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ವಿವಿಧ ಸಮುದಾಯದ ಸಂಘಟನೆಗಳ ಮುಖಂಡರ ಸಭೆ ನಡೆಸಿ ಲಾಕ್ಡೌನ್ ಹಿನ್ನೆಲೆಯಲ್ಲಿ ಉಂಟಾಗಿರುವ ಸಂಕಷ್ಟದ ಬಗ್ಗೆ ಚರ್ಚೆಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ರೈತ ಸಂಘದವರು, ಜೆಡಿಎಸ್ ಸೇರಿದಂತೆ ಬಿಜೆಪಿ ಬಿಟ್ಟು ಎಲ್ಲಾ ಪ್ರತಿಪಕ್ಷಗಳ ಸಭೆಯನ್ನು ಗುರುವಾರ ಕರೆಯುವುದಾಗಿ ಹೇಳಿದರು.
ಸಾಂಪ್ರದಾಯಿಕ ಕೆಲಸಗಾರರು, ರೈತರ ಸಮಸ್ಯೆಗಳ ವಿರುದ್ಧ ಲಾಕ್ಡೌನ್ ಓಪನ್ ಮಾಡಿದ ಮೇಲೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಈಗ ರಾಜಕೀಯ ಮಾಡುವುದಕ್ಕೆ ಹೋಗಲ್ಲ ಎಂದರು.
ಸಂಪ್ರದಾಯಿಕ ಕೆಲಸ ಮಾಡುವ ಸಂಘಟನೆಯವರು, ಆಟೋ ಚಾಲಕ ಸಂಘದವರು ಹೀಗೆ 20ಕ್ಕೂ ಹೆಚ್ಚು ಸಂಘಟನೆಯವರು ಸಭೆಗೆ ಬಂದಿದ್ದರು. ಲಾಕ್ಡೌನ್ ನಂತರ ಆಗಿರುವ ತೊಂದರೆಗೆ ಸರ್ಕಾರ ಏನಾದರು ಸಹಾಯ ಮಾಡಿದೆಯೇ ಎಂದು ಸ್ವತಃ ಅವರಿಂದಲೇ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಲಿಖಿತ ರೂಪದಲ್ಲಿ ಅವರ ಸಮಸ್ಯೆಗಳನ್ನು ನೀಡಿದ್ದಾರೆ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಡಿವಾಳ, ಸವಿತಾ ಸಮಾಜದವರು, ಕುಂಬಾರಿಕೆ, ಗಾಣಿಗ ಸಮಾಜದವರು ಭೇಟಿಯಾಗಿದ್ದರು. ಸಲೂನ್ ಮುಚ್ಚಿದ್ದರಿಂದ ಸವಿತಾ ಸಮಾಜದವರಿಗೆ ತುಂಬಾ ಕಷ್ಟವಾಗಿದೆ. ಇವರು ಅವತ್ತು ಸಂಪಾದನೆ ಮಾಡಿ ಜೀವನ ನಡೆಸಬೇಕು. 21 ಲಕ್ಷ ಜನ ಸಂಘಟಿತ ಕಾರ್ಮಿಕರಿದ್ದಾರೆ. ಇನ್ನೂ ಹೆಚ್ಚು ಜನ ಅಸಂಘಟಿತ ಕಾರ್ಮಿಕರಿದ್ದಾರೆ. ಕಾರ್ಮಿಕ ಕಲ್ಯಾಣ ನಿಧಿಯಿಂದ ಕೆಲವರಿಗೆ ಹಣ ನೀಡಿದ್ದಾರೆ ಎಂದು ಹೇಳಿದರು.