ಬೆಂಗಳೂರು: ನಾನು ವಕೀಲಿಕೆ ಮರು ಪ್ರಾರಂಭಿಸುತ್ತಿಲ್ಲ. ಅದು ಸಾಧ್ಯವೂ ಆಗುವುದಿಲ್ಲ. ಆದರೆ ನನ್ನ ಸನ್ನದು (ಎನ್ರೋಲ್ಮೆಂಟ್ ರಿನೀವಲ್) ಅಮಾನತು ಮಾಡಿದ್ದರು. ಆ ಅಮಾನತ್ತನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದೇನೆ. ಇಲ್ಲವಾದರೆ ನಾನು ವಕೀಲ ಎಂದು ಪರಿಗಣಿಸಲ್ಪಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಾಂವಿಧಾನಿಕ ಹುದ್ದೆಯಲ್ಲಿ ಇದ್ದಿದ್ದರಿಂದ ಬಾರ್ ಅಸೋಸಿಯೇಷನ್ ಸಿದ್ದರಾಮಯ್ಯ ಅವರ ವಕೀಲಿಕೆ ಸನ್ನದನ್ನು ಅಮಾನತಿನಲ್ಲಿ ಇಟ್ಟಿತ್ತು. ಇದೀಗ ಆ ಅಮಾನತ್ತನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಿದ್ದಾರೆ. ಮೈಸೂರಿನಲ್ಲಿ ಫ್ರೀ ಕಾಶ್ಮೀರ ಪ್ಲೇಕಾರ್ಡ್ ಹಿಡಿದಿದ್ದ ಯುವತಿಯ ಪರ ನಾನು ವಕಾಲತ್ತು ವಹಿಸುತ್ತಿಲ್ಲ. ಆದರೆ ವಕಾಲತ್ತು ವಹಿಸುವವರನ್ನು ಬೆಂಬಲಿಸುತ್ತೇನೆ ಎಂದು ಇದೇ ವೇಳೆ ತಿಳಿಸಿದರು.