ಕರ್ನಾಟಕ

karnataka

ETV Bharat / state

ಬಿಜೆಪಿ, ಅನರ್ಹ ಶಾಸಕರು ಇಬ್ಬರೂ ಸೇರಿ ನಾಟಕ ಮಾಡಿದ್ರು: ಸಿದ್ದರಾಮಯ್ಯ - ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಕೆಪಿಸಿಸಿ ಕಚೇರಿಯಲ್ಲಿ ಜವಾಹರ​ ಲಾಲ್​ ನೆಹರೂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನೆಹರೂ ಅವರ ಗುಣಗಾನ ಮಾಡಿ, ಅನರ್ಹ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ

By

Published : Nov 14, 2019, 12:43 PM IST

ಬೆಂಗಳೂರು:ಅನರ್ಹರು, ಬಿಜೆಪಿಯವರು ಇಷ್ಟು ದಿನ ನಾಟಕ ಆಡಿದ್ರು. ಇವರೆಲ್ಲ ಅನರ್ಹರಾಗಿಯೇ ಚುನಾವಣೆಗೆ ಹೋಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ಕೆಪಿಸಿಸಿ ಕಚೇರಿಯಲ್ಲಿ ಜವಾಹರ​ ಲಾಲ್​ ನೆಹರೂ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಅನರ್ಹ ಎಂದು ಹಣೆಪಟ್ಟಿ ಇಟ್ಟುಕೊಂಡು ಮತ ಕೇಳಬೇಕು. ಅನರ್ಹರು ಅಂತ ಕಳಂಕ ಹೊತ್ತುಕೊಂಡು ಹೋಗಬೇಕು. ಕಳಂಕ ಹೊತ್ತವರನ್ನ ಜನ ಗೆಲ್ಲಿಸಲ್ಲ ಎಂದರು.

ಸ್ಥಳೀಯ ಸಂಸ್ಥೆಗಳ ಫಲಿತಾಂಶದಲ್ಲಿ ಕೂಡ ನಮಗೆ ಮೇಲುಗೈ ಸಿಗುತ್ತಿದೆ. ಸಂಜೆಯ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಇನ್ನೂ ಪೂರ್ಣ ಫಲಿತಾಂಶ ಬಂದಿಲ್ಲ. ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದರು.

ಮಕ್ಕಳೆಂದರೆ ಪ್ರೀತಿ:
ಜವಾಹರ ಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಮಕ್ಕಳೇ ಭವಿಷ್ಯದ ಪ್ರಜೆಗಳು, ರಾಷ್ಟ್ರದ ಸಂಪತ್ತು. ಮುಂದಿನ ದೇಶದ ಆಗು ಹೋಗುಗಳಲ್ಲಿ ಭಾಗವಹಿಸುವ ಜನ ಎಂದು ನಂಬಿದ್ದರು. ಅದಕ್ಕೆ ಅವರನ್ನ ಚಾಚಾ ನೆಹರೂ ಎಂದು ಕರೆಯಲಾಗುತ್ತಿತ್ತು. ಒಬ್ಬ ಅಪ್ರತಿಮ ನಾಯಕ, ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಡಿದ ಅನೇಕ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಇವರೂ ಒಬ್ಬರು. ಇವರಂತ ಹಲವರ ಪರಿಶ್ರಮದಿಂದ ನಾವು ಸ್ವಾತಂತ್ರ್ಯ ಗಳಿಸಿದ್ದೇವೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಹಾಗೂ ಸಂವಿಧಾನ ಬಂದಿದ್ದರಿಂದಲೇ ಮೋದಿ ಪ್ರಧಾನಮಂತ್ರಿಯಾಗಿದ್ದು, ನಾನು ಮುಖ್ಯಮಂತ್ರಿಯಾಗಿದ್ದು. ಅನೇಕ ಮಂದಿ ಎಂಎಲ್ಎ, ಮಂತ್ರಿ ಹಾಗೂ ಮುಖ್ಯಮಂತ್ರಿಗಳಾಗಿದ್ದಾರೆ. ನಮ್ಮ ಸಂವಿಧಾನ ಹಾಗೂ ಹೋರಾಟಗಾರರ ಫಲ ಇದು ಎಂದು ಹೇಳಬಯಸುತ್ತೇನೆ. ಎಲ್ಲ ಹೋರಾಟಗಾರರನ್ನು ಇದಕ್ಕಾಗಿ ನಾನು ಸ್ಮರಿಸಬೇಕಾಗುತ್ತದೆ ಹಾಗೂ ಗೌರವ ಸಲ್ಲಿಸಬೇಕಾಗುತ್ತದೆ ಎಂದರು.

ನೆಹರೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಸಿಎಂ

ಇತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜವಹರ ಲಾಲ್ ನೆಹರೂರವರ 130ನೇ ವರ್ಷದ ಜನ್ಮ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ನೆಹರೂ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತಿತರ ನಾಯಕರು ಹಾಜರಿದ್ದರು.

ABOUT THE AUTHOR

...view details