ಬೆಂಗಳೂರು :ಜನಸಂಖ್ಯಾ ನಿಯಂತ್ರಣದ ಜೊತೆಗೆ ಈಗಿರುವ ಮಾನವ ಸಂಪನ್ಮೂಲದ ಸದ್ಬಳಕೆ ಆದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜನಸಂಖ್ಯಾ ನಿಯಂತ್ರಣದ ಜತೆ ಮಾನವ ಸಂಪನ್ಮೂಲ ಸದ್ಬಳಕೆಯಾಗಲಿ : ಸಿದ್ದರಾಮಯ್ಯ ಟ್ವೀಟ್ - siddaramayya latwst twitter news
ಲಿಂಗ ತಾರತಮ್ಯ, ಬಾಲ್ಯವಿವಾಹದಂತಹ ಅನಿಷ್ಠಗಳ ವಿರುದ್ಧ ನಮ್ಮ ವಿರೋಧ ಇರಲಿ. ಈ ಜಾಗೃತಿ ವಿಶ್ವ ಜನಸಂಖ್ಯಾ ದಿನ ನಮ್ಮಲ್ಲಿ ಮೂಡಿಸಲಿ ಎಂಬ ಸಂದೇಶವನ್ನು ನೀಡಿದ್ದಾರೆ..
ಸಿದ್ದರಾಮಯ್ಯ ಟ್ವೀಟ್
ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ಟ್ವೀಟ್ ಮಾಡಿರುವ ಅವರು, ಜನಸಂಖ್ಯೆ ನಿಯಂತ್ರಣ ಇರಲಿ, ಸರ್ವರಿಗೂ ಸಮಪಾಲು, ಸಮಬಾಳು ನೀಡುವ ಧ್ಯೇಯ ನಮ್ಮದಾಗಲಿ, ಆರೋಗ್ಯ, ವಿದ್ಯೆ, ಉದ್ಯೋಗ ಎಲ್ಲರಿಗೂ ಒದಗಿ ಬರಲಿ. ಲಿಂಗ ತಾರತಮ್ಯ, ಬಾಲ್ಯವಿವಾಹದಂತಹ ಅನಿಷ್ಠಗಳ ವಿರುದ್ಧ ನಮ್ಮ ವಿರೋಧ ಇರಲಿ. ಈ ಜಾಗೃತಿ ವಿಶ್ವ ಜನಸಂಖ್ಯಾ ದಿನ ನಮ್ಮಲ್ಲಿ ಮೂಡಿಸಲಿ ಎಂಬ ಸಂದೇಶವನ್ನು ನೀಡಿದ್ದಾರೆ.
ಜುಲೈ 11ರಂದು ಇಡೀ ವಿಶ್ವವೇ ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸುತ್ತಿದೆ. ಕಾಂಗ್ರೆಸ್ನ ವಿವಿಧ ನಾಯಕರು ಈ ಸಂದರ್ಭ ಜನಸಂಖ್ಯಾ ದಿನದ ಸಂದೇಶ ಬಿಡುಗಡೆ ಮಾಡುತ್ತಿದ್ದಾರೆ.