ಕರ್ನಾಟಕ

karnataka

ETV Bharat / state

ಬೊಮ್ಮಾಯಿಯವರದ್ದು ನಿರಾಶಾದಾಯಕ, ಅಭಿವೃದ್ಧಿ ವಿರುದ್ಧವಾದ ಬಜೆಟ್​: ಸಿದ್ದರಾಮಯ್ಯ - ಬೊಮ್ಮಾಯಿರದ್ದು ನಿರಾಶಾದಾಯಕ, ಅಭಿವೃದ್ಧಿ ವಿರುದ್ಧವಾದ ಬಜೆಟ್​ ಎಂದ ಸಿದ್ದರಾಮಯ್ಯ

ಬಜೆಟ್ ಗಾತ್ರ ಹೆಚ್ಚಾಗುತ್ತಿದ್ದ ಹಾಗೆ ಎಸ್ಇಪಿ-ಟಿಎಸ್ಪಿ ಅನುದಾನವೂ ಹೆಚ್ಚಾಗಬೇಕು. ಈ ಬಜೆಟ್‌ನಲ್ಲಿ‌ ಗಾತ್ರ ಹೆಚ್ಚಾಗಿದೆ. ಆದ್ರೆ ಎಸ್ಇಪಿ ಟಿಎಸ್ಪಿ ಅನುದಾನ 14 ಸಾವಿರ ಕೋಟಿ ರೂ ಕಮ್ಮಿ ಆಗಿದೆ. ಇದು ಎಸ್ಸಿ-ಎಸ್ಟಿ ಸಮುದಾಯದ ಮೇಲಿನ ‌ನಿಮ್ಮ ಕಾಳಜಿ ಎಷ್ಟು ಅಂತ ತಿಳಿಸುತ್ತದೆ. ಬಜೆಟ್‌ನಲ್ಲಿ‌ ಬರೀ ಮಾತು ನಡೆಯಲ್ಲ. ಅಲಂಕಾರಿಕ ಪದಗಳ ಬಳಕೆ ಸಾಲಲ್ಲ. ಶೋಷಿತ ಸಮುದಾಯಗಳಿಗೆ ಏನು ಕೊಟ್ಟಿದೀರಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸದನದಲ್ಲಿ ಬಜೆಟ್​ ಮೇಲೆ ಚರ್ಚೆ
ಸದನದಲ್ಲಿ ಬಜೆಟ್​ ಮೇಲೆ ಚರ್ಚೆ

By

Published : Mar 8, 2022, 7:42 PM IST

ಬೆಂಗಳೂರು: ಬೊಮ್ಮಾಯಿರದ್ದು ನಿರಾಶಾದಾಯಕ ಬಜೆಟ್, ಅಭಿವೃದ್ಧಿಗೆ ವಿರುದ್ಧವಾದ ಬಜೆಟ್. ಹೀಗಾಗಿ ಬಜೆಟ್ ಅ​​ನ್ನು ವಿರೋಧಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.

ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಇದು ಮುನ್ನೋಟ ಇಲ್ಲದಂಥ ಬಜೆಟ್, ಬಡವರ, ದಲಿತರ, ಮಹಿಳೆಯರ, ಅಲ್ಪಸಂಖ್ಯಾತರ ವಿರೋಧಿ ಬಜೆಟ್. ಹಾಗಾಗಿ ಈ ಬಜೆಟ್ ಅನ್ನು ನಾನು ವಿರೋಧಿಸುವೆ ಎಂದು ಹೇಳಿದರು.

ಬಜೆಟ್ ಗಾತ್ರ ಹೆಚ್ಚಾಗುತ್ತಿದ್ದ ಹಾಗೆ ಎಸ್ಇಪಿ-ಟಿಎಸ್ಪಿ ಅನುದಾನವೂ ಹೆಚ್ಚಾಗಬೇಕು. ಈ ಬಜೆಟ್‌ನಲ್ಲಿ‌ ಗಾತ್ರ ಹೆಚ್ಚಾಗಿದೆ. ಆದ್ರೆ ಎಸ್ಇಪಿ ಟಿಎಸ್ಪಿ ಅನುದಾನ 14 ಸಾವಿರ ಕೋಟಿ ರೂ ಕಮ್ಮಿ ಆಗಿದೆ. ಇದು ಎಸ್ಸಿ - ಎಸ್ಟಿ ಸಮುದಾಯದ ಮೇಲಿನ ‌ನಿಮ್ಮ ಕಾಳಜಿ ಎಷ್ಟು ಎಂದು ತಿಳಿಸುತ್ತದೆ ಎಂದರು.

ಇದನ್ನೂ ಓದಿ:ಕಲಬುರಗಿ, ಬಾಗಲಕೋಟೆಯಂತೆ ದೆಹಲಿಯಲ್ಲೂ ಹಾಲು ಕುಡಿದ ನಂದಿ ವಿಗ್ರಹ: ಕಾರಣವೇನು ಗೊತ್ತಾ?

ನಾವು ವಾಸಿಸೋನೇ ಭೂಮಿ ಒಡೆಯ ಕಾನೂನು ತಂದೆವು. ಗೊಲ್ಲರಹಟ್ಟಿ, ತಾಂಡಾಗಳನ್ನು ನಾವು ರೆವಿನ್ಯೂ ಗ್ರಾಮ ಮಾಡಿದೆವು. ಈಗ ನಡೀತಿದ್ಯಾ ಅವೆಲ್ಲ, ಇಲ್ಲ. ಸಮಾಜ ಕಲ್ಯಾಣ ಇಲಾಖೆಯಡಿ ಖರ್ಚು ಮಾಡುವ ಹಣವೇ ಕಮ್ಮಿಯಾಗಿದೆ. ಹಿಂದುಳಿದ ವರ್ಗದವರಿಗೆ ಬಜೆಟ್ ನಲ್ಲಿ 2018ರಲ್ಲಿ ಕೊಟ್ಟಷ್ಟು ಅನುದಾನ ಕೊಟ್ಟಿಲ್ಲ. ಅಲ್ಪಸಂಖ್ಯಾತರು, ಮಹಿಳೆಯರಿಗೆ ಏನೂ ಕೊಟ್ಟಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಹಾಗಾಗಿ, ಮುಂದಿನ ಐದು ವರ್ಷದವರೆಗೆ 2002ರ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಮಾನದಂಡದಂತೆ ಆರ್ಥಿಕ ಶಿಸ್ತು ತರಬೇಕು. ಸಾಲವನ್ನು 25% ಒಳಗೆ ತನ್ನಿ. ತೆರಿಗೆಯೇತರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ತೆರಿಗೆ ಆದಾಯವನ್ನು ಹೆಚ್ಚಿಸಬೇಕು. ಕೇಂದ್ರ ತೆರಿಗೆಯ ರಾಜ್ಯ ಪಾಲು, ಕೇಂದ್ರದ ಅನುದಾನ ರಾಜ್ಯಕ್ಕೆ ಹೆಚ್ಚಿಗೆ ತರಲು ಪ್ರಯತ್ನ‌ ಪಡಬೇಕು. ಆಡಳಿತ ಸುಧರಾಣಾ ಆಯೋಗ ಶಿಫಾರಸ್ಸಿನಂತೆ ಅನಗತ್ಯ ವೆಚ್ಚ, ಅನಗತ್ಯ ಹುದ್ದೆ ಕಡಿತ ಮಾಡಬೇಕು. ದೆಹಲಿಯ ಕರ್ನಾಟಕ ಭವನದಲ್ಲಿ ಐದು ಜನ ಐಎಎಸ್, ಐಎಫ್​ಎಸ್ ಅಧಿಕಾರಿಗಳು ಇದ್ದಾರೆ. ನಮ್ಮ ಕಾಲದಲ್ಲಿ ಒಬ್ಬ ಅಧಿಕಾರಿ ಮಾತ್ರ ಇದ್ದರು. ಅನಗತ್ಯ ವೆಚ್ಚ ಮಾಡಬಾರದು. ಅವುಗಳನ್ನು ಕಡಿತ ಮಾಡಬೇಕು. ಇಲ್ಲವಾದರೆ ರಾಜ್ಯ ಕಷ್ಟಕ್ಕೆ ಸಿಲುಕುತ್ತದೆ ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details