ಬೆಂಗಳೂರು : ಸಿದ್ದರಾಮಯ್ಯ ಅವರು ಬಿ ಟೀಂ ಮಾಡಿದ್ದಾರೆ ಎಂಬ ಶರವಣ ಆರೋಪಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬನ್ನೇರುಘಟ್ಟದಲ್ಲಿ ನಡೆದ ಭೋವಿ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ನಾವು ಮೊದಲು ಒಬ್ಬ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕಿದ್ದೆವು. ನಾವು ಅಭ್ಯರ್ಥಿ ಹಾಕಿದ ಮರುದಿನ ಕುಪೇಂದ್ರ ರೆಡ್ಡಿಯನ್ನು ನಿಲ್ಲಿಸಿದ್ದಾರೆ. ಗೆಲ್ಲೋದಿಲ್ಲ ಅಂತ ಗೊತ್ತಿದ್ದರೂ ಯಾಕೆ ಅವರು ಅಭ್ಯರ್ಥಿಯನ್ನು ಹಾಕಿದ್ರು... ? ನಾವೋ ಅಥವಾ ಅವರೋ ಬಿ ಟೀಂ ... ? ಎಂದು ಪ್ರಶ್ನಿಸಿದ್ದಾರೆ. ಅಂದು ದೇವೇಗೌಡರ ವಿರುದ್ಧ ನಾವು ಅಭ್ಯರ್ಥಿಯನ್ನು ಹಾಕಿದ್ವಾ ... ? . ಕೋಮುವಾದಿ ಬಿಜೆಪಿ ಬರಲೇಬಾರದೆಂದು ನಾವು ಅಂದು ಆ ರೀತಿ ಮಾಡಿದ್ವಿ. ಈಗ ನಮಗೆ ಬೆಂಬಲ ನೀಡಬಹುದಿತ್ತಲ್ವ ಎಂದು ಹೇಳಿದರು.
ಜೆಡಿಎಸ್ ಎಂದೆಂದಿಗೂ ಬಿ ಟೀಂ : ಸಿದ್ದರಾಮಯ್ಯ - siddaramaiah statement against JDS MLC Sharavana
ನಾವು ಮೊದಲು ಒಬ್ಬ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕಿದ್ದೆವು. ನಾವು ಅಭ್ಯರ್ಥಿ ಹಾಕಿದ ಮರುದಿನ ಕುಪೇಂದ್ರ ರೆಡ್ಡಿಯನ್ನು ನಿಲ್ಲಿಸಿದ್ದಾರೆ. ಗೆಲ್ಲೋದಿಲ್ಲ ಅಂತ ಗೊತ್ತಿದ್ದರೂ ಯಾಕೆ ಅವರು ಅಭ್ಯರ್ಥಿಯನ್ನು ಹಾಕಿದ್ರು...? ನಾವೋ ಅಥವಾ ಅವರೋ ಬಿ ಟೀಮ್ ... ? ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ವಿಧಾನ ಪರಿಷತ್ ಸದಸ್ಯ ಟಿ ಎಸ್ ಶರವಣ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಪ್ರತಿಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರ್ಯಾರು ನನ್ನನ್ನು ಕೆಳಗಿಳಿಸಬೇಕು ಎಂದು ಹೇಳೋಕೆ? ಅವರು ಕೇವಲ ಜೆಡಿಎಸ್ ಪಕ್ಷದ ಅಧ್ಯಕ್ಷ ಅಷ್ಟೇ. ಅವರು ಹೇಳಿದರೆ ನಾನು ಇಳಿಬೇಕಾ?. ನನ್ನನ್ನು ಪ್ರತಿಪಕ್ಷದ ನಾಯಕನನ್ನಾಗಿ ಮಾಡಿರುವುದು ನಮ್ಮ ಎಂಎಲ್ಎಗಳು. ನಾನು ರಾಜೀನಾಮೆ ಕೊಡು ಅಂತ ಅವರಿಗೆ ಹೇಳ್ತೀನಿ ಅವರು ಕೊಡ್ತಾರಾ ... ? ಎಂದು ಸಿ ಎಂ ಇಬ್ರಾಹಿಂ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಓದಿ :ಎಲ್ಲೋ ಮಾತಾಡೋದಲ್ಲ, ತಾಕತ್ತಿದ್ರೆ ನಮ್ಮ ಕ್ಷೇತ್ರಕ್ಕೆ ಬಂದು ಗೆಲ್ಲಿ: ಹೆಚ್ಡಿಕೆಗೆ ಶ್ರೀನಿವಾಸ್ ಬೆಂಬಲಿಗರ ಸವಾಲು
TAGGED:
ಬಿ ಟೀಮ್ ಎಂದೆಂದಿಗೂ ಜೆಡಿಎಸ್