ಕರ್ನಾಟಕ

karnataka

ETV Bharat / state

ಮುನ್ನೋಟವಿಲ್ಲದ ಜನದ್ರೋಹದ ಬಜೆಟ್: ಸಿದ್ದರಾಮಯ್ಯ ಟೀಕೆ - A budget of unfaithful people

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಯವ್ಯಯದಲ್ಲಿ ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಅವರ ಪ್ರಭಾವವನ್ನು ನಿರೀಕ್ಷಿಸಿದ್ದೆವು. ಆದರೆ ಆರ್.ಎಸ್.ಎಸ್ ಪ್ರಭಾವವೇ ಮುಂದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.

A budget of unfaithful people
ಮುನ್ನೋಟವಿಲ್ಲದ ಜನ ದ್ರೋಹದ ಬಜೆಟ್ : ಸಿದ್ದರಾಮಯ್ಯ ಟೀಕೆ

By

Published : Mar 7, 2022, 8:19 PM IST

ಬೆಂಗಳೂರು: ಅಭಿವೃದ್ಧಿ ಬೆಳವಣಿಗೆಗೆ ಪೂರಕವಲ್ಲದ ಮತ್ತು ಮುನ್ನೋಟವಿಲ್ಲದ ಜನದ್ರೋಹದ ಬಜೆಟ್ ಮಂಡಿಸಲಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಟೀಕಿಸಿದ್ದಾರೆ.

ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದು ಡಬಲ್ ಇಂಜಿನ್ ಸರ್ಕಾರವಲ್ಲ. ಡಬ್ಬ ಸರ್ಕಾರವಾಗಿದೆ. ಜನ ವಿರೋಧಿ, ಜನ ದ್ರೋಹದ ಬಜೆಟ್ ಆಗಿದ್ದು, ಗೊತ್ತು ಗುರಿ, ಮುನ್ನೋಟವಿಲ್ಲದ ಆಯವ್ಯಯವಾಗಿದೆ ಎಂದು ದೂರಿದರು.

ಮೂರು ವರ್ಷಗಳಿಂದ ಆಶ್ವಾಸನೆ ಪಟ್ಟಿಗಳನ್ನು ಕೊಡಲಾಗುತ್ತಿದೆ. ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕಳೆದ ಎರಡು ವರ್ಷ ಕೋವಿಡ್ ಲಾಕ್‍ಡೌನ್‍ನಿಂದ ಆರ್ಥಿಕ ಬೆಳವಣಿಗೆ ಹಾಗೂ ತೆರಿಗೆ ವಸೂಲಿ ಕುಂಠಿತವಾಗಿದೆ. ಹೀಗಾಗಿ ಸಾಲದ ಹೊರೆ ಹೆಚ್ಚಿಸಬೇಕಾಯಿತು ಎಂಬುದನ್ನು ಸಮರ್ಥಿಸಿಕೊಂಡಿರುವುದು ಸರಿಯಲ್ಲ ಎಂದರು.

ಆರ್​ಎಸ್​ಎಸ್​ ಬಜೆಟ್​:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಯವ್ಯಯದಲ್ಲಿ ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಅವರ ಪ್ರಭಾವವನ್ನು ನಿರೀಕ್ಷಿಸಿದ್ದೆವು. ಆದರೆ ಆರ್.ಎಸ್.ಎಸ್ ಪ್ರಭಾವವೇ ಮುಂದಿದೆ ಎಂದು ಹೇಳಿದರು.

ಮಿತಿಮೀರಿದ ಸಾಲ:2022-23ನೇ ಸಾಲಿನ ಆಯವ್ಯಯದ ಗಾತ್ರ 2,65,270 ಕೋಟಿ ರೂ. ಆಗಿದೆ. ಅದರಲ್ಲಿ 14,699 ಕೋಟಿ ರೂ. ರೆವಿನ್ಯೂ ನಷ್ಟ ಆಗಿದೆ. ರಾಜ್ಯದ ಆಂತರಿಕ ಉತ್ಪನ್ನದ ಶೇ.25ರಷ್ಟನ್ನು ಸಾಲ ಮೀರಬಾರದು. ಆದರೆ ಈ ಬಾರಿ ಕೋವಿಡ್​ ಕಾರಣಕ್ಕೆ ಶೇ. 27ಕ್ಕೆ ಏರಿಸಲಾಗಿದೆ.

ತಾವು ಬಜೆಟ್ ಮಂಡಿಸುವಾಗ ವಿತ್ತೀಯ ಕೊರತೆ ಶೇ.3ರೊಳಗಿದ್ದು, 8 ಬಜೆಟ್‍ನಲ್ಲೂ ಆರ್ಥಿಕ ಶಿಸ್ತನ್ನು ಕಾಪಾಡಲಾಗಿತ್ತು. ಸ್ವಾತಂತ್ರ್ಯ ಬಂದಾಗಿನಿಂದ 2018-19ರವರೆಗೆ 2.42 ಲಕ್ಷ ಕೋಟಿ ರೂ. ಸಾಲವಿತ್ತು. ನಾಲ್ಕು ವರ್ಷದಲ್ಲಿ 3 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ ಎಂದು ಹೇಳಿದರು.

ಕೇಂದ್ರದಿಂದಲೂ ಅನ್ಯಾಯ:5,495 ಕೋಟಿ ನಮಗೆ ಜಿಎಸ್ ಟಿಯಿಂದ ನಷ್ಟವಾಯಿತು. 15 ನೇ ಹಣಕಾಸು ಆಯೋಗ ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಆದರೆ, 25 ಜನ ಸಂಸದರು ತುಟಿ ಬಿಚ್ಚಲಿಲ್ಲ. ಇವರು ಕೇಳಿಲ್ಲ ಅಂತ ಅಂತಿಮ ರಿಪೋರ್ಟ್​ಲ್ಲಿ ಅದನ್ನು ಕೈಬಿಟ್ಟರು. ನಿರ್ಮಾಲ ಸೀತರಾಮನ್ ನಮ್ಮ ರಾಜ್ಯದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಆದರೆ ಅವರಿಂದಲೇ ನಮಗೆ ಅನ್ಯಾಯವಾಗಿದೆ ಎಂದು ಸಂಸದರು ಮತ್ತು ಕೇಂದ್ರ ಆರ್ಥಿಕ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಬೊಮ್ಮಾಯಿ 2008ರಲ್ಲಿ ಬಿಜೆಪಿ ಸೇರಿ ಸಿಎಂ ಆದರು; ಮೂಲ ಬಿಜೆಪಿಗರಾದ ಅಶೋಕ್‌, ಈಶ್ವರಪ್ಪನಿಗೆ ಸಿಎಂ ಆಗಲು ಸಾಧ್ಯವಾಗಿಲ್ಲ: ಸಿದ್ದರಾಮಯ್ಯ

ABOUT THE AUTHOR

...view details