ಬೆಂಗಳೂರು: ಇಲ್ಲಿನ ಬೆಳಗಲ್ನಲ್ಲಿ ಎಸ್ ಆರ್ ಕೆ ಕಾರ್ಖಾನೆಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗುವ ಸಲುವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನಿಂದ ವಿಮಾನ ಮೂಲಕ ಅವರು ಹುಬ್ಬಳ್ಳಿಗೆ ತಲುಪಲಿದ್ದಾರೆ. ಅಲ್ಲಿಂದ ರಸ್ತೆ ಪ್ರಯಾಣದ ಮೂಲಕ ಹುನಗುಂದಕ್ಕೆ ತೆರಳಲಿದ್ದಾರೆ.
ಡಿಕೆಶಿ ಗೈರು: ಭೂಮಿಪೂಜೆಗೆ ಹುನಗುಂದಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒಟ್ಟಿಗೆ ತೆರಳಬೇಕಿತ್ತು. ಆದರೆ, ಎರಡು ದಿನದಿಂದ ದಿಲ್ಲಿಯಲ್ಲೇ ಬೀಡು ಬಿಟ್ಟಿರುವ ಕೆಪಿಸಿಸಿ ಅಧ್ಯಕ್ಷರು ಆಗಮಿಸದ ಹಿನ್ನೆಲೆ ಸಿದ್ದರಾಮಯ್ಯ ಏಕಾಂಗಿಯಾಗಿ ತೆರಳಿದ್ದಾರೆ. ನಿನ್ನೆ ಸಿದ್ದರಾಮಯ್ಯಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಾನು ಸಹ ಹುನಗುಂದಕ್ಕೆ ಬರುತ್ತೇನೆ. ಇಬ್ಬರೂ ಒಟ್ಟಾಗಿಯೇ ತೆರಳೋಣ ಎಂದಿದ್ದರು. ಆದರೆ ಡಿಕೆಶಿ ದಿಲ್ಲಿಯಿಂದ ಇನ್ನೂ ಆಗಮಿಸದ ಹಿನ್ನೆಲೆ ಒಟ್ಟಾಗಿ ತೆರಳಲು ಸಾಧ್ಯವಾಗಿಲ್ಲ.