ಕರ್ನಾಟಕ

karnataka

ETV Bharat / state

ಕೋವಿಡ್ ಲಸಿಕೆಯ ಎರಡನೇ ಡೋಸ್​ ಪಡೆದ ಸಿದ್ದರಾಮಯ್ಯ - ಬೆಂಗಳೂರು

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ ಎರಡನೇ ಡೋಸ್​ ಪಡೆದರು. ಈ ವೇಳೆ ಶಾಸಕ ಜಮೀರ್​ ಅಹಮದ್ ಖಾನ್​ ಇದ್ದರು.

covid vaccine
ಎರಡನೇ ಡೋಸ್​ ಪಡೆದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

By

Published : Apr 29, 2021, 1:58 PM IST

ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದರು.

ಮಾರ್ಚ್ 15ರಂದು ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಮೊದಲ ಲಸಿಕೆ ಪಡೆದಿದ್ದ ಅವರು ಇಂದು ಎರಡನೇ ಡೋಸ್​ ಪಡೆದುಕೊಂಡರು. ಅಂದು ಲಸಿಕೆ ಪಡೆದ ಸಂದರ್ಭ ಸೂಜಿ ಚುಚ್ಚುವುದೇ ಗೊತ್ತಾಗಲಿಲ್ಲ ಎಂದು ಹೇಳಿ ಆಸ್ಪತ್ರೆಯ ವೈದ್ಯರ ಮತ್ತು ಸಿಬ್ಬಂದಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಹಿಂದಿರುಗಿದ್ದರು. ಇಂದು ತಮ್ಮ ಆಪ್ತರೊಂದಿಗೆ ತೆರಳಿ ಕೋವಿಡ್ ಎರಡನೇ ಲಸಿಕೆ ಪಡೆದು ವಾಪಸಾಗಿದ್ದಾರೆ.

ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಸಿದ್ದರಾಮಯ್ಯ

ಇತ್ತೀಚೆಗಷ್ಟೇ ಕೋವಿಡ್ ಪಾಸಿಟಿವ್ ಬಂದು ಗುಣಮುಖರಾಗಿರುವ ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಸಿದ್ದರಾಮಯ್ಯ ಜತೆ ಇದ್ದರು.

ABOUT THE AUTHOR

...view details