ಕರ್ನಾಟಕ

karnataka

ETV Bharat / state

ಚಾಮುಂಡೇಶ್ವರಿ, ಬದಾಮಿಗೆ ಕೈಕೊಟ್ಟು, ಚಾಮರಾಜಪೇಟೆಯತ್ತ ಮುಖ ಮಾಡಿದ್ರಾ ಮಾಜಿ ಸಿಎಂ?

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದಿಂದ ಬೇಸತ್ತು ಜನ ಕಾಂಗ್ರೆಸ್ ಗೆಲ್ಲಿಸಿದರೆ ಸಿಗುವ ಅವಕಾಶ ತಪ್ಪಿಸಿಕೊಳ್ಳಬಾರದು. ಇನ್ನೊಂದು ಅವಧಿಗೆ ಸಿಎಂ ಆಗಬೇಕೆಂಬ ಕನಸು ಕಾಣುತ್ತಿರುವ ಸಿದ್ದರಾಮಯ್ಯ ,ಗೆಲ್ಲುವ ಅವಕಾಶ ಸುಲಭವಾಗಿರುವ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

By

Published : Jun 6, 2021, 4:33 AM IST

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು:ಚಾಮುಂಡೇಶ್ವರಿಯಲ್ಲಿ ಗೆಲ್ಲಲ್ಲ, ಬದಾಮಿಯಲ್ಲಿ ಗೆದ್ದರೂ ಹೋಗುವುದು ಕಷ್ಟ ಅಂತ ತೀರ್ಮಾನಕ್ಕೆ ಬಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಈ ಸಾರಿ ಚಾಮರಾಜಪೇಟೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ.

ಸಿದ್ದರಾಮಯ್ಯ ನಡೆ ನಿಜಕ್ಕೂ ನಿಗೂಢ. ಅದರಲ್ಲೂ ತಮಗೆ ರಾಜಕೀಯ ನೆಲೆ ಕೊಟ್ಟಿದ್ದ ಚಾಮುಂಡೇಶ್ವರಿ ಜನ ಕೈ ಬಿಟ್ಟ ಮೇಲೆ, ಅಂತೂ ಇಂತು ಬದಾಮಿಗೆ ತೆರಳಿ ಮರುಜನ್ಮ ಪಡೆದಿದ್ದ ಸಿದ್ದರಾಮಯ್ಯ 2023ರ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರ ಬಿಡಲು ನಿರ್ಧರಿಸಿದ್ದಾರೆ. ಕಾರಣ, ಚಾಮುಂಡೇಶ್ವರಿ ಜನ ಈಗಾಗಲೇ ಮರೆತಿದ್ದಾರೆ. ವರುಣಾಗೆ ತೆರಳಿ ಪುತ್ರ ಡಾ. ಯತೀಂದ್ರಗೆ ಕ್ಷೇತ್ರ ಇಲ್ಲದಂತೆ ಮಾಡಿ ತಮ್ಮನ್ನು ತಾವು ಯಯಾತಿ ಎನಿಸಿಕೊಳ್ಳುವುದು ಸಿದ್ದರಾಮಯ್ಯಗೆ ಸುತಾರಾಂ ಇಷ್ಟವಿಲ್ಲ. ಇನ್ನು ಬದಾಮಿಯಲ್ಲಿ ಮರು ಸ್ಪರ್ಧಿಸಿದರೆ ಕ್ಷೇತ್ರಕ್ಕೆ ತೆರಳುವುದೇ ದೊಡ್ಡ ಕಷ್ಟ. ಅಲ್ಲದೇ ಕಡಿಮೆ ಅಂತರದಿಂದ ಗೆದ್ದ ಕಾರಣದಿಂದ ಇನ್ನೊಮ್ಮೆ ಗೆಲ್ಲುತ್ತೇನೋ ಇಲ್ಲವೋ ಎಂಬ ಅಳುಕು ಬೇರೆ ಕಾಡುತ್ತಿದೆ.

ಇದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದಿಂದ ಬೇಸತ್ತು ಜನ ಕಾಂಗ್ರೆಸ್ ಗೆಲ್ಲಿಸಿದರೆ ಸಿಗುವ ಅವಕಾಶ ತಪ್ಪಿಸಿಕೊಳ್ಳಬಾರದು. ಇನ್ನೊಂದು ಅವಧಿಗೆ ಸಿಎಂ ಆಗಬೇಕೆಂಬ ಕನಸು ಕಾಣುತ್ತಿದ್ದಾರೆ. ಇದಕ್ಕಾಗಿ ಗೆಲ್ಲುವ ಅವಕಾಶ ಸುಲಭವಾಗಿರುವ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಮುಸ್ಲಿಂ ಮತದಾರರು ಹೆಚ್ಚಿರುವ ಹಾಗೂ ನಿರ್ಣಾಯಕರಾಗಿರುವ ಕ್ಷೇತ್ರದಲ್ಲಿ ತಮ್ಮ ಆಪ್ತ ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹಲವು ವರ್ಷಗಳಿಂದ ಪ್ರತಿನಿಧಿಸುತ್ತಿರುವ ಕ್ಷೇತ್ರದಿಂದ ತಮ್ಮ ಭವಿಷ್ಯ ಭದ್ರಪಡಿಸಿಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇತ್ತೀಚಿನ ಬೆಳವಣಿಗೆಗಳು ಕೂಡ ಅದಕ್ಕೆ ಪೂರಕವಾಗಿ ಗೋಚರಿಸುತ್ತಿವೆ. ಆಡಳಿತ ಪಕ್ಷ ಬಿಜೆಪಿ ಸಹ ಇದೇ ಮಾತನ್ನು ಆಡುತ್ತಿದೆ.

