ಕರ್ನಾಟಕ

karnataka

ETV Bharat / state

ಇಮೇಜ್ ಇದ್ರೆ ಅಲ್ವಾ ಡೌನ್ ಆಗೋದು: ಕುಮಾರಸ್ವಾಮಿಗೆ ಗುಟುರು ಹಾಕಿದ 'ಟಗರು'! - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಕಾಂಗ್ರೆಸ್​​​​​ನವರ ಸಹವಾಸ ಮಾಡಿ 12 ವರ್ಷಗಳ ಕಾಲ ಇದ್ದ ಗುಡ್ ವಿಲ್ ಅನ್ನು ಕಳೆದುಕೊಂಡೆ ಎಂಬ ಕುಮಾರಸ್ವಾಮಿ ಹೇಳಿಕೆಗೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಗುಡ್ ವಿಲ್ ಇದ್ರೆ ಅಲ್ವಾ ಗುಡ್ ವಿಲ್ ಕಡಿಮೆ ಆಗೋದು ಎಂದು ವ್ಯಂಗ್ಯವಾಡಿದ್ದಾರೆ.

siddaramaih talk on hdk statement
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

By

Published : Dec 6, 2020, 6:08 PM IST

ಬೆಂಗಳೂರು:ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಇಮೇಜ್ ಡೌನ್ ಆಯ್ತು ಅಂತಾರೆ. ಇಮೇಜ್ ಇದ್ರೆ ಅಲ್ವಾ ಡೌನ್ ಆಗೋದು ಎಂದು ಪ್ರತಿಪಕ್ಷ ನಾಯಕ, ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಶಿವಾನಂದ ವೃತ್ತದ ಸಮೀಪದ ಸರ್ಕಾರಿ ನಿವಾಸದಲ್ಲಿ ಮಾತನಾಡಿದ ಅವರು, ಗುಡ್ ವಿಲ್ ಇದ್ರೆ ಅಲ್ವಾ ಗುಡ್ ವಿಲ್ ಕಡಿಮೆ ಆಗೋದು ಎಂದು ಹೆಚ್​ಡಿಕೆ ಅವರ ಕಾಲೆಳೆದರು.

ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ 59 ಸ್ಥಾನ ಗೆದ್ದಿದ್ದೆವು. ನಂತರ ಚುನಾವಣೆಯಲ್ಲಿ 28, 2013 ರಲ್ಲಿ 44 ಸ್ಥಾನಗಳನ್ನು ಗೆದ್ರು. 2018 ರಲ್ಲಿ 38 ಗೆದ್ದಿದ್ದಾರೆ. ನಾನು ಬಿಟ್ಟ ಬಳಿಕ ಕಳೆದುಕೊಂಡಿದ್ದೇ ಜಾಸ್ತಿ. ಎಲ್ಲಿ ಗುಡ್ ವಿಲ್, ಗುಡ್ ವಿಲ್ ಇದ್ದಿದ್ದರೆ ಹೆಚ್ಚು ಸ್ಥಾನ ಗೆಲ್ಲಬೇಕಿತ್ತು ಎಂದರು.

ಸದನ ನಡೆಸಬೇಕಾ ಅಥವಾ ಬೇಡ್ವಾ ಅನ್ನುವ ಬಗ್ಗೆ ಚರ್ಚೆ ಆಗಬೇಕು. ಗ್ರಾಮ ಪಂಚಾಯತ್​ ಚುನಾವಣೆ ಇರುವುದರಿಂದ ಶಾಸಕರು ಬರಲ್ಲ. ನಾಳೆ ಕಲಾಪ ಸಲಹಾ ಸಮಿತಿಯ ಸಭೆ ಕರೆಯುತ್ತಾರೆ. ಅಲ್ಲಿ ನಾವು ಸುದೀರ್ಘ ಚರ್ಚೆಗೆ ಅವಕಾಶ ಕೇಳುತ್ತೇವೆ ಎಂದರು.

ಹೆಚ್​ಡಿಕೆ ವಿರುದ್ಧ ಕುಟುಕಿದ ಸಿದ್ದರಾಮಯ್ಯ

ಓದಿ:'ಕೈ' ನಂಬಿ ಕೆಟ್ಟೆ, ದೇವೇಗೌಡರ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದೆ: ಹೆಚ್​ಡಿಕೆ ಹೀಗೆ ಹೇಳಿದ್ಯಾಕೆ?

ನಾಳೆ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ರೆ, ಜೆಡಿಎಸ್ ನಿಲುವು ನೋಡಬೇಕು. ದೇವೇಗೌಡರು ಸೆಕ್ಯುಲರ್ ಅಂತ ಹೇಳ್ತಾರೆ, ಆದರೆ ಯಾರಿಗೆ ಬೆಂಬಲ ನೀಡ್ತಾರೆ ನೋಡೋಣ. ನಾಳೆ ಪರಿಷತ್ ಸಭಾಪತಿ ಬದಲಾವಣೆಗೆ ಬಿಜೆಪಿ ಮುಂದಾದ್ರೆ, ಜೆಡಿಎಸ್ ನಮಗೆ ಸಪೋರ್ಟ್ ಮಾಡಬೇಕು. ಇಲ್ಲವಾದಲ್ಲಿ ಜನರಿಗೆ ಗೊತ್ತಾಗುತ್ತೆ, ಜೆಡಿಎಸ್ ನಿಲುವು ಏನು ಎನ್ನುವುದು ಎಂದರು.

ಸಮ್ಮಿಶ್ರ ಸರ್ಕಾರ ರಚನೆಯಾಗುವಾಗ ನಾನು ಯಾರನ್ನು ಭೇಟಿ ಮಾಡಿರಲಿಲ್ಲ. ಹೀಗಿರುವಾಗ ಟ್ರ್ಯಾಪಿಂಗ್ ಅನ್ನುವ ಪ್ರಶ್ನೆ ಎಲ್ಲಿಂದ ಹುಟ್ಟುತ್ತದೆ. ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದರು. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು ಅನ್ನೋ ವಿಚಾರಕ್ಕೆ, ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ವಿ. ನಾನು ಮೊದಲ ಹಂತದ ಮಾತುಕತೆಯಲ್ಲಿ ಇರಲಿಲ್ಲ ಎಂದರು.

ವಿಧಾನಸಭೆ, ಪರಿಷತ್​ನ ಹಿರಿಯ ಶಾಸಕರ ಸಭೆ ಕರೆದಿದ್ವಿ. ನಾಳೆಯಿಂದ ಸಭೆ ಆರಂಭ ಆಗ್ತಿದೆ. ಅಜೆಂಡಾ ಸೆಟ್ ಆಗಿಲ್ಲ, ಯಾವ ವಿಚಾರ ಪ್ರಸ್ತಾಪ ಮಾಡುತ್ತಾರೆ ಅಂತ ಗೊತ್ತಿಲ್ಲ. ಹೊಸ ವಿಚಾರಗಳನ್ನು ಹುಟ್ಟು ಹಾಕುತ್ತಿದ್ದಾರೆ. ರಾಜ್ಯದಲ್ಲಿ ಪ್ರವಾಹವಾಗಿದ್ದು, ಆಗಸ್ಟ್ ತಿಂಗಳಿನಿಂದ ಇದುವರೆಗೂ ಪರಿಹಾರ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ರೈತರಿಗೆ ಬೆಂಬಲ ಬೆಲೆ ಕೊಟ್ಟಿಲ್ಲ, ವಿದ್ಯುತ್ ಶಕ್ತಿನಲ್ಲಿ ಹಗರಣಗಳು ನಡೆಯುತ್ತಿದೆ. ಕಾರ್ಮಿಕ ಕಾಯಿದೆ, ಭೂ ತಿದ್ದುಪಡಿ ಕಾಯಿದೆ ತರಲು ಹೊರಟಿದ್ದಾರೆ. ಗೋ ಹತ್ಯೆ ನಿಷೇಧ, ಲವ್ ಜಿಹಾದ್ ಬಗ್ಗೆ ಅವರ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ ಎಂದು ಹೇಳಿದರು.

ಬೆಂಗಳೂರು ಹೋಟೆಲ್, ಬೀದಿಬದಿ ವ್ಯಾಪಾರಿಗಳಿಗೆ ದಂಡ ಹಾಕುತ್ತಿರುವ ವಿಚಾರ ಮಾತನಾಡಿ, ಎಲ್ಲಿ ಬರುತ್ತೋ ಅಲ್ಲಿ ವಸೂಲಿ ಮಾಡ್ತಿದ್ದಾರೆ. ಯಾವುದನ್ನು ಬಿಡುತ್ತಿಲ್ಲ. ಲೂಟಿ ಮಾಡುವುದಷ್ಟೇ ಇವರ ಕೆಲಸ ಎಂದರು.

ABOUT THE AUTHOR

...view details