ಕರ್ನಾಟಕ

karnataka

ETV Bharat / state

ಮೋದಿ ಸಾಧನೆಯನ್ನು ಬಿಜೆಪಿ ನಾಯಕರು ಖಾಲಿ ಕೊಡ ಹಿಡಿದು ಆಚರಿಸುತ್ತಿದ್ದಾರೆ: ಸಿದ್ದರಾಮಯ್ಯ ಲೇವಡಿ - ಸಿದ್ದರಾಮಯ್ಯ ಮೋದಿ ವಿರುದ್ಧ ವಾಗ್ದಾಳಿ

ದಿನದಿಂದ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕೆಳಮುಖವಾಗಿ ಸಾಗುತ್ತಿದೆ. ಆದರೆ ಎಲ್ಲಾ ಬಿಜೆಪಿ ನಾಯಕರು ಇವರು ಸಾಧಕರು ಎಂದು ಕೊಂಡಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

siddaramaiah
siddaramaiah

By

Published : May 31, 2021, 5:36 PM IST

Updated : May 31, 2021, 10:20 PM IST

ಬೆಂಗಳೂರು: ಪ್ರಧಾನಿ‌ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಏಳು ವರ್ಷದ ಸಾಧನೆಯನ್ನು ಬಿಜೆಪಿ ನಾಯಕರು ಖಾಲಿ ಕೊಡ ಹಿಡಿದು ಆಚರಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬೆಂಗಳೂರಿನ ಶಿವಾನಂದ ವೃತ್ತ ಸಮೀಪವಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದಿನದಿಂದ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕೆಳಮುಖವಾಗಿ ಸಾಗುತ್ತಿದೆ. ಆದರೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಇವರು ಸಾಧಕರು ಎಂದು ಕೊಂಡಾಡುತ್ತಿದ್ದಾರೆ. ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಗೆ ನೊಂದವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಶಾಪ ಹಾಕುತ್ತಿದ್ದಾರೆ ಎಂದರು.

ದೇಶ 70 ವರ್ಷ ಹಿಂದಕ್ಕೆ..

ಕೆಟ್ಟ ಕಾನೂನು ಜಾರಿ, ರೈತ ವಿರೋಧಿ ಕಾಯ್ದೆ ತಿದ್ದುಪಡಿ, ಇವರು ಅಧಿಕಾರಕ್ಕೆ ಬಂದ ನಂತರ ಹಲವು ಕಾರ್ಖಾನೆಗಳನ್ನು ಮುಚ್ಚಿಸಿದ್ದಾರೆ. 70 ಕ್ಕೂ‌ಹೆಚ್ವು ಸಾರ್ವಜನಿಕ ವಲಯದ ಕಾರ್ಖಾನೆ ಹಾಗೂ ಸಂಸ್ಥೆಗಳನ್ನು ಮುಚ್ಚಿಸಿದ್ದಾರೆ. ದೇಶ ಕಳೆದ ಏಳು‌ ವರ್ಷ ಅಭಿವೃದ್ಧಿಯಲ್ಲಿ ಮುಂದೆ ಹೋಗುವ ಬದಲು ಹಿಂದಕ್ಕೆ‌ ಹೋಗಿದೆ. ನಿರುದ್ಯೋಗ ಸಮಸ್ಯೆ, ಸಾಲ ಹೆಚ್ವಳ, ಜಿಡಿಪಿ ಕುಸಿತ ಎಲ್ಲವೂ‌ ಹಿನ್ನಡೆ ತೋರಿಸುತ್ತಿದೆ. ಮೋದಿ ಆಡಳಿತ ಅಭಿವೃದ್ಧಿ ಪಥದಲ್ಲಿ ಸಾಗಿದರೆ ಇವೆಲ್ಲವೂ ಪ್ರಗತಿ ಕಾಣಬೇಕಿತ್ತು. ಸಬ್ ಕಾ ವಿಕಾಸ್ ಆಗಿಲ್ಲ. ಬಡ ಸಾಮಾನ್ಯ ವರ್ಗದ ಜನರ ವಿಕಾಸ ಆಗಿಲ್ಲ. ಇವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಇದನ್ನು ನಾನಲ್ಲ, ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಅಂಬಾನಿ ಅದಾನಿ ಹಾಗೂ ಕೆಲ ಕಾರ್ಪೋರೇಟ್ ಕಂಪನಿಗಳ ವಿಕಾಸ ಆಗಿದೆ. ಗುಜರಾತ್ ಒಂದಿಷ್ಟು ಪ್ರಗತಿ ಕಂಡಿದೆ. 23 ಕೋಟಿ ದಿ ದೇಶದಲ್ಲಿ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. 43 ಕೋಟಿ ಮಂದಿ ಬಡತನ ರೇಖೆ ವ್ಯಾಪ್ತಿಗೆ ಬಂದಿದ್ದಾರೆ. ಇದು ಯಾರ ವಿಕಾಸ ಎಂದು ಪ್ರಶ್ನಿಸಿದರು.

ಕೋವಿಡ್​ ನಿವಾರಣೆಯಲ್ಲಿ ಕೇಂದ್ರ ಸಂಪೂರ್ಣ ವಿಫಲ

ದೇಶದ ಜನ ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ಆಮ್ಲಜನಕ ವೆಂಟಿಲೇಟರ್ ಲಸಿಕೆ ಸಿಗದೇ ತೊಂದರೆಗೆ ಒಳಗಾಗಿದ್ದಾರೆ. ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಎರಡನೇ ಅಲೆ ಬರುತ್ತದೆ ಎಂಬ ಮುನ್ನೆಚ್ಚರಿಕೆ ಇದ್ದರೂ ಅದಕ್ಕೆ ಸಜ್ಜಾಗುವ ಕೇಂದ್ರ ಸರ್ಕಾರ ವಿಫಲವಾಗಿದೆ. ರಾಜ್ಯ ಸರ್ಕಾರಗಳಿಗೆ ಯಾವುದೇ ಸಹಕಾರ ನೀಡಿಲ್ಲ. ಹೀಗಾಗಿ ಎರಡನೇ ಅಲೆ ಎದುರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ವಿಫಲವಾಗಿದ್ದಾರೆ. ನೋಟು ಅಮಾನ್ಯೀಕರಣ ಪ್ರಧಾನಿ ಮಾಡಿದ ಮೊಟ್ಟ ಮೊದಲ ವಿಪತ್ತು ಆಗಿದೆ. ಜಿಎಸ್​ಟಿ ವಿರೋಧಿಸಿದ್ದ ಸರ್ಕಾರ ಅದನ್ನು ಜಾರಿಗೆ ತರುವ ಕಾರ್ಯ ಮಾಡಿ ಕೈಗಾರಿಕೆ, ವ್ಯಾಪಾರ ಹಾಗೂ ಉದ್ದಿಮೆಯನ್ನ ಸರ್ವನಾಶ ಮಾಡಿತ್ತು. ಕೊರೊನಾ ವಿರುದ್ಧ ಗೆದ್ದಿದ್ದೇವೆ ಎಂದು ಹೇಳಿಕೊಂಡಿರುವುದು ಮೂರನೇ ವಿಪತ್ತು ಆಗಿದೆ. ಈ ಮಹಾಮಾರಿಯನ್ನು ಲಕ್ಷಾಂತರ ಮಂದಿ ಸತ್ತಿದ್ದಾರೆ ಅದಕ್ಕೆ ಮೋದಿ ಸರ್ಕಾರವೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಎಸ್​ವೈ ಆಡಳಿತಕ್ಕೆ ಬಂದ ಮೇಲೆ ಹಳ್ಳಕ್ಕೆ ಬಿದ್ದ ಆರ್ಥಿಕತೆ

ರಾಜ್ಯದ ಇತಿಹಾಸದಲ್ಲಿ ಈ ಪ್ರಮಾಣದ ಆರ್ಥಿಕ ಕೊರತೆ ಇದೆ ಎಂದೂ ಎದುರಾಗಿರಲಿಲ್ಲ. ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಆರ್ಥಿಕತೆ ಸಂಪೂರ್ಣ ಕುಸಿತ ಕಂಡಿದೆ. ವಿತ್ತೀಯ ಕೊರತೆ 20 ಸಾವಿರ ಕೋಟಿ ಯಷ್ಟಾಗಿದೆ. ಇದು ಇತಿಹಾಸದಲ್ಲೇ ಮೊದಲು. ಮಾತೆತ್ತಿದರೆ ಸಿದ್ದರಾಮಯ್ಯ ಸಾಲ ಮಾಡಿದರು ಎನ್ನುತ್ತಾರೆ. ಸಂಬಳ ನೀಡಲು ನಾನು ಯಾವುದೇ ಸಂದರ್ಭದಲ್ಲಿಯೂ ಸಾಲ ಮಾಡಿಲ್ಲ. 1ಲಕ್ಷ 25 ಸಾವಿರ ಕೋಟಿ ಮೊತ್ತದ ಸಾಲವನ್ನು ಮಾಡಿದ್ದೆ. ಅದು ಅಭಿವೃದ್ಧಿ ಕೆಲಸಕ್ಕಾಗಿ ಮಾತ್ರ ಎಂದು ವಿವರಿಸಿದರು. ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ. ಮೂರು ಹಂತದಲ್ಲಿ ಒಟ್ಟು 2 ಲಕ್ಷ ಕೋಟಿ ಮೊತ್ತದ ಸಾಲ ಮಾಡಿದ್ದಾರೆ. ಯಾವುದೇ ಮೂಲದಿಂದ ಬೇಕಾದರೂ ಇದರ ಮಾಹಿತಿ ಪಡೆಯಬಹುದಾಗಿದೆ ಎಂದರು.

70 ಇದ್ದದ್ದು 100ಕ್ಕೆ ಏರಿಕೆ ಆದ ಪೆಟ್ರೋಲ್ ದರ

ಪೆಟ್ರೋಲ್ ಬೆಲೆ ಏರಿಕೆ ಆಗಿದೆ , 70 ರೂ ಇದ್ದದ್ದು 100 ರೂ. ತಲುಪಿದೆ. ಮೇ ತಿಂಗಳಲ್ಲಿ ಒಟ್ಟು 14 ಬಾರಿ ಇಂಧನ ಬೆಲೆ ಏರಿಸಲಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದಾಗ 430 ರೂ. ಇದ್ದ ಅಡುಗೆ ಅನಿಲ ಬೆಲೆ 840 ರೂ. ಗಡಿ ದಾಟಿದೆ. ಜಿಡಿಪಿ ನೆಲಕಚ್ಚಿದೆ. ಶೇ.7.14 ಇದ್ದದ್ದು -2.13 ಕ್ಕೆ ತಲುಪಿದೆ. 100 ರೂ. ಆದಾಯ ಬಂದರೆ 40 ರೂ. ಬಡ್ಡಿ ಕಟ್ಟುವ ಸ್ಥಿತಿ ಇದೆ. ಸಾಲ ಹಿಂದೆಯೂ ಇತ್ತು. ಆದರೆ ಈಗ ಸಾಲ ತೀರಿಸುವ ಕಾರ್ಯ ಆಗುತ್ತಿಲ್ಲ. 2.42 ಲಕ್ಷ ಕೋಟಿ ಇದ್ದ ಸಾಲ 4.50 ಲಕ್ಷ ಕೋಟಿ ರೂ. ತಲುಪಿದೆ. ತಲಾ ಆದಾಯ ಸಹ ಕಡಿಮೆ ಆಗಿದೆ. ಬಾಂಗ್ಲಾದೇಶ ನಮ್ಮನ್ನ ಮೀರಿ ಮುಂದೆ ಹೋಗಿದೆ. ನಿರುದ್ಯೋಗ ಶೇ. 4 ರಿಂದ ಶೇ.11 ಕ್ಕೆ ತಲುಪಿದೆ. ಅಂಬಾನಿ ಆಸ್ತಿ ಮೊತ್ತ 7.1 ಬಿಲಿಯನ್ ಡಾಲರ್ ನಿಂದ 67.7 ಬಿಲಿಯನ್ ಡಾಲರ್ ಗೆ ತಲುಪಿದೆ. 50 ಮಿಲಿಯನ್ ಟನ್ ತೊಗರಿಬೇಳೆ ದೇಶದ ಜನ ಬಳಸುತ್ತಾರೆ. ಅದಾನಿಗೆ ಮಾರಲು ಬಿಟ್ಟರೆ, 30 ರೂ. ಹೆಚ್ಚಿಸಿದರೆ ಜನರ ಬದುಕು ಹೇಗೆ? ಒಂದು ಕುಟುಂಬ ಹಿಂದೆ 5000 ರೂಪಾಯಿಗೆ ತಮ್ಮ ತಿಂಗಳ ಜೀವನ ನಡೆಸುತ್ತಿದ್ದರು. ಆದರೆ ಈಗ ಅದೇ ಜೀವನ ನಿರ್ವಹಣೆ 11 ಸಾವಿರ ರೂಪಾಯಿಗೆ ತಲುಪಿದೆ. ಇದಕ್ಕಾಗಿ ಒಡವೆ ಮಾರಿ ಹಾಗೂ ಕೂಡಿಟ್ಟ ಹಣ ಬಳಸಿಕೊಂಡು ಬದುಕುವ ಸ್ಥಿತಿ ಎದುರಾಗಿದೆ ಎಂದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಕೇಂದ್ರ ಸರ್ಕಾರಕ್ಕೆ ಕೊರೊನಾ ನಿಯಂತ್ರಣಕ್ಕಿಂತ ಚುನಾವಣೆ ಮಾಡುವುದೇ ಮುಖ್ಯವಾಗಿದೆ. ಮಹಾಮಾರಿ ವ್ಯಾಪಿಸಲು ಚುನಾವಣಾ ಆಯೋಗ, ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕಾರಣ. ಚುನಾವಣೆ ಹಾಗೂ ಕುಂಭ ಮೇಳ ಆಯೋಜಿಸುವ ಅಗತ್ಯವೇನಿತ್ತು. ನರೇಂದ್ರ ಮೋದಿ ಅಧಿಕಾರದ ಏಳು ವರ್ಷ ಪೂರ್ಣಗೊಳಿಸಿದ್ದನ್ನು ಸಂಭ್ರಮಿಸುವ ಅಗತ್ಯವಿರಲಿಲ್ಲ. ಸೇವಾ ದಿನ ಎಂದು ಆಚರಿಸುವುದು ಅರ್ಥಹೀನ. ಇದು ಸ್ವಯಂ ಸೇವಾ ದಿನ ಎನ್ನಬಹುದು. ದೇಶ ಆರ್ಥಿಕವಾಗಿ 70 ವರ್ಷ ಹಿಂದಕ್ಕೆ ಹೋಗಿದೆ. ವಸ್ತುಸ್ಥಿತಿಯನ್ನು ನಾನು ಜನರ ಮುಂದಿಟ್ಟಿದ್ದೇನೆ ಎಂದರು.

ಎಚ್ಚರಿಕೆ ವಹಿಸುವುದು ಉತ್ತಮ

ಲಾಕ್​ಡೌನ್​ ಮುಂದುವರಿಕೆಗೆ ಸರ್ಕಾರ ಮುಂದಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿ, ತಪಾಸಣೆ ಪಾಸಿಟಿವಿಟಿ ದರ ಶೇ.5 ರ ಒಳಗೆ ಬರುವವರೆಗೂ ಎಚ್ಚರಿಕೆ ವಹಿಸುವುದು ಒಳ್ಳೆಯದು. ಈಗ ಶೇ.9 ರಷ್ಟಿದೆ. ತಜ್ಞರ ಅಭಿಪ್ರಾಯವನ್ನು ಪಾಲಿಸುವುದು ಸೂಕ್ತ. ಪ್ರತಿಯೊಬ್ಬರಿಗೂ ವ್ಯಾಕ್ಸಿನೇಷನ್ ಮಾಡಬೇಕು. ಕೊರೊನಾ ವಿಮುಕ್ತ ವಾಗಬೇಕಾದರೆ ಇದೊಂದೇ ಮಾರ್ಗ. ಲಾಕ್​ಡೌನ್ ಹಂತಹಂತವಾಗಿ ನಿರಾಳವಾಗುವುದು ಉತ್ತಮ. ದೇಶದಲ್ಲಿ ಇನ್ನೂ 108 ಕೋಟಿ ಮಂದಿಗೆ ವ್ಯಾಕ್ಸಿನೇಷನ್ ಆಗಬೇಕು. 2 ಹಂತದ ವ್ಯಾಕ್ಸಿನೇಷನ್ ಗೆ 216 ಕೋಟಿ ಎಓಸ್ ವ್ಯಾಕ್ಸಿನೇಷನ್‌ ಅಗತ್ಯವಿದೆ. ಯಾವುದೇ ವಿಧದ ಲಸಿಕೆ ಆದರೂ ಸರಿ. ಪ್ರತಿಯೊಬ್ಬರಿಗೂ ಲಸಿಕೆ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

Last Updated : May 31, 2021, 10:20 PM IST

ABOUT THE AUTHOR

...view details