ಕರ್ನಾಟಕ

karnataka

ETV Bharat / state

ಶೋಭಾ ಕರಂದ್ಲಾಜೆ ತಮ್ಮ ಹೇಳಿಕೆ ವಾಪಸ್ ಪಡೆದು, ರೈತರ ಕ್ಷಮೆ ಕೇಳಲಿ: ಸಿದ್ದರಾಮಯ್ಯ ಟ್ವೀಟ್​ - Siddaramaiah outrage against Shobha Karandlaje in twitter

ಶೋಭಾ ಕರಂದ್ಲಾಜೆ ಅವರ ಹೇಳಿಕೆ ಕೇಂದ್ರ ಬಿಜೆಪಿ ಸರ್ಕಾರದ ಅಧಿಕೃತ ನಿಲುವಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಈ ಬಗ್ಗೆ ಸ್ಪಷ್ಟನೆ ನೀಡಿ ಅಧಿಕ ಪ್ರಸಂಗಿ ಸಚಿವೆಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

shobha-karandlaje and siddaramiah
ಶೋಭಾ ಕರಂದ್ಲಾಜೆ ಹಾಗೂ ಸಿದ್ದರಾಮಯ್ಯ

By

Published : Aug 18, 2021, 3:55 PM IST

ಬೆಂಗಳೂರು: ದೆಹಲಿಯಲ್ಲಿ ಹೋರಾಟನಿರತ ರೈತರನ್ನು ಅವಹೇಳನ ಮಾಡಿ ಮಾತನಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸರ್ಕಾರದ ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನು 'ದಲ್ಲಾಳಿಗಳು', 'ಮಧ್ಯವರ್ತಿಗಳು' ಎಂದು ಅವಮಾನಿಸಿರುವ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಖಂಡನೀಯ. ಅವರು ತಕ್ಷಣ ತಮ್ಮ ಹೇಳಿಕೆ ವಾಪಸ್​​ ಪಡೆದು, ರೈತರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಶೋಭಾ ಕರಂದ್ಲಾಜೆ ಅವರ ಹೇಳಿಕೆ ಕೇಂದ್ರ ಬಿಜೆಪಿ ಸರ್ಕಾರದ ಅಧಿಕೃತ ನಿಲುವಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಈ ಬಗ್ಗೆ ಸ್ಪಷ್ಟನೆ ನೀಡಿ ಅಧಿಕಪ್ರಸಂಗಿ ಸಚಿವೆಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಪ್ರೊ.ಎಂ.ಡಿ.ನಂಜುಂಡ ಸ್ವಾಮಿಯ ಅವರಂತಹ ಹಿರಿಯರು ಮುನ್ನಡೆಸಿದ್ದ ಕರ್ನಾಟಕದಲ್ಲಿ ರೈತ ಹೋರಾಟಕ್ಕೆ ಹೆಮ್ಮೆಯ ಪರಂಪರೆ ಇದೆ. ಅದೇನು ಅಧಿಕಾರಕ್ಕಾಗಿ, ಸಚಿವರಾಗಲು ನಡೆಸುವ ದಲ್ಲಾಳಿಗಿರಿ ಹೋರಾಟ ಅಲ್ಲ ಎನ್ನುವುದನ್ನು ಇಂತಹ ಕೂಗುಮಾರಿ ಸಚಿವರು ತಿಳಿದುಕೊಳ್ಳಬೇಕು ಎಂದಿದ್ದಾರೆ.

ಏನಿದು ಹೇಳಿಕೆ?: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವವರು ರೈತರಲ್ಲ. ಈ ಹೋರಾಟ ರೈತರ ಹೋರಾಟವಾಗಿ ಉಳಿದಿಲ್ಲ. ಅದು ದಲ್ಲಾಳಿಗಳ ಹೋರಾಟವಾಗಿದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದರು.

ರೇವಂತ ರೆಡ್ಡಿ ಭೇಟಿ:

ಸದ್ಯ ಉತ್ತರ ಕರ್ನಾಟಕ ಭಾಗಕ್ಕೆ ಪ್ರವಾಸ ತೆರಳಿರುವ ಸಿದ್ದರಾಮಯ್ಯ ಇಂದು ಸಂಜೆ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಈ ಸಂಬಂಧ ಅವರು ಹೈದರಾಬಾದ್​ ತಲುಪಿದ್ದು, ಅಲ್ಲಿ ಇಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ ಭೇಟಿ ಮಾಡಿದ ಸಿದ್ದರಾಮಯ್ಯ

ಇತ್ತೀಚೆಗಷ್ಟೇ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿರುವ ಸಂಸದರೂ ಆಗಿರುವ ರೇವಂತ ರೆಡ್ಡಿ, ಇತ್ತೀಚೆಗೆ ಬೆಂಗಳೂರಿಗೂ ಆಗಮಿಸಿದ್ದರು. ಆಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಓದಿ:CAA ವಿರೋಧಿಸುವವರು ಅಫ್ಘಾನಿಸ್ತಾನದ​ ಸ್ಥಿತಿ ನೋಡಿ ತಿಳಿದುಕೊಳ್ಳಲಿ: ಸಂಸದ ಪ್ರತಾಪ್ ಸಿಂಹ

For All Latest Updates

TAGGED:

ABOUT THE AUTHOR

...view details