ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಭರ್ಜರಿ ಶಾಪಿಂಗ್: ಖಾದಿ ಭಂಡಾರ್​ನಲ್ಲಿ 30 ಪಂಚೆ ಖರೀದಿ! - Siddaramaiah purchased khadi Panche

ಸಿದ್ದರಾಮಯ್ಯ ಅವರು ಅವೆನ್ಯೂ ರಸ್ತೆಯ ಖಾದಿ ಭಂಡಾರ್ ಮಳಿಗೆಗೆ ತೆರಳಿ ಒಟ್ಟು 30 ತಿರುಪುರ್ ಖಾದಿ ಪಂಚೆಗಳನ್ನು ಖರೀದಿಸಿದರು.

Siddaramaiah purchased 30 khadi Panche today
ಸಿದ್ದರಾಮಯ್ಯರ ಭರ್ಜರಿ ಪಂಚೆ ಶಾಪಿಂಗ್

By

Published : Jun 1, 2022, 5:21 PM IST

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನ ಅವೆನ್ಯೂ ರಸ್ತೆಯ ಖಾದಿ ಭಂಡಾರ್ ಮಳಿಗೆಗೆ ತೆರಳಿ ಒಟ್ಟು 30 ಪಂಚೆಗಳನ್ನು ಖರೀದಿಸಿದರು. ಬೆಂಗಳೂರಿನ ತಮ್ಮ ಅಧಿಕೃತ ನಿವಾಸದಿಂದ ಅವೆನ್ಯೂ ರಸ್ತೆಯಲ್ಲಿನ ಖಾದಿ‌ ಭಂಡಾರ್​ಗೆ ತೆರಳಿ ಒಟ್ಟು 30 ಖಾದಿ ಪಂಚೆ ಖರೀದಿ ಮಾಡಿದರು. ಪ್ರತಿ ಪಂಚೆಯ ಬೆಲೆ 650 ರೂ. ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯರ ಭರ್ಜರಿ ಪಂಚೆ ಶಾಪಿಂಗ್

ಖಾದಿ ಮಳಿಗೆಯಲ್ಲಿ ವಿವಿಧ ಪಂಚೆಗಳ ಬಗ್ಗೆ ಸಿದ್ದರಾಮಯ್ಯ ವಿಚಾರಿಸಿದರು. ವಿಶೇಷವಾಗಿ ಮೈಸೂರಿನ ತಿರುಪುರ್ ಖಾದಿ ಪಂಚೆ ಬಗ್ಗೆ ವಿಚಾರಿಸಿದರು. ತಾವು ಧರಿಸಿದ್ದ ಮೈಸೂರಿನ ತಿರುಪುರ್ ಖಾದಿ ಪಂಚೆ ತೋರಿಸಿ, ಇದು ಇದೆಯಾ ಎಂದು ಮಳಿಗೆ ಸಿಬ್ಬಂದಿಯನ್ನು ಕೇಳಿದ್ದಾರೆ. ಆಗ ಸಿಬ್ಬಂದಿ ತಿರುಪುರ್ ಖಾದಿ ಪಂಚೆ ತೋರಿಸಿದ್ದು, ಸಿದ್ದರಾಮಯ್ಯ ಅವರು ಒಟ್ಟು 30 ತಿರುಪುರ್ ಖಾದಿ ಪಂಚೆಯನ್ನು ಖರೀದಿಸಿದರು.

ಇದನ್ನೂ ಓದಿ:ಪಠ್ಯ ವಿಚಾರದಲ್ಲಿ ಸರ್ಕಾರ ಕಣ್ಮುಚ್ಚಿ ಕುಳಿತಿದೆಯೇ.. ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಕಿಡಿ

ABOUT THE AUTHOR

...view details