ಕರ್ನಾಟಕ

karnataka

ETV Bharat / state

ಸೈಕಲ್ ಓಡಿಸುವುದು ಹೊಸದೇನುಲ್ಲ, ಆದ್ರೆ ತುಂಬಾ ದಿನಗಳ ನಂತ್ರ ಪ್ರಯತ್ನಿಸಿದ್ದೇನೆ: ಸಿದ್ದರಾಮಯ್ಯ - ಸಿದ್ದರಾಮಯ್ಯ ಸೈಕಲ್​ ನ್ಯೂಸ್​

ಬುಧವಾರ ಸಂಜೆ ಸಿದ್ದರಾಮಯ್ಯ ನಿವಾಸಕ್ಕೆ ಎರಡು ಸೈಕಲ್​ಗಳು ಆಗಮಿಸಿವೆ. ಇವುಗಳ ಮೇಲೆ ಅವರು ಸವಾರಿ ಮಾಡಿದ ವಿಡಿಯೋ ಟಿಕ್​ಟಾಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಸೈಕಲ್​ ಓಡಿಸೋದು ನನಗೇನು ಹೊಸದಲ್ಲ, ಆದ್ರೆ ತುಂಬಾ ದಿನಗಳ ನಂತರ ಪ್ರಯತ್ನಿಸಿದ್ದೇನೆ ಅಷ್ಟೇ ಎಂದಿದ್ದಾರೆ.

Siddaramaiah
ಸಿದ್ದರಾಮಯ್ಯ

By

Published : Jun 18, 2020, 6:47 PM IST

ಬೆಂಗಳೂರು: ಸೈಕಲ್ ಓಡಿಸಿದ್ದು ಹೊಸದೇನಲ್ಲ, ಹಿಂದೆಲ್ಲಾ ಸೈಕಲ್​ನಲ್ಲಿ ಓಡಾಡುತ್ತಿದ್ದೆ. ಆದರೆ ತುಂಬಾ ದಿನಗಳ ನಂತರ ಪ್ರಯತ್ನಿಸಿದ್ದರಿಂದ ಹೆಚ್ಚು ದೂರ ಓಡಿಸಲು ಸಾಧ್ಯವಾಗಲಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾವು ಸೈಕಲ್ ಸವಾರಿ ಮಾಡಿದ ವಿಡಿಯೋ ವೈರಲ್ ಆಗಿದ್ದರ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ನಮ್ಮ ಊರಿಗೆ ಸೈಕಲ್​ನಲ್ಲೇ ಹೋಗುತ್ತಿದ್ದೆ. ಮೈಸೂರಿನಿಂದ ನಮ್ಮೂರು ಒಟ್ಟು 23 ಕಿಲೋಮೀಟರ್ ದೂರ. ಅಷ್ಟು ದೂರ ಸೈಕಲ್​ನಲ್ಲಿ ಹೋಗುತ್ತಿದ್ದೆ. ಎಷ್ಟು ವರ್ಷಗಳಾಗಿತ್ತು ಸೈಕಲ್ ಓಡಿಸಿ. ನಿನ್ನೆ ಓಡಿಸಿದಾಗ ಸರಿಯಾಗಿ ಓಡಿಸಲಿಕ್ಕೆ ಆಗಲಿಲ್ಲ. ನಿಧಾನವಾಗಿ ನಿತ್ಯ ಓಡಿಸಬೇಕು ಎಂದುಕೊಂಡಿದ್ದೇನೆ. ಬೆಳಗಿನ ಹೊತ್ತು ವಾಕ್ ಮಾಡುತ್ತೇನೆ ಸಂಜೆ ಹೊತ್ತು ಸೈಕಲ್ ಓಡಿಸುವ ಉದ್ದೇಶ ಇದೆ ಎಂದರು.

ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬಹುತೇಕ ಎಲ್ಲರೂ ಸೈಕಲನ್ನು ಓಡಿಸುತ್ತಿದ್ದರು. ಹೀಗಾಗಿ ನಾನು ಆ ಸಂದರ್ಭದಲ್ಲಿ ಅಂತಹ ಗಮನ ಸೆಳೆಯುವ ವ್ಯಕ್ತಿಯೇನೂ ಆಗಿರಲಿಲ್ಲ. ಫಿಟ್ನೆಸ್​ಗೋಸ್ಕರ ಇದನ್ನ ತರಿಸಿಕೊಂಡಿದ್ದೇನೆ. ಹಾಗಂತ ಈಗ ಫಿಟ್ನೆಸ್ ಇಲ್ಲ ಅಂತೇನು ಅಲ್ಲ. ಹೆಚ್ಚುವರಿ ಫಿಟ್ನೆಸ್​ಗೋಸ್ಕರ ತರಿಸಿಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ರು.

ABOUT THE AUTHOR

...view details