ಬೆಂಗಳೂರು :ಮಾಜಿ ಮೇಯರ್ ಸಂಪತ್ ರಾಜ್ ಉಚ್ಚಾಟನೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆ ಮಾತುಕತೆ ನಡೆಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಂಪತ್ ರಾಜ್ ಉಚ್ಚಾಟನೆ ಸಂಬಂಧ ಡಿಕೆಶಿ ಜತೆ ಮಾತನಾಡುತ್ತೇನೆ: ಸಿದ್ದರಾಮಯ್ಯ - ಸಂಪತ್ ರಾಜ್ ಉಚ್ಚಾಟನೆ
ಮಾಜಿ ಮೇಯರ್ ಸಂಪತ್ ರಾಜ್ ಉಚ್ಚಾಟನೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆ ಮಾತುಕತೆ ನಡೆಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಂಪತ್ ರಾಜ್ ಉಚ್ಚಾಟನೆ ಸಂಬಂಧ ಡಿಕೆಶಿ ಜತೆ ಮಾತನಾಡುತ್ತೇನೆ: ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಜೈಲಿನಿಂದ ಸಂಪತ್ ರಾಜ್ ಬಿಡುಗಡೆ ಆಗಿದ್ದಾರೆ. ಸಂಪತ್ ರಾಜ್ ಉಚ್ಚಾಟನೆಗೆ ಅಖಂಡ ಶ್ರೀನಿವಾಸಮೂರ್ತಿ ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಮಾತನಾಡ್ತೀನಿ ಎಂದರು.
ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶುಭಾಶಯ ಸಲ್ಲಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಹಿರಿಯರು, ಅನುಭವಿ ರಾಜಕಾರಣಿ, ಅವರಿಂದ ಪಕ್ಷಕ್ಕೆ ಶಕ್ತಿ ಬರುತ್ತೆ ಎಂದಿದ್ದಾರೆ.