ಕರ್ನಾಟಕ

karnataka

ETV Bharat / state

ಹಿರಿಯ ಪತ್ರಕರ್ತ ದಿನೇಶ್ ಮಟ್ಟುಗೆ ಜೀವ ಬೆದರಿಕೆ, ಪೊಲೀಸರಿಗೆ ದೂರು - bangalore news

ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕಡ್ತಲ ಅವರು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದಿನೇಶ್ ಮಟ್ಟು ಡಿ.ಜೆ. ಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

siddaramaiahs-media-consultant-is-life-threatening
siddaramaiahs-media-consultant-is-life-threatening

By

Published : Jan 14, 2020, 11:32 PM IST

Updated : Jan 14, 2020, 11:44 PM IST

ಬೆಂಗಳೂರು: ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರಿಗೆ ಜೀವ ಬೆದರಿಕೆ ಹಿನ್ನೆಲೆ ಡಿ.ಜೆ. ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಪ್ರತಿ

ಬಿಲ್ಲವ - ಮುಸ್ಲಿಂ ಸ್ನೇಹ ಸಮಾವೇಶದಲ್ಲಿ ಭಾಗಿಯಾಗದಂತೆ ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕಡ್ತಲ ಕರೆ ಮಾಡಿ ಬೆದರಿಕೆಯೊಡ್ಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಪ್ರತಿ

ಘಟನೆಯ ಹಿನ್ನಲೆ:

ಜನವರಿ 4 ರಂದು ದಿನೇಶ್ ಅಮೀನ್ ಮಟ್ಟುಗೆ ಕರೆ ಮಾಡಿದ್ದ ವಿಶ್ವಾನಥ್ ಶೆಟ್ಟಿ ಕಡ್ತಲ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಸಮಾವೇಶದಲ್ಲಿ ಭಾಗಿಯಾದರೆ 6 ಗುಂಡು ಹಾರಿಸಿ ಗುಂಡಿಕ್ಕಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೇ ವಿಚಾರವನ್ನ ಮಟ್ಟು ಅವರು, ಕಳೆದ ಜನವರಿ 11ರಂದು ನಡೆದ ಕಾರ್ಯಕ್ರಮದಲ್ಲೂ ಪ್ರಸ್ತಾಪಿಸಿದ್ದರು.

Last Updated : Jan 14, 2020, 11:44 PM IST

ABOUT THE AUTHOR

...view details