ಬೆಂಗಳೂರು:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿರುವ ಚೊಚ್ಚಲ ಬಜೆಟ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರದ ಬಜೆಟ್ಗೆ ಲೇವಡಿ ಮಾಡಿ ಟ್ವೀಟ್ ಮಾಡಿರುವ ಸಿದ್ಧರಾಮಯ್ಯ, ಚಿಪ್ಪುನಲ್ಲಿ ಕೇಂದ್ರ ಬಜೆಟ್ ನೀಡಿದ್ದಾರೆ, ಎಲ್ಲವೂ ಸೂರ್ಯನ ಕೆಳಗಿವೆ, ಆದರೆ, ಯಾವುದು ಕೈಗೆ ಸಿಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.