ಬೆಂಗಳೂರು: ರಾಜ್ಯದಲ್ಲಿ ಹಿಂದೂಗಳ ಹತ್ಯೆಗೆ ಲೆಕ್ಕ ಕೇಳುತ್ತಿರುವ ರಾಜ್ಯ ಸರ್ಕಾರ, ನಡೆದಿರುವ ಹತ್ಯೆಗಳ ಕಾರಣಿಕರ್ತರ ಬಗ್ಗೆ ಅರಿಯುವ ಕೆಲಸ ಮಾಡಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಹಿಂದೂ ಕಾರ್ಯಕರ್ತರನ್ನು ನಿಮ್ಮವರೇ ಹತ್ಯೆಗೈದದ್ದು ಯಾಕೆ ಎಂದು ಉತ್ತರ ಕೊಡಿ: ಸಿದ್ದರಾಮಯ್ಯ
ರಾಜ್ತದಲ್ಲಿ ಹಿಂದುಗಳ ಹತ್ಯೆ ಬಗ್ಗೆ ಲೆಕ್ಕ ಕೇಳುತ್ತಿರುವ ಬಿಜೆಪಿ ನಾಯಕರೇ, ಮೊದಲು ಮಂಗಳೂರಿನ ಹಿಂದು ಶ್ರದ್ಧಾಳು ವಿನಾಯಕ ಬಾಳಿಗಾ ಕೊಲೆಗಡುಕರು ಯಾರು ಎಂದು ನಿಮ್ಮ ಪಕ್ಷದ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರನ್ನು ಕೇಳಿ ಉತ್ತರ ನೀಡಿದರೆ ನನಗೂ ತಿಳಿಸಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ 25ಕ್ಕೂ ಹೆಚ್ಚು ಹಿಂದುಗಳ ಹತ್ಯೆಯಾಗಿದೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ಬಗ್ಗೆ ಲೆಕ್ಕ ಕೇಳಿದೆ. ಇಲ್ಲಿದೆ ಲೆಕ್ಕ. ಕಣ್ಣು ಬಿಟ್ಟು ಓದಿ. ನಿಮ್ಮದೇ ಪರಿವಾರದ ಹಿಂದು ಕಾರ್ಯಕರ್ತರನ್ನು ನಿಮ್ಮವರೇ ಹತ್ಯೆಗೈದದ್ದು ಯಾಕೆ ಎಂದು ಮೊದಲು ಉತ್ತರ ಕೊಡಿ ಎಂದಿದ್ದಾರೆ. ರಾಜ್ಯದಲ್ಲಿ ಹಿಂದುಗಳ ಹತ್ಯೆ ಬಗ್ಗೆ ಲೆಕ್ಕ ಕೇಳುತ್ತಿರುವ ರಾಜ್ಯ ಬಿಜೆಪಿ ನಾಯಕರೇ, ಮೊದಲು ಮಂಗಳೂರಿನ ಹಿಂದು ಶ್ರದ್ಧಾಳು ವಿನಾಯಕ ಬಾಳಿಗಾ ಕೊಲೆ ಗಡುಕರು ಯಾರು ಎಂದು ನಿಮ್ಮ ಪಕ್ಷದ ಅಧ್ಯಕ್ಷರಾದ ನವೀನ್ ಕುಮಾರ್ ಕಟೀಲು ಅವರನ್ನು ಕೇಳಿ. ಅವರು ಉತ್ತರ ನೀಡಿದರೆ ನನಗೂ ತಿಳಿಸಿ ಎಂದಿದ್ದಾರೆ.
ಬ್ರಹ್ಮಾವರದ ಪ್ರವೀಣ್ ಪೂಜಾರಿ, ಬಂಟ್ವಾಳದ ಹರೀಶ್ ಪೂಜಾರಿ, ಸುರತ್ಕಲ್‌ನ ಪ್ರಕಾಶ್ ಮತ್ತು ಕೇಶವ ಶೆಟ್ಟಿ, ಕೊಡಗಿನ ರಾಜು ಕನ್ನಡದಾನೆ, ಚಿಕ್ಕಮಗಳೂರಿನ ಕಲ್ಲಪ್ಪ ಹಂದಿಬಾಗ್, ಮೂಡಿಗೆರೆಯ ಧನ್ಯಶ್ರಿ, ವಿಜಯಪುರದ ದಾನಮ್ಮ ಹತ್ಯೆ ಮಾಡಿದವರು ಯಾರೆಂದು ನಳಿನ್ ಕುಮಾರ್ ಕಟೀಲ್,ಸಿ.ಟಿ ರವಿ ಹಾಗೂ ಶೋಭಾ ಕರಂದ್ಲಾಜೆ ಅವರನ್ನೊಮ್ಮೆ ಕೇಳಿ ಎಂದು ಹೇಳಿದ್ದಾರೆ. ರಾಜಕಾರಣಿಗಳು/ಸಂಘಟನೆಗಳ ಮೇಲೆ ಪೊಲೀಸರು ದಾಖಲಿಸಿದ್ದ ಪ್ರಕರಣಗಳನ್ನು ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ವಾಪಸ್ ಪಡೆದಿದೆ.ಇದರ ವಿವರ ಕೇಳಿ ಗೃಹ ಸಚಿವ ಬೊಮ್ಮಾಯಿ ಅವರಿಗೆ ಪತ್ರ ಬರೆದು ಎರಡು ತಿಂಗಳಾಗುತ್ತಾ ಬಂತು. ನಮ್ಮ ಕಾಲದ ಲೆಕ್ಕ ಕೇಳುವ ರಾಜ್ಯ ಬಿಜೆಪಿ ಮೊದಲು ಈ ಪತ್ರಕ್ಕೆ ಉತ್ತರ ಕೊಡಿಸಿ ಎಂದು ಸವಾಲು ಹಾಕಿದ್ದಾರೆ.