ಬೆಂಗಳೂರು :ಐಎಎಸ್ ಅಧಿಕಾರಿ ಡಿ ಕೆ ರವಿಯವರು ದಕ್ಷ ಪ್ರಾಮಾಣಿಕ ಅಧಿಕಾರಿ ಎನ್ನುವಲ್ಲಿ ಸಂಶಯ ಇಲ್ಲ. ಇದರ ಜೊತೆಗೆ ಪ್ರಚಾರಪ್ರಿಯರು ಆಗಿದ್ದರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಹಿರಿಯ ಪತ್ರಕರ್ತ, ಲೇಖಕ ರಾಮಕೃಷ್ಣ ಉಪಾಧ್ಯ ಅವರು ಬರೆದಿರುವ ಐಎಎಸ್ ಅಧಿಕಾರಿ ಡಿ ಕೆ ರವಿಯವರ ಆತ್ಮಹತ್ಯೆ ಪ್ರಕರಣ ಸಂಬಂಧ ರಚಿಸಿರುವ 'ನಗ್ನ ಸತ್ಯ' ಹಾಗೂ 'ಲ್ಯಾಂಡ್, ಲಸ್ಟ್ ಅಂಡ್ ಆಡಿಯೋ ಟೇಪ್' ಎಂಬ ಕೃತಿಗಳನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಮರಳು ಮತ್ತು ಭೂ ಮಾಫಿಯಾ ವಿರುದ್ಧ ಹೋರಾಟ ಮಾಡಲು ಆರಂಭಿಸಿದರು. ಮಾಧ್ಯಮಗಳಿಗೆ ತಿಳಿಸಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿದ್ದರು. ಹೆಚ್ಚು ಪ್ರಚಾರ ಸಿಗಬೇಕೆಂದು ಬಯಸುತ್ತಿದ್ದರು. ಮಾಧ್ಯಮಗಳು ಇವರಿಗೆ ಹತ್ತಿರವಾಗಿದ್ದರಿಂದ ದೊಡ್ಡ ಪ್ರಚಾರ ಸಿಕ್ಕಿತು. ಜನಪ್ರಿಯತೆ ಉಳಿಸುವ ಪ್ರಯತ್ನವನ್ನು ಡಿ ಕೆ ರವಿ ಮಾಡಿದರು ಎಂದರು.
ಅವರನ್ನು ವರ್ಗಾವಣೆ ಮಾಡಿ ಎಂದು ನನಗೆ ಯಾರೂ ಒತ್ತಡ ಹೇರಲಿಲ್ಲ. ಆದರೆ, ಸಾಕಷ್ಟು ರಾಜಕಾರಣಿಗಳಿಗೆ ಅವರ ವಿರುದ್ಧ ಬೇಸರ ಇತ್ತು. ಆದರೆ, ಒಂದು ದಿನ ಅವರ ಮಾವ ಹನುಮಂತರಾಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನನ್ನ ಬಳಿ ಬಂದು ಮಗಳು ಬೆಂಗಳೂರಿನಲ್ಲಿದ್ದು, ಅಳಿಯ ಕೋಲಾರದಲ್ಲಿದ್ದಾರೆ. ಬದುಕು ತೊಂದರೆಯಾಗುತ್ತದೆ.
ಬೆಂಗಳೂರಿನಲ್ಲಿ ಎಲ್ಲಾದರೂ ಅವಕಾಶ ಮಾಡಿಕೊಡಿ ಎಂದು ಕೇಳಿದರು. ಇಲ್ಲಿ ಜಿಲ್ಲಾಧಿಕಾರಿ ಮಾಡಲು ಸಾಧ್ಯವಿಲ್ಲ. ಅವರನ್ನು ಆದಾಯ ತೆರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಲು ವರ್ಗಾವಣೆ ಮಾಡಿಸಿಕೊಟ್ಟೆ ಎಂದು ತಮ್ಮ ಅಧಿಕಾರಾವಧಿಯಲ್ಲಿ ನಡೆದ ಘಟನೆಗಳನ್ನು ತಿಳಿಸಿದರು.
ಲೇಖಕ ರಾಮಕೃಷ್ಣ ಉಪಾಧ್ಯ ಇಂತಹ ಸಾಕಷ್ಟು ಘಟನೆ ನೋಡಿದ್ದಾರೆ ಮತ್ತು ಬರೆದಿದ್ದಾರೆ. ಬಹಳಷ್ಟು ಅನುಭವ ಅವರಿಗಿದೆ. ಡಿ ಕೆ ರವಿ ಹೇಗೆ ಆತ್ಮಹತ್ಯೆ ಮಾಡಿಕೊಂಡರು ಎಂಬ ಬಗ್ಗೆ ಅನೇಕ ಮಾಹಿತಿ ಶೇಖರಿಸಿ, ಸತ್ಯವನ್ನ ಜನರ ಮುಂದೆ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಆ ವೇಳೆ ನಾವು ಮುಖ್ಯಮಂತ್ರಿಯಾಗಿದ್ದೆ, ವಿಧಾನಸಭೆ ಅಧಿವೇಶನ ನಡೆಯುತ್ತಿತ್ತು. ರವಿಯವರ ಆತ್ಮಹತ್ಯೆ ಬಿಜೆಪಿ ಮತ್ತು ಜೆಡಿಎಸ್ಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿತ್ತು.