ಕರ್ನಾಟಕ

karnataka

ETV Bharat / state

ಸರ್ಕಾರ ಹಾಗೂ ಪೊಲೀಸರಿಂದ ಮಂಗಳೂರು ಗಲಭೆಯ ತನಿಖೆ ದಿಕ್ಕು ತಪ್ಪಿಸುವ ಕಾರ್ಯ: ಸಿದ್ದರಾಮಯ್ಯ - ಸಿದ್ದರಾಮಯ್ಯ ಟ್ವಿಟ್​

ಮಂಗಳೂರು ಗಲಭೆಯ ಆಯ್ದ ವಿಡಿಯೋಗಳನ್ನು ಪೊಲೀಸರು ಸೋರಿಕೆ ಮಾಡಿ ತನಿಖೆಯ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ತಮ್ಮಲ್ಲಿರುವ ಸಾಕ್ಷ್ಯಗಳನ್ನು ಮೊದಲು ತನಿಖಾಧಿಕಾರಿಗಳಿಗೆ ಒಪ್ಪಿಸಬೇಕಿತ್ತು. ಈ ಕಾರಣಕ್ಕಾಗಿಯೇ ಸಿಐಡಿ ತನಿಖೆ ಒಂದು ನಾಟಕ. ಅದರ ಬದಲಿಗೆ ನ್ಯಾಯಾಂಗ ತನಿಖೆ‌ ಮಾಡಿ‌ ಎಂದು ಒತ್ತಾಯಿಸಿದ್ದು ಎಂದು ಸಿದ್ದರಾಮಯ್ಯ ಟ್ವಿಟ್​ ಮಾಡಿದ್ದಾರೆ.

Siddaramaiah
ಸಿದ್ದರಾಮಯ್ಯ

By

Published : Dec 24, 2019, 11:14 PM IST

ಬೆಂಗಳೂರು:ಮಂಗಳೂರು ಗಲಭೆಯ ತನಿಖೆಯ ದಾರಿ ತಪ್ಪಿಸುವ ಕಾರ್ಯವನ್ನು ಸರ್ಕಾರ ಹಾಗೂ ಪೊಲೀಸರು ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮಂಗಳೂರು ಗಲಭೆಯ ಆಯ್ದ ವಿಡಿಯೋಗಳನ್ನು ಪೊಲೀಸರು ಸೋರಿಕೆ ಮಾಡಿ ತನಿಖೆಯ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ತಮ್ಮಲ್ಲಿರುವ ಸಾಕ್ಷ್ಯಗಳನ್ನು ಮೊದಲು ತನಿಖಾಧಿಕಾರಿಗಳಿಗೆ ಒಪ್ಪಿಸಬೇಕಿತ್ತು. ಈ ಕಾರಣಕ್ಕಾಗಿಯೇ ಸಿಐಡಿ ತನಿಖೆ ಒಂದು ನಾಟಕ. ಅದರ ಬದಲಿಗೆ ನ್ಯಾಯಾಂಗ ತನಿಖೆ‌ ಮಾಡಿ‌ ಎಂದು ಒತ್ತಾಯಿಸಿದ್ದು ಎಂದು ಹೇಳಿದ್ದಾರೆ.

ಮಂಗಳೂರು ಗಲಭೆಯ ತಪ್ಪಿತಸ್ಥರು ಯಾರೇ ಇರಲಿ, ತನಿಖೆ ನಡೆಸಿ ಅವರನ್ನು ಶಿಕ್ಷೆಗೊಳಪಡಿಸಬೇಕು. ಆದರೆ ಆಯ್ದ ವಿಡಿಯೋಗಳನ್ನು ಲೀಕ್ ಮಾಡಿ ಅದರ ಮೂಲಕ ಒಂದು ಧರ್ಮದ ಜನರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಸಲ್ಲದು. ಶಾಂತಿ-ಸೌಹಾರ್ದತೆ ಕಾಪಾಡಬೇಕಾಗಿರುವ ಪೊಲೀಸರೇ ಸೌಹಾರ್ದ ಕೆಡಿಸುವ ಕೆಲಸ ಮಾಡುತ್ತಿರುವುದು ಸರಿ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ಮಂಗಳೂರಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಪೊಲೀಸ್ ಗೋಲಿಬಾರ್​ಗೆ ಮೃತಪಟ್ಟ ಇಬ್ಬರ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲದೆ ಅಲ್ಲಿಯೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ABOUT THE AUTHOR

...view details