ಚಾಮರಾಜಪೇಟೆಯಲ್ಲಿ ಸಿದ್ದರಾಮಯ್ಯ

ಸುಭದ್ರ ಕ್ಷೇತ್ರ 1957ರಿಂದ ಇದುವರೆಗೂ ನಡೆದ ಚುನಾವಣೆಯಲ್ಲಿ 6 ಸಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದರೆ, ಜನತಾ ಪರಿವಾರ ಮೂರು ಸಾರಿ ಗೆದ್ದಿದೆ. ಜೆಡಿಎಸ್​ನಿಂದ ಎರಡು ಸಾರಿ ಹಾಗೂ ಕಾಂಗ್ರೆಸ್ನಿಂದ ಒಂದು ಸಾರಿ ಗೆದ್ದು ಚಾಮರಾಜಪೇಟೆಯಲ್ಲಿ ಹ್ಯಾಟ್ರಿಕ್ ಸಾಧಿಸಿರುವ ಜಮೀರ್ ಅಹಮದ್ ಈ ನಾರಿ ಮುಂದೆ ನಿಂತು ಸಿದ್ದರಾಮಯ್ಯ ಪರ ಕಾರ್ಯನಿರ್ವಹಿಸಲಿದ್ದಾರೆ. 2023ರಲ್ಲಿ ತಮ್ಮ ಸ್ಪರ್ಧೆ ಕೈ ಬಿಟ್ಟು ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ತಾವು ಪುಲಕೇಶಿನಗರ ಇಲ್ಲವೇ ಮುಸ್ಲಿಮರು ಹೆಚ್ಚಿರುವ ಶಿವಾಜಿನಗರ ಅಥವಾ ಬೆಂಗಳೂರು ಕೇಂದ್ರ ಇಲ್ಲವೇ ಉತ್ತರ ಭಾಗದ ಯಾವುದಾದರೂ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಮಾತು ಇದೆ.

ಇದರಿಂದಲೇ ಜಮೀರ್ ಅಹಮದ್ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಸಿದ್ದರಾಮಯ್ಯ ಭಾಗವಹಿಸುತ್ತಿದ್ದಾರೆ. ಅವರೇ ನಡೆಸುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತಿದೆ. ಕೊರೊನಾ ಸಂದರ್ಭದಲ್ಲಿ ಜಮೀರ್ ಹಮ್ಮಿಕೊಳ್ಳುತ್ತಿರುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸಿದ್ದರಾಮಯ್ಯ ಉಪಸ್ಥಿತ ಕಾಣಿಸುತ್ತಿದೆ. ಹಿಂದೆ ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಸ್ಪರ್ಧಿಸಲಾಗದೇ ಸಂಕಷ್ಟದಲ್ಲಿರುವ ಸಿದ್ದರಾಮಯ್ಯಗೆ ಅನಿವಾರ್ಯವಾಗಿ ಈ ಸಾರಿ ಗೆಲ್ಲುವ ಕ್ಷೇತ್ರವೇ ಬೇಕಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಹಿಂದಿನಷ್ಟು ಸುಲಭವಾಗಿ ಈ ಸಾರಿ ಸಿಎಂ ಆಗಲು ಅವಕಾಶ ಇಲ್ಲ. ಸಿಎಂ ಅಕಾಂಕ್ಷಿಗಳಾದ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಭದ್ರಕೋಟೆ ಕನಕಪುರದಲ್ಲಿ ಸೋಲಲ್ಲಾ, ಇನ್ನೊಂದೆಡೆ ಪರಮೇಶ್ವರ್ ಕೂಡ ಬೆಂಗಳೂರಿನ ಪುಲಕೇಶಿನಗರ ಕ್ಷೇತ್ರಕ್ಕೆ ಬಂದು ಕಣಕ್ಕಿಳಿಯಲು ಇಚ್ಛಿಸಿದ್ದಾರೆ. ಇದರಿಂದ ಸಿಎಂ ರೇಸ್​ನಲ್ಲಿ ಇರಬೇಕಾದರೆ ಗೆಲ್ಲಲೇ ಬೇಕು. ಹಿಂದೆ ಸ್ಪರ್ಧಿಸಿದ್ದ ಕ್ಷೇತ್ರಗಳು ಸಿದ್ದರಾಮಯ್ಯಗೆ ಎಲ್ಲ ರೀತಿಯಲ್ಲೂ ಅನುಕೂಲಕರವಾಗಿಲ್ಲ. ಆದ್ದರಿಂದ ತಮ್ಮ ಎಚ್ಚರಿಕೆಯಲ್ಲಿ ತಾವಿರಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನು ಓದಿ:ಎಲ್ಲ ರೈತರಿಗೆ ತಕ್ಷಣ ಬಿತ್ತನೆ ಬೀಜ, ಗೊಬ್ಬರ ಪೂರೈಸುವಂತೆ ಸಿಎಂಗೆ ಸಿದ್ದರಾಮಯ್ಯ ಪತ್ರ

ABOUT THE AUTHOR

...view details