ಮೈಸೂರು: ಯುವಜನರು ಸಾವಿನ ಮೂಲಕ ಪ್ರತಿಭಟಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
‘ಅಚ್ಛೇದಿನ’ಕ್ಕಾಗಿ ಕಾದು, ಯುವಜನರು ಸಾವಿನ ಮೂಲಕ ಪ್ರತಿಭಟಿಸುತ್ತಿದ್ದಾರೆ: ಸಿದ್ದರಾಮಯ್ಯ - ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್
ಯುವಜನರು ಸಾವಿನ ಮೂಲಕ ಪ್ರತಿಭಟಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ
ನಿರುದ್ಯೋಗ ಮತ್ತು ಬಡತನದಿಂದ ಪ್ರತಿದಿನ ಹತ್ತಕ್ಕಿಂತ ಹೆಚ್ಚು ಜನ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ‘ಅಚ್ಛೇದಿನ’ಕ್ಕಾಗಿ ಕಾದು ಭ್ರಮನಿರಸನಗೊಂಡ ಯುವಜನರು ಸಾವಿನ ಮೂಲಕ ಪ್ರತಿಭಟಿಸುತ್ತಿದ್ದಾರೆ. ಈ ಸಾವಿಗೆ ನರೇಂದ್ರ ಮೋದಿಯವರೇ ನೇರ ಹೊಣೆ. ಯುವಕರೇ, ಆತ್ಮಹತ್ಯೆ ಬೇಡ, ಅನ್ನ -ಉದ್ಯೋಗ ನಿಮ್ಮ ಹಕ್ಕು ಎಂದು ಬರೆದು ಟ್ವೀಟ್ ಮಾಡಿದ್ದಾರೆ